ಸರಕಾರದ ಯೋಜನೆಗಳಿಂದ ಬುಡಕಟ್ಟು ಜನರ ಬದುಕು ಅತಂ ತ್ರ: ಸುಶೀಲಾ ನಾಡಾ

Posted: ಫೆಬ್ರವರಿ 9, 2014 in Uncategorized

ಉಡುಪಿ: ಸರಕಾರದ ವಿವಿಧ ಜನವಿರೋಧಿ ಯೋಜನೆಗಳಿಂದಾಗಿ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಜನರ ಬದುಕು ನರಕವಾಗಿ ಹೋಗುತ್ತಿದೆ. ಅನೇಕ ಹೆಸರುಗಳಲ್ಲಿ ಕಾರ್ಯಕ್ರಮಗಳನ್ನು ಜ್ಯಾರಿಗೊಳಿಸಿ ಅರಣ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ, ಆದರೆ
ಒಕ್ಕಲೆಬ್ಬಿಸಲ್ಪಟ್ಟವರಿಗೆ ಸರಿಯಾದ ಪುನರ್ವಸತಿ ವ್ಯವಸ್ಥೆ
ಕಲ್ಪಿಸಿಕೊಡಲಾಗುತ್ತಿಲ್ಲ. ಉದ್ಯೋಗದ ಮಾತೇ ಇಲ್ಲ. ಇದೆಲ್ಲದರಿಂದಾಗಿ ಬುಡಕಟ್ಟು ಜನರು ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕೊರಗ ಸಮುದಾಯದ ನಾಯಕಿ ಸುಶೀಲಾ ಕೊರಗ ನಾಡಾ ಅವರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬುಡಕಟ್ಟು ಸಮುದಾಯಗಳ ಉಳಿವಿಗಾಗಿ ನಮ್ಮ ನಡೆ’ ಎಂಬ ಕಾಲ್ನಡಿಗೆ ಜಾಥಾ 11ನೇ ದಿನವಾದ ಫೆ. 7 ರಂದು ಉಡುಪಿ ಪ್ರವೇಶಿಸಿದಾಗ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಅರಣ್ಯ ಮೂಲ ನಿವಾಸಿಗಳಿಗೆ ಇನ್ನೂ ಸಹ ಹಕ್ಕುಪತ್ರ ನೀಡಲಾಗುತ್ತಿಲ್ಲ. 2006ರ ಕಾನೂನು ಕಾಗದದಲ್ಲಿಯೇ ಉಳಿದುಕೊಂಡಿದೆ. ಕಾಫಿ, ರಬ್ಬರ್ ಎಸ್ಟೇಟ್ ಗಳಿಗಾಗಿ ಸಾವಿರಾರು ಎಕರೆ ಅರಣ್ಯ ಒತ್ತುವರಿಯಾಗುತ್ತಿದೆ. ಬದುಕಿಗಾಗಿ ನೆಲ ಕೇಳುವ ಬುಡಕಟ್ಟು ಜನರಿಗೆ 10 ಎಕ್ರೆ ಭೂಮಿ ಕೊಡಲು ಮಾತ್ರ ಸರಕಾರಕ್ಕೆ ಸಾಧ್ಯವಾಗದಿರುವುದು ವಿಷಾದನೀಯ ಎಂದು ಸುಶೀಲಾ ಖೇದ ವ್ಯಕ್ತಪಡಿಸಿದರು.

ಗಿರಿಜನ ಆಶ್ರಮ ಶಾಲೆಗಳು ಗಂಜಿ ಕೇಂದ್ರಗಳಾಗಿವೆ. ಅವ್ಯವಸ್ತೆಗಳ ಆಗರವಾಗಿವೆ. ಗಿರಿಜನ ಮಕ್ಕಳು ಹತ್ತನೇ ಕ್ಲಾಸ್ ಪಾಸ್ ಆದರೇನೆ ದೊಡ್ಡದಾಗಿದೆ. ಗುಣಮಟ್ಟದ ಶಿಕ್ಷಣ ಇಲ್ಲದಿರುವುದು, ಹತ್ತನೇ ಕ್ಲಾಸ್ ಪಾಸ್ ಆದವರು ಶಿಕ್ಷಕರಾಗಿರುವುದು, ಸಿಬ್ಬಂದಿಗಳ ಕೊರತೆ, ಇರುವ ಸಿಬ್ಬಂದಿಗಳಿಗೆ ಗಿರಿಜನ ಮಕ್ಕಳ ಮೇಲೆ ಕಾಳಜಿ ಇಲ್ಲದಿರುವುದು ಇತ್ಯಾದಿಗಳೇ ಇದಕ್ಕೆ ಕಾರಣವೆಂದು ಸುಶೀಲಾ ನಾಡಾ ತಿಳಿಸಿದರು.

12 ಬುಡಕಟ್ಟು ಸಮುದಾಯದ ಜನರು ವಿವಿಧ ಬೇಡಿಕೆ ಮುಂದಿಟ್ಟು ಈ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಆದರೆ ನಾವು ಮಂಡಿಸುತ್ತಿರುವ ಬೇಡಿಕೆಗಳು 51 ಸಮುದಾಯಗಳಿಗೂ ಅನ್ವಯವಾಗಲಿದೆ ಎಂದು ಕೊರಗ ಸಮುದಾಯದ ಮುಖಂಡೆ ಗೌರಿ ಕೆಂಜೂರು ಹೇಳಿದರು.

ಹಿರಿಯ ಚಿಂತಕ ಜಿ.ರಾಜಶೇಖರ್, ಜಿ.ಪಂ.ಅಧ್ಯಕ್ಷ ಉಪೇಂದ್ರ ನಾಯಕ್, ಐಟಿಡಿಪಿ ಅಧಿಕಾರಿ ಉದಯ ಶೆಟ್ಟಿ, ಕೊರಗ ಸಂಘಟನೆಯ ನಾಯಕಿ ಸುಮತಿ ಕಾಸರಗೋಡು, ಶಶಿಕಲಾ ಸಚ್ಚೆರಿಪೇಟೆ ಮೊದಲಾದವರು ಬಹಿರಂಗ ಸಭೆಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s