ಆಲ್ ಇಂಡಿಯಾ ಕ್ರಿಶ್ಚಿಯನ್ ಕಣನ್ಸಿಲ್ ಸಂಚಾಲಕ ಆ ನಂದ ಕುಮಾರ್ ನಿಧನ: ಸಂತಾಪ

Posted: ಫೆಬ್ರವರಿ 7, 2014 in Uncategorized

ಉಡುಪಿ : ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಸದಸ್ಯರೂ, ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್ ನ (ಎಐಸಿಸಿ) ಸಂಚಾಲಕರೂ ಆಗಿ, ಸೌಹಾರ್ದತೆ ಮತ್ತು ಮಾನವ ಹಕ್ಕುಗಳಿಗೆ ಹೋರಾಟ ನಡೆಸುತ್ತಿದ್ದ ಆನಂದ ಕುಮಾರ್ ಅವರು ಫೆ.5 ರಂದು ಬೆಂಗಳೂರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮತಾಂಧ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ವೇದಿಕೆಯ ಜೊತೆ ಗುರುತಿಸಿಕೊಂಡಿದ್ದ ಆನಂದ ಕುಮಾರ್ ಅವರ ನಿಧನ ಕರ್ನಾಟಕದ ಸೌಹಾರ್ದ ಪರಂಪರೆ ಮತ್ತು ಮಾನವ ಹಕ್ಕಿನ ಘನತೆಯ ಉಳಿಯುವಿಕೆಗೆ ತುಂಬಲಾರದ ನಷ್ಟ ಉಂಟು ಮಾಡಿದಂತಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದಿ ವೇದಿಕೆ ತಿಳಿಸಿದೆ.

ಆನಂದ ಕುಮಾರ್ ಅವರು ನಡೆಸುತ್ತಿದ್ದ ಸತ್ಯಶೋಧನೆ, ವಿವಿಧ ಹಲ್ಲೆಗಳ ವಿರುದ್ಧ ನಡೆಸಿದ ಹೋರಾಟಗಳು ದಲಿತ ಮತ್ತು ಪ್ರಾಟಿಸ್ಟೆಂಟ್ ವರ್ಗಗಳಲ್ಲಿ ಧೈರ್ಯ ತುಂಬುತ್ತಿದ್ದು, ಅವರ ಸೇವೆ ಅಪಾರ ಎಂಬುದಾಗಿ ಉಡುಪಿ ಜಿಲ್ಲಾ ಘಟಕ ತುರ್ತಾಗಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಕೆ.ಫಣಿರಾಜ್ ಸಂತಾಪ ವ್ಯಕ್ತಪಡಿಸಿದರು.

ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟದ ಉಡುಪಿ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಶಾಂತ್ ಜತ್ತನ್ನ, ಕಾರ್ಯದರ್ಶಿ ಪ್ರೊ.ನೇರಿ ಕರ್ನೇಲಿಯೋ, ನಿಕಟಪೂರ್ವಾಧ್ಯಕ್ಷ ಲೂವಿಸ್ ಲೋಬೋ, ಕ.ಕೋ.ಸೌ.ವೇದಿಕೆಯ ಕಾರ್ಯದರ್ಶಿ ಡಿ.ಎಸ್.ಬೆಂಗ್ರೆ, ಕ.ದ.ಸಂ.ಸ.ಜಿಲ್ಲಾ ಸಂಚಾಲಕ ಜಯನ್ ಮಲ್ಪೆ, ಕೆ.ಶ್ರೀಧರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s