ವರದಕ್ಷಿಣೆ ಹಿಂಸೆ: ಮೂವರ ಮೇಲೆ ಕೇಸು

Posted: February 14, 2014 in Uncategorized

ಉಡುಪಿ: ಕಾರ್ಕಳ ತಾಲೂಕು ಕಣಜಾರು ಗ್ರಾಮದ ಗುಡ್ಡೆಯಂಗಡಿ ಅಚ್ಚಾರ್ಕರ್ ದರ್ಖಾಸು ಮನೆಯ ನಿವಾಸಿ ಶಂಕರ ಶೆಟ್ಟಿ ಎಂಬವರ ಪುತ್ರಿ ನಿಶ್ಮಿತಾ ಶೆಟ್ಟಿ (24) ಎಂಬಾಕೆಗೆ ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಮುಂಬಯಿ ಗೋರೆಗಾಂವ್ ಈಸ್ಟ್ ನ ದಿಂಡೋಶಿ ನಿವಾಸಿಗಳಾಗಿರುವ ನಿಶ್ಮಿತಾಳ ಪತಿ ಸುನಿಲ್ ಶೆಟ್ಟಿ (31), ಅತ್ತೆ ಲಕ್ಷ್ಮಿ ಶೆಡ್ತಿ (55), ನಾದಿನಿ ಅಂಧೇರಿ ನಿವಾಸಿ ಸುರೇಂದ್ರ ಶೆಟ್ಟಿ ಎಂಬವರ ಪತ್ನಿ ಸುಪ್ರಿತಾ ಶೆಟ್ಟಿ (29) ಎಂಬವರ ವಿರುದ್ಧ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಶ್ಮಿತಾ ಹಾಗೂ ಸುನಿಲ್ ಇವರಿಗೆ 2013ರ ಮೇ 6 ರಂದು ವಿವಾಹವಾಗಿತ್ತು. ವಿವಾಹದ ಸಮಯದಲ್ಲಿ ವರನ ಕಡೆಯವರ ಬೇಡಿಕೆಯಂತೆ ನಿಶ್ಮಿತಾಳ ಮನೆಯವರು 3 ಲಕ್ಷ ರು. ನಗದು ಮತ್ತು 20 ಪವನ್ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಿದ್ದರು ಎನ್ನಲಾಗಿದೆ.

ವಿವಾಹವಾದ ಬಳಿಕ ಸುನಿಲ್ ಶೆಟ್ಟಿ ನಿಶ್ಮಿತಾಳನ್ನು ಮುಂಬಯಿಗೆ ಕರೆದೊಯ್ದಿದ್ದ ಮತ್ತು ನಂತರ ವರದಕ್ಷಿಣೆಯಾಗಿ ಕೊಟ್ಟಿದ್ದು ಕಡಿಮೆಯಾಯಿತು ಎಂದು ಹೇಳಿ, ಹೆಚ್ಚಿನ ವರದಕ್ಷಿಣೆ ತರುವಂತೆ ತಾಕೀತು ಮಾಡುತ್ತಾ ಕಿರುಕುಳ ಆರಂಭಿಸಿದನೆಂದು ದೂರಲಾಗಿದೆ.

ಆರೋಪಿಗಳು 2013ರ ಅಕ್ಟೋಬರ್ 20ರಂದು ಹೆಚ್ಚಿನ ವರದಕ್ಷಿಣೆ ತರುವಂತೆ ಸೂಚಿಸಿ ನಿಶ್ಮಿತಾಳನ್ನು ತವರುಮನೆಗೆ ಕರೆದುಕೊಮಡು ಬಂದು ಬಿಟ್ಟು ಹೋಗಿದ್ದರು. ಬಳಿಕ ಡಿಸೆಂಬರ್ 27ರಂದು ಮೂವರು ಆರೋಪಿಗಳ ಸಮಾನ ಉದ್ಧೇಶದಿಂದ ನಿಶ್ಮಿತಾಳ ತವರುಮನೆಗೆ ಬಂದು ನಿಶ್ಮಿತಾ, ಈಕೆಯ ತಾಯಿ ವಸಂತಿ ಶೆಡ್ತಿ ಹಾಗೂ ತಮ್ಮ ನಿತಿನ್ ಶೆಟ್ಟಿಯವರನ್ನು ಉದ್ಧೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದರೆಂದು ಆರೋಪಿಸಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s