ಮಾಹಿತಿ ಹಕ್ಕು ಪ್ರಕರಣ: ವೈದ್ಯಕೀಯ ಸಹನಿರ್ದೇಶಕ ರ ವಿರುದ್ಧ ಆಯೋಗಕ್ಕೆ ಅಪೀಲ್

Posted: ಫೆಬ್ರವರಿ 14, 2014 in Uncategorized

ಉಡುಪಿ: ಮಾಹಿತಿ ಹಕ್ಕು ಕಾಯ್ದೆ-2005ರಂತೆ ಕೋರಿದ ದಾಖಲೆಗಳನ್ನು ದೃಢೀಕರಿಸದೆ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸಹ ನಿರ್ದೇಶಕರು (ವೈದ್ಯಕೀಯ) ಇವರ ವಿರುದ್ಧ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲ್ ಸಲ್ಲಿಸದ್ದಾರೆ.

ರಾಜ್ಯದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿರುವ ಪ್ರಯೋಗಶಾಲೆಗಳಿಗೆ ರಾಸಾಯನಿಕಗಳ ಖರೀದಿಸಿದ ಪ್ರಕ್ರಿಯೆಯಲ್ಲಿ ಆರ್ಥಿಕ ಅವ್ಯವಹಾರ ನಡೆಸಲಾಗಿದೆ ಎಂಬ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಶರತ್ ಕುಮಾರ್ ರಾವ್ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ನೀಡಿದ ಲಿಖಿತ ದೂರಿನ ಮೇಲೆ, ಇಲಾಖೆಯ ನಿರ್ದೇಶಕರ ದಿನಾಂಕ 05.04.2013ರ ಟಿಪ್ಪಣಿಯ ಆಧಾರದಲ್ಲಿ ಇಲಾಖೆಯ ವೈದ್ಯಕೀಯ ಉಪನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪನವರು ತನಿಖೆ ನಡೆಸಿ ಸಿದ್ದಪಡಿಸಿದ ತನಿಖಾ ವರದಿಯ ದೃಢೀಕೃತ ಯಥಾ ಪ್ರತಿಯನ್ನು ಕೋರಿ ಮತ್ತು ತನಿಖಾ ವರದಿಯ ಮೇಲೆ ಇಲಾಖೆ ಕೈಗೊಂಡ ಕ್ರಮದ ಕುರಿತು ಮಾಹಿತಿ ಕೋರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಅವರು ನಿರ್ದೇಶಕರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 2013ರ ನವೆಂಬರ್ 14 ರಂದು ಅರ್ಜಿ ಸಲ್ಲಿಸಿದ್ದರು.

ಇಲಾಖೆಯ ಸಹ ನಿರ್ದೇಶಕರು, ದಾಖಲೆಗಳು 130 ಪುಟಗಳಲ್ಲಿ ಲಭ್ಯವಿದ್ದು, ಪುಟವೊಂದರ 2 ರು.ನಂತೆ ಒಟ್ಟು 260 ರು. ಗಳನ್ನು ಸಂದಾಯ ಮಾಡುವಂತೆ ಅರ್ಜಿದಾರರಿಗೆ ತಿಳಿಸಿದ್ದರು. ಸಹ ನಿರ್ದೇಶಕರ ಸೂಚನೆಯಂತೆ ಅರ್ಜಿದಾರರು 260 ರು. ಕಳುಹಿಸಿಕೊಟ್ಟಿದ್ದು, ಈ ಸಂದರ್ಭದಲ್ಲಿ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಕಳುಹಿಸಿಕೊಡುವಂತೆ ಸ್ಪಷ್ಟವಾಗಿ ಕೋರಿಕೊಂಡಿದ್ದರು. ಆದರೆ ಸಹ ನಿರ್ದೇಶಕರು ದಾಖಲೆಗಳನ್ನು ದೃಢೀಕರಿಸದೆಯೇ, ಕೇವಲ ಜೆರಾಕ್ಸ್ ಪ್ರತಿಗಳನ್ನಷ್ಟೇ ಕಳುಹಿಸಿಕೊಟ್ಟಿದ್ದರು.

ದಾಖಲೆಗಳನ್ನು ದೃಢೀಕರಿಸದೆಯೇ, ಕೇವಲ ಜೆರಾಕ್ಸ್ ಪ್ರತಿಗಳನ್ನಷ್ಟೇ ಕಳುಹಿಸಿಕೊಟ್ಟುದರ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹ ನಿರ್ದೇಶಕರು (ವೈದ್ಯಕೀಯ) ಇವರ ವಿರುದ್ಧ ಅರ್ಜಿದಾರರು ಇಲಾಖಾ ನಿರ್ದೇಶಕರಿಗೆ ಡಿಸೆಂಬರ್ 21 ರಂದು ಮೇಲ್ಮನವಿ ಮತ್ತು 2014ರ ಫೆಬ್ರವರಿ 10 ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲ್ ಸಲ್ಲಿಸಿದ್ದಾರೆ. ದುರುದ್ಧೇಶಪೂರ್ವಕವಾಗಿಯೇ ಇಲಾಖಾಧಿಕಾರಿಗಳು ದಾಖಲೆಗಳ
ಪ್ರತಿಗಳನ್ನು ದೃಢೀಕರಿಸದೆ, ಕೇವಲ ಜೆರಾಕ್ಸ್ ಪ್ರತಿಗಳನ್ನಷ್ಟೇ
ಕಳುಹಿಸಿಕೊಟ್ಟಿದ್ದಾರೆ ಎಂದು ಅರ್ಜಿದಾರರಾದ ಶ್ರೀರಾಮ ದಿವಾಣ ಅವರು ಆಯೋಗಕ್ಕೆ ಸಲ್ಲಿಸಿದ ಅಪೀಲ್ ನಲ್ಲಿ ದೂರಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s