ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಾರ್ವಜನ ಿಕ ಮಾಹಿತಿ ಅಧಿಕಾರಿ ವಿರುದ್ಧ ಆಯೋಗಕ್ಕೆ ಅಪೀಲ್

Posted: February 10, 2014 in Uncategorized

ಉಡುಪಿ: ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ಹಕ್ಕು ಕಾಯಿದೆ-2005ನ್ನು ಉಲ್ಲಂಘಿಸಿದ ಪ್ರಕರಣ ನಡೆದಿದೆ.

1986ರ ಜನವರಿ ಒಂದರಿಂದ 2013ರ ಅಕ್ಟೋಬರ್ 31ರ ವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವ ಮೃತದೇಹಗಳನ್ನೆಲ್ಲ ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆಯೋ, ಅಂಥ ಮೃತದೇಹಗಳ ಹೆಸರು, ವಿಳಾಸ, ಯಾವ ಪ್ರಕರಣಕ್ಕೆ ಸಂಬಂಧಿಸಿದ್ದೋ ಆ ಪ್ರಕರಣದ ವಿವರ ಮತ್ತು ಇತರ ಮಾಹಿತಿಗಳನ್ನು ಕೋರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷರಾದ ಶ್ರೀರಾಮ ದಿವಾಣ ಅವರು 2013ರ ಅಕ್ಟೋಬರ್ 31 ರಂದು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಲ್ಲಿಸಿ 50 ದಿನ ಕಳೆದರೂ ಕೋರಿದ ಮಾಹಿತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿದಾರರಿಗೆ ನೀಡದ ಕಾರಣ, ಅರ್ಜಿದಾರರು ಕಾಯಿದೆ ಪ್ರಕಾರ ಡಿ.21 ರಂದು ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ಸಲ್ಲಿಸಿ 45 ದಿನ ಕಳೆದರೂ ಮೇಲ್ಮನವಿ ಪ್ರಾಧಿಕಾರ ಅರ್ಜಿದಾರರಿಗೆ ಅವರು ಕೋರಿದ ಮಾಹಿತಿಯನ್ನು ಕೊಡದ ಕಾರಣ ಇದೀಗ ಇವರ ವಿರುದ್ಧ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲು ಸಲ್ಲಿಸಿದ್ದಾರೆ. ಸಾರ್ವಜನಿಕ ಮಾಹಿತಿ ಅಧಿಕಾರಿ
ದುರುದ್ಧೇಶಪೂರ್ವಕವಾಗಿಯೇ ಮಾಹಿತಿ ನೀಡದೆ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂದು ಅಪೀಲುದಾರರಾದ ಶ್ರೀರಾಮ ದಿವಾಣ ಆಯೋಗಕ್ಕೆ ಸಲ್ಲಿಸಿದ ಅಪೀಲಿನಲ್ಲಿ ದೂರಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s