ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಸಭಾಪತಿ ಸ್ಥಾನದಿ ಂದ ಬಸ್ರೂರು ಉಚ್ಛಾಟನೆ !

Posted: ಫೆಬ್ರವರಿ 20, 2014 in Uncategorized

ಉಡುಪಿ: ಭಾರತೀಯ ರೆಡ್ ಕ್ರಾಸ್ ಸೊಸೈಟಿ (ರಿ) ಇದರ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರನ್ನು ಇಂದು ಬೆಂಗಳೂರಿನ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖಾ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉಚ್ಛಾಟಿಸಲಾಗಿದೆ.

ಸಭೆಯಲ್ಲಿ 25 ಮಂದಿ ಭಾಗವಸಿದ್ದರು. ಮೊದಲಿಗೆ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಲಾಯಿತು. ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪಕ್ಕೆ ಸಭೆಯಲ್ಲಿ ಭಾಗವಹಿಸಿದ್ದ 25 ಮಂದಿಯಲ್ಲಿ 16 ಮಂದಿ ಮತ ಚಲಾಯಿಸಿದರು ಹಾಗೂ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಲಾಯಿತು.

ರಾಜೀವ್ ಶೆಟ್ಟಿಯವರನ್ನು ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಛಾಟಿಸಲಾಗಿದೆ. ಇಂದು ಸಭೆಯಲ್ಲಿ ಅಂಗೀಕರಿಸಲಾದ ಬಹುಮತದ ನಿರ್ಣಯವನ್ನು ನಾಳೆ ಕರ್ನಾಟಕ ಸರಕಾರದ
ರಾಜ್ಯಪಾಲರೂ, ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಅಧ್ಯಕ್ಷರೂ ಆದ
ಡಾ.ಎಚ್.ಆರ್.ಭಾರಧ್ವಾಜ್ ಅವರಿಗೆ ನೀಡಲಾಗುವುದು ಎಂದು udupibits ಜೊತೆಗೆ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿಯ ಚಿತ್ತಾರಿ ವೆಂಕಟ ಕೃಷ್ಣ ಸ್ವಾಮಿ ಅವರು ಸ್ಪಷ್ಟಪಡಿಸಿದರು.

ಬಸ್ರೂರು ವಿರುದ್ಧ ಕೆಲವೊಂದು ಗಂಭೀರವಾದ ಆರೋಪಗಳಿದ್ದವು. ಈ ಬಗ್ಗೆ ಕೆಲವರು ರಾಜ್ಯಪಾಲರಿಗೂ, ರೆಡ್ ಕ್ರಾಸ್ ಸೊಸೈಟಿಗೂ ಲಿಖಿತವಾಗಿಯೇ ದೂರುಗಳನ್ನೂ
ಸಲ್ಲಿಸಿದ್ದರು. ಒಂದೆರಡು ಮೊಕದ್ದಮೆಗಳೂ ಬಸ್ರೂರು ವಿರುದ್ಧ ದಾಖಲಾಗಿದ್ದವು.

ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರೆಡ್ ಕ್ರೋಸ್ ಸೊಸೈಟಿಯ ಬಹುತೇಕ ಸದಸ್ಯರು ಕಳೆದು ಕೆಲವು ತಿಂಗಳುಗಳಿಂದ ಗೌರವಾನ್ವಿತ ರಾಜ್ಯ ಸಭಾಪತಿ ಹುದ್ದೆಗೆ ಸ್ವಯಂ ಆಗಿಯೇ ರಾಜೀನಾಮೆ ನೀಡುವಂತೆ ಗೌರವದಿಂದಲೇ ಬಸ್ರೂರು ರಾಜೀವ್ ಶೆಟ್ಟಿಯವರನ್ನು
ಕೇಳಿಕೊಂಡಿದ್ದರು. ಆದರೆ ಸ್ಥಾನ ಬಿಟ್ಟುಕೊಡಲು ಬಸ್ರೂರು ನಿರಾಕರಿಸುತ್ತಲೇ ಬಂದಿದ್ದರು. ಅಂತಿಮವಾಗಿ ರಡ್ ಕ್ರಾಸ್ ಸೊಸೈಟಿಯ ಗೌರವ ಉಳಿಸುವ ಸಲುವಾಗಿ ಇತರರು ಕಳೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಕ್ರಿಯೆಗೆ ಅಧಿಕೃತವಾಗಿಯೇ ಚಾಲನೆ ನೀಡಿದ್ದರು. ಇಂದು ನಡೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಬಹುಮತದಿಂದಲೇ ಉಚ್ಛಾಟಿಸುವ ನಿರ್ಣಯವನ್ನು ಅಂಗೀಕರಿಸುವಲ್ಲಿ ಯಶಸ್ವಿಯಾದರು.

ಲಯನ್ಸ್ ಕ್ಲಬ್ ನ ಮಾಜಿ ರಾಜ್ಯಪಾಲರಾದ ಬಸ್ರೂರು ರಾಜೀವ್ ಶೆಟ್ಟಿಯವರು ಪ್ರಸ್ತುತ ಉಡುಪಿ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿಗಳು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉಡುಪಿ ಜಿಲ್ಲಾ ಒಂಬುಡ್ಸ್ ಮೆನ್ ಆಗಿ ಸರಕಾರದಿಂದ ನೇಮಕಾತಿಗೊಂಡಿದ್ದ ಬಸ್ರೂರು ಅವರನ್ನು ಬಳಿಕ ಸರಕಾರವೇ ಈ ಹುದ್ದೆಯಿಂದ ತೆರವುಗೊಳಿಸಿತ್ತು.

ಬಸ್ರೂರು ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್ ಮೆನ್ ಆಗಿದ್ದ ಅವಧಿಯಲ್ಲಿ ಬಸ್ರೂರು ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಎಲ್ಐಸಿ ಪಾಲಿಸಿ ಮಾಡುವುದರಲ್ಲಷ್ಟೇ ಆಸಕ್ತರಾಗಿದ್ದರು. ಇದೀಗ ದ.ಕ.ಜಿಲ್ಲೆಯ ಒಂಬುಡ್ಸ್ ಮೆನ್ ಅವರು ಉಡುಪಿ ಜಿಲ್ಲೆಯ ೊಂಬುಡ್ಸ್ ಮೆನ್ ಆಗಿ ಪ್ರಭಾರ ಕರ್ತವ್ಯದಲ್ಲಿದ್ದು ಸಮರ್ಥವಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s