ರಿಕ್ಷಾ ರನ್ನಿಂಗ್ ದರ ಏರಿಸಲು ಚಾಲಕರ-ಮಾಲಕರ ಒತ್ ತಾಯ

Posted: February 8, 2014 in Uncategorized

ಉಡುಪಿ: ಇತ್ತೀಚೆಗಿನ ದಿನಗಳಲ್ಲಿ ಇಂಧನ, ಪೆಟ್ರೋಲ್ ಗ್ಯಾಸ್, ರಿಕ್ಷಾ ಬಿಡಿ ಭಾಗಗಳು, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ರಿಕ್ಷಾ ಚಾಲಕರು ನೆಮ್ಮದಿಯಿಂದ ಬದುಕು ಸಾಗಿಸಲು ಸಂಕಷ್ಟ ಪಡುವಂತಾಗಿದೆ. ಆದುದರಿಂದ ರಿಕ್ಷಾ ರನ್ನಿಂಗ್ ಕಿ.ಮೀ. ದರವನ್ನು 15 ರು. ನಿಂದ 16 ರು. ಗೆ ಏರಿಸಬೇಕು ಎಂದು ಉಡುಪಿ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆಂದು ಶಾರದಾ ಅಟೋ ಯೂನಿಯನ್ ಅಧ್ಯಕ್ಷರಾದ ಬಿ.ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಫೆ. 7 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಅವರು
ಮಾತನಾಡುತ್ತಿದ್ದರು.

2012ರ ಫೆಬ್ರವರಿ 16ರಂದು ಜಿಲ್ಲಡಳಿತ ಕನಿಷ್ಟ ಮೀಟರ್ ದರ 20 ರು. ನಿಗದಿಮಾಡಿತ್ತು. ಆಗ ಪೆಟ್ರೋಲ್ ದರ 52 ರು. ಮತ್ತು ಗ್ಯಾಸ್ ದರ 42 ರು. ಇತ್ತು. ಈಗ ಪೆಟ್ರೋಲ್ ದರ 78 ರು. ಮತ್ತು ಗ್ಯಾಸ್ ದರ 62 ರು. ಆಗಿದೆ. ಇದನ್ನೆಲ್ಲಾ ಪರಿಗಣಿಸಿಯೇ ಜಿಲ್ಲಾಡಳಿತ 2014ರ ಜನವರಿ 23 ರಂದು ಅಟೋ ಮೀಟರ್ ದರ ಕನಿಷ್ಟ ಮೊತ್ತವನ್ನು 25 ರು. ಮತ್ತು ರನ್ನಿಂಗ್ ಕಿ.ಮೀ.ಗೆ 15 ರು. ನಿಗದಿ ಮಾಡಿದೆ. ಈಗ ರಿಕ್ಷಾ ಚಾಲಕರು ಹಾಗೂ ಮಾಲಕರು ರನ್ನಿಂಗ್ ಕಿ.ಮೀ.ದರವನ್ನು 16 ರು. ಮಾಡಬೇಕೆಂದು ಆಗ್ರಹಿಸುತ್ತಿದೆ ಎಂದು ಸುಧಾಕರ ಶೆಟ್ಟಿ ತಿಳಿಸಿದರು.

ಈ ಸಂಬಂಧ ಜ.28 ರಂದು ಶಾರದಾ ಅಟೋ ಯೂನಿಯನ್, ಉಡುಪಿ ತಾಲೂಕು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಗಳ ಒಕ್ಕೂಟ ಸಮಿತಿ, ಮಣಿಪಾಲ ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಕುಂದಾಪುರ ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಜಯಕರ್ನಾಟಕ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಹಾಗೂ ಉಡುಪಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಜಂಟಿಯಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ ಎಂದು ಶೆಟ್ಟಿ ವಿವರ ನೀಡಿದರು.

ವಿವಿಧ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಪ್ರಮುಖರಾದ ಮಹೇಶ್ ಠಾಕೂರ್, ಸಂಜೀವ ಪೂಜಾರಿ, ಸಂತೋಷ್ ಕಾರ್ಕಳ, ಮಣಿಕಂಠ, ಸುರೇಶ್ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s