ಅನೈರ್ಮಲ್ಯ ಶೌಚಾಲಯಗಳೇ ಇಲ್ಲ: ಉಡುಪಿ ಜಿಲ್ಲಾಡಳ ಿತದಿಂದ ಸುಳ್ಳು ಸಮೀಕ್ಷೆ !

Posted: ಫೆಬ್ರವರಿ 17, 2014 in Uncategorized

ಉಡುಪಿ: ಉಡುಪಿ ನಗರಸಭೆ ಮತ್ತು ಕುಂದಾಪುರ ಪುರಸಭಾ ವ್ಯಾಪ್ತಿಯ ಯಾವೊಂದು
ಪ್ರದೇಶಗಳಲ್ಲೂ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಹಾಗೂ ಅನೈರ್ಮಲ್ಯ ಶೌಚಾಲಯಗಳು ಇಲ್ಲವೇ ಇಲ್ಲ ಎಂಬ ಹಸಿ ಹಸಿ ಸುಳ್ಳು ವರದಿಯೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿದೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

2013ರ ಮೇ 16ರಿಂದ ಜುಲೈ 11ರ ವರೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಅನೈರ್ಮಲ್ಯ ಶೌಚಾಲಯಗಳ ಅಸ್ತಿತ್ವದ ಬಗ್ಗೆ ಉಡುಪಿ ನಗರಸಭೆ ಮತ್ತು ಕುಂದಾಪುರ ಪುರಸಭಾ
ವ್ಯಾಪ್ತಿಯಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಸಮೀಕ್ಷೆ ನಡೆಸಿದವರಿಗೆ ಈ ಎರಡೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಂದೇ ಒಮದು ಅನೈರ್ಮಲ್ಯ ಶೌಚಾಲಯ ಅಸ್ತಿತ್ವದಲ್ಲಿ ಇರುವುದು ಕಂಡುಬಂದಿಲ್ಲ ಎಂಬ ಅತ್ಯಾಶ್ಚರ್ಯ ವಿಷಯ ಇದೀಗ ಬಹಿರಂಗಗೊಂಡಿದೆ.

ಈ ಅಭೂತಪೂರ್ವ ಸಮೀಕ್ಷಾ ವರದಿ ಬಗ್ಗೆ ಸ್ಥಳೀಯ ದಿನಪತ್ರಿಕೆಗಳಲ್ಲಿ
ಪ್ರಕಟಣೆ/ಹೇಳಿಕೆಗಳನ್ನು ನೀಡಲಾಗಿತ್ತಂತೆ. ಆದರೆ ಇದುವರೆಗೂ ಯಾರಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗದ ಕಾರಣ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಮತ್ತು ಅನೈರ್ಮಲ್ಯ ಶೌಚಾಲಯಗಳು
ಅಸ್ತಿತ್ವದಲ್ಲಿಯೇ ಇಲ್ಲ ಎಂಬ ಬಗ್ಗೆ ಅಂತಿಮ ಘೋಷಣೆ ಮಾಡಲು ಜಿಲ್ಲಾಡಳಿತ ವರದಿ ಸಿದ್ದಪಡಿಸಿದೆ ಎಂದು ತಿಳಿದುಬಂದಿದೆ.

ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆ, ನಿಟ್ಟೂರು, ಪುತ್ತೂರು, ಹನುಮಂತನಗರ, ಶಾಂತಿನಗರ ಮುಂತಾದ ವಿವಿಧ ಪ್ರದೇಶಗಳಲ್ಲಿ ಪ್ರತಿದಿನ ಸಾವಿರಾರು ಜನರು ಬಯಲು ಶೌಚಾಲಯವನ್ನೇ ನಂಬಿಕೊಂಡಿರುವುದು ಬಹಿರಂಗ ಸತ್ಯ. ಹೀಗಿರುವಾಗ, ಅನೈರ್ಮಲ್ಯ ಶೌಚಾಲಯದ ಅಸ್ತಿತ್ವದ ಬಗ್ಗೆ ಎರಡು ತಿಂಗಳ ಕಾಲ ಸಮೀಕ್ಷೆ ನಡೆಸಿದ ಜನರ ಕಣ್ಣಿಗೆ ಈ ಬಹಿರಂಗ ಸತ್ಯ ಯಾಕೆ ಕಾಣಲಿಲ್ಲ ಎನ್ನುವುದು ಇದೀಗ ಗಂಭೀರ ಪ್ರಶ್ನೆಯಾಗಿದೆ.

ಯಾವುದೋ ಒಂದು ನಿರ್ಧಿಷ್ಟ ಲಾಭ ಮಾಡಿಕೊಳ್ಳುವ ದುರುದ್ಧೇಶದಿಂದ ಜಿಲ್ಲಾಡಳಿತದ ಅಧಿಕಾರಿಗಳು ಈ ರೀತಿಯ ಸುಳ್ಳು ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಇಂತಹದೊಂದು ವಂಚನೆಯಿಂದ ಕೂಡಿದ ಸಮೀಕ್ಷಾ ಕಾರ್ಯವನ್ನು ನಡೆಸಿದ ಸಮೀಕ್ಷಾ ತಜ್ಞರು ಯಾರಾಗಿರಬಹುದು ಎನ್ನುವ ಕುತೂಹಲವೂ ಇದೀಗ ಸಹಜವಾಗಿಯೇ ಕಾಡತೊಡಗಿದೆ. ವರದಿ: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s