ಬ್ಯಾಂಕ್ ನೌಕರರ ಮುಷ್ಕರ: ಎಟಿಎಂ ಕಾಲಿ !

Posted: ಫೆಬ್ರವರಿ 11, 2014 in Uncategorized

ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ ಆಶ್ರಯದಲ್ಲಿ ಫೆ. 10ರಂದು ಬೆಳಗ್ಗೆಯಿಂದ ಮಂಗಳವಾರ ಸಂಜೆವರೆಗೆ ಎರಡು ದಿನದ ಮುಷ್ಕರ ನಡೆಸುತ್ತಿದ್ದಾರೆ.

ಮುಷ್ಕರದ ಭಾಗವಾಗಿ ಫೆ.10ರಂದು ಬೆಳಗ್ಗೆ ಉಡುಪಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿ ಮತ ಪ್ರದರ್ಶನ ನಡೆಸಿದರು.

2012ರಿಂದ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಬಾಕಿ ಇದೆ. ಭಾರತೀಯ ಬ್ಯಾಂಕ್ ಗಳ ಒಕ್ಕೂಟ (ಐಬಿಎ) ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಬ್ಯಾಂಕ್ ನೌಕರರು ಕಳೆದ ವರ್ಷದ ಡಿ.18ರಂದು ಒಂದು ದಿನದ ಮುಷ್ಕರ ನಡೆಸಿದ್ದರು.

ವಾರದ ಹಿಂದೆ ಫೆ.6 ರಂದು ಮುಖ್ಯ ಕಾರ್ಮಿಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲೂ ಬೇಡಿಕೆ ಈಡೇರದ ಕಾರಣ ಇದೀಗ ಎರಡು ದಿನದ ಮುಷ್ಕರಕ್ಕೆ ಕರೆ ಕೊಡಲಾಗಿದೆ ಎಂದು ಯೂನಿಯನ್ ಮುಖಂಡರಾದ ಯು.ಶಿವರಾಯ ತಿಳಿಸಿದ್ದಾರೆ.

ವಿವಿಧ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಯೂನಿಯನ್ ಗಳ ನಾಯಕರುಗಳಾದ ದಿನಕರ ಪೂಂಜ, ಜಯ ಪ್ರಕಾಶ್, ಕೆ.ಕೆ.ಕಿಣಿ, ಅಮಿತ್ ಕುಮಾರ್ ಶೆಟ್ಟಿ, ರಾಮ ಮೋಹನ್,
ಕೆ.ಎಸ್.ಬಲ್ಲಾಳ್, ಹೆರಾಲ್ಡ್ ಡಿ’ಸೋಜ, ವರದರಾಜ್, ಕೆ.ಆರ್ ಶೆಣೈ, ಬಾಲಗಂಗಾಧರ ರಾವ್, ರತ್ನಾಕರ ದೇವಾಡಿಗ, ಚಂದ್ರಶೇಖರ್, ಬಾಲಕೃಷ್ಣ ಶೆಟ್ಟಿ ಮುಂತಾದವರು ಮತ ಪ್ರದರ್ಶನದ ನೇತೃತ್ವ ವಹಿಸಿದ್ದರು.

ಮತ ಪ್ರದರ್ಶನದಲ್ಲಿ ಮಹಿಳಾ ನೌಕರರ ಭಾಗವಹಿಸುವಿಕೆ ಅತೀ ವಿರಳವಾಗಿತ್ತು. ಫೆ. 8 ರಂದು ಬಹುತೇಕ ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್ಗಳ ಎಟಿಎಂಗಳಿಗೆ ದುರುದ್ಧೇಶಪೂರ್ವಕವಾಗಿಯೇ ಹಣ ಹಾಕದ ಕಾರಣ ಆದಿತ್ಯವಾರ ಎಟಿಎಂಗಳಲ್ಲಿ ಹಣ ಕಾಲಿಯಾಗಿತ್ತು. ಇದರಿಂದಾಗಿ ಆದಿತ್ಯವಾರವೇ ಎಟಿಎಂನ್ನು ನಂಬಿದ ಸಾರ್ವಜನಿಕರು ಹಣ ನಗದೀಕರಿಸಲಾಗದೆ ಸಂಕಷ್ಟ ಅನುಭವಿಸಿದರು. ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಮುಷ್ಕರ
ನಡೆಯಲಿರುವುದರಿಂದ ಸಾರ್ವಜನಿಕರು ಹಣ ನಗದೀಕರಿಸಲು ಬುಧವಾರದವರೆಗೆ ಕಾಯುವುದು ಅನಿವಾರ್ಯವಾಗಿದೆ.

ಶನಿವಾರದಂದು ಎಟಿಎಂಗಳಿಗೆ ಹಣ ಹಾಕುತ್ತಿದ್ದರೆ ಸಮಸ್ಯೆ ಇಷ್ಟರಮಟ್ಟಿಗೆ
ಆಗುತ್ತಿರಲಿಲ್ಲ. ಸಾರ್ವಜನಿಕರಿಗೆ ಸಮಸ್ಯೆಯಾಗಬೇಕೆಂಬ ಏಕೈಕ ಕಾರಣಕ್ಕೆ ಬ್ಯಾಂಕ್ ನೌಕರರು ಶನಿವಾರದಂದು ಎಟಿಎಂಗಳಿಗೆ ಹಣ ಹಾಕದ ಕ್ರಮಕ್ಕೆ ಸಾರ್ವಜನಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s