ಸಂಘ ಪರಿವಾರವೇ ಮೊದಲ ಶತ್ರು, ಮೋದಿ ಏನೂ ಅಲ್ಲ: ಪಿಎ ಫ್ಐ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್

Posted: ಫೆಬ್ರವರಿ 18, 2014 in Uncategorized

ಉಡುಪಿ: ಆರ್.ಎಸ್.ಎಸ್ ಮತ್ತು ಬಿಜೆಪಿಯ ಕೋಮುವಾದ ಇಂದು ಹಿಂದುತ್ವ ಫ್ಯಾಸಿಸಂ ಆಗಿ ಬೆಳೆದಿದೆ. ಈ ಫ್ಯಾಸಿಸಂ ಕೋಮುವಾದಕ್ಕಿಂತಲೂ ಹೆಚ್ಚು ಅಪಾಯಕಾರಿ. ಬಾಬರಿ ಮಸೀದಿ ಧ್ವಂಸ, ಅಡ್ವಾಣಿ ರಥಯಾತ್ರೆ, ಆರ್ .ಎಸ್.ಎಸ್ ಭಯೋತ್ಪಾದನೆ ಇತ್ಯಾದಿಗಳು ಇದಕ್ಕೆ ಸಾಕ್ಷಿ. ಪಿಎಫ್ಐಗೆ ಮತ್ತು ದೇಶಕ್ಕೆ ಸಂಘ ಪರಿವಾರ ಮತ್ತು ಇದರ ಅಜೆಂಡಾವೇ ಶತ್ರು ಹಾಗೂ ಸವಾಲು. ಹೊರತು ಮೋದಿಯಲ್ಲ. ಮೋದಿ ನಮಗೇನೂ ಅಲ್ಲ. ಆತ ಕೇವಲ ಚಹಾ ಮಾರುವವ ಅಷ್ಟೆ ಎಂದು ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಸಂಸ್ಥಾಪನಾ ದಿನದ ಅಂಗವಾಗಿ ಫೆ.17ರಂದು ಉಡುಪಿಯಲ್ಲಿ ‘ಜನರ ಹಕ್ಕುಗಳಿಗಾಗಿ ಒಂದಾಗೋಣ, ಜನರೆಡೆಗೆ ತಲುಪೋಣ’ ಎಂಬ
ಘೋಷಣೆಯೊಂದಿಗೆ ಆಯೋಜಿಸಿದ ಬೃಹತ್ ಯುನಿಟಿ ಮಾರ್ಚ್ ಬಳಿಕ ನಗರದ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಪ್ರಭುತ್ವ ಒಂದು ವರ್ಗದ, ಧರ್ಮದ ಓಲೈಕೆಯಲ್ಲಿ ತೊಡಗಿ, ಇನ್ನೊಂದು ವರ್ಗ, ಧರ್ಮವನ್ನು ಕಡೆಗಣಿಸತೊಗಡಿದಾಗ ಸಹಜವಾಗಿಯೇ ಜನರು ಸಕಾರಾತ್ಮಕ ಬದಲಾವಣೆಗಾಗಿ ಚಳುವಳಿ
ಆರಂಭಿಸುತ್ತಾರೆ. ಇದೇ ರೀತಿ ಪಿಎಫ್ಐ ಪ್ರಾರಂಭವಾಗಿದೆ. ಇದು ಅಕಸ್ಮಿಕವೇನೂ ಅಲ್ಲ. ಪ್ರತಿಭಟನೆ, ಜನ ಚಳುವಳಿಗಳನ್ನು ಹತ್ತಿಕ್ಕಲು ಇದೇ ಪ್ರಭುತ್ವ ಮೊದಲು ಅಮಿಷ, ಬಳಿಕ ದಮನ, ದಬ್ಬಾಳಿಕೆ ನಡೆಸುತ್ತದೆ. ದಟ್ಟವಾದ ಐಡಿಯಾಲಜಿ ಇರುವಂಥ ಪಿಎಫ್ಐನಂಥ ಸಂಘಟನೆಗಳು ಇವುಗಳನ್ನೆಲ್ಲ ಮೆಟ್ಟಿನಿಂತು ಉಳಿದು ಬೆಳೆಯುತ್ತಿದೆ. ಐಡಿಯಾಲಜಿ ಇಲ್ಲದ ಸಂಘಟನೆಗಳು ಅಳಿದುಹೋಗುತ್ತವೆ ಎಂದು ಕೆ.ಎಂ.ಶರೀಫ್ ಮಾರ್ಮಿಕವಾಗಿ ತಿಳಿಸಿದರು.

ಸರಕಾರಗಳು ಜ್ಯಾರಿಗೆ ತರುತ್ತಿರುವ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಬಡತನವನ್ನು ನಿರ್ಮೂಲನ ಮಾಡದೆ ಬಡವರನ್ನೇ ನಿರ್ಮೂಲನ ಮಾಡುತ್ತಿದೆ. ಪೌಷ್ಠಿಕಾಂಶ ಒದಗಿಸಿಕೊಡಲು ಸರಕಾರಗಳು ವಿಫಲವಾದ ಕಾರಣಕ್ಕೆ ಐದು ವರ್ಷದೊಳಗಿನ ಐದು ಕೋಟಿ ಮಕ್ಕಳು
ಕೊಲ್ಲಲ್ಪಟ್ಟಿದ್ದಾರೆ. ಸ್ವಾವಲಂಬನೆಯ ನೀತಿಯೇ ಇಲ್ಲದ ಸರಕಾರದ ಉದಾರೀಕರಣ ನೀತಿ ಇತ್ಯಾದಿಗಳು ಇದಕ್ಕೆಲ್ಲ ಕಾರಣ ಎಂದು ಶರೀಫ್ ಅಭಿಪ್ರಾಯಪಟ್ಟರು.

ಪಿಎಫ್ಐ ರಾಜ್ಯಾಧ್ಯಕ್ಷ ಅಬ್ದುಲ್ ಖದರ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಪಿಐ ಮಾಜಿ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕ್ಕರ್ ಸಾಹೇಬ್ ಹಾಗೂ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ನ ರಾಜ್ಯಾಧ್ಯಕ್ಷ ಮುಫ್ತಿ ಮುಹಮ್ಮದ್ ಮುಅಝಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದಸಂಸ ಮುಖಂಡ ಜಯನ್ ಮಲ್ಪೆ, ಎಸ್ಡಿ ಪಿಐ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್ ಮಲ್ಪೆ, ಪಿಎಫ್ಐ ನಾಯಕರಾದ ಅತಾವುಲ್ಲಾ ಜೋಕಟ್ಟೆ, ಮುಹಮ್ಮದ್ ಕಕ್ಕಿಂಜೆ ಮೊದಲಾದವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s