ವ್ಯಕ್ತಿ ಕಾಣೆ

Posted: ಫೆಬ್ರವರಿ 20, 2014 in Uncategorized

ಉಡುಪಿ: 80 ಬಡಗಬೆಟ್ಟು ಗ್ರಾಮದ ಕೆಳ ಶಾಂತಿನಗರ ನಿವಾಸಿ, ಮಣಿಪಾಲದ ಯುನಿಟ್ 4ರಲ್ಲಿ ರಿವೈಂಡರ್ ರೀಲ್ ಆಪರೇಟರ್ ಕೆಲಸ ಮಾಡಿಕೊಂಡಿದ್ದ ಮಲ್ಲಪ್ಪ ಇಟಗಿ (59) ಎಂಬವರು ಫೆ.15ರಂದು ರಾತ್ರಿ 8 ಗಂಟೆಯಿಂದ ನಿಗೂಢವಾಗಿ ಕಾಣೆಯಾಗಿದ್ದಾರೆ.

ಬೆಳಗ್ಗೆ ಗಂಟೆ 8.15ಕ್ಕೆ ಮನೆಯಿಂದ ಕೆಲಸಕ್ಕೆ ಹೋದ ಮಲ್ಲಪ್ಪ ಅವರು ಸಂಜೆ 6 ಗಂಟೆಯ ವರೆಗೆ ಹಗಲು ಪಾಳಿಯ ಕೆಲಸ ಮಾಡಿದ ಬಳಿಕ, ರಾತ್ರಿ 8 ಗಂಟೆಯ ವರೆಗೆ ಒ.ಟಿ. ಕೆಲಸ ಮಾಡಿ ಕೆಲಸದ ಸ್ಥಳದಿಂದ ಹೊರಟವರು ಮನೆಗೆ ಹೋಗದೆ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಐದಡಿ ಐದಿಂಚು ಎತ್ತರದ, ಸಾಧಾರಣ ಮೈಕಟ್ಟಿನ, ಗೋಧಿ ಮೈಬಣ್ಣ, ದುಂಡು ಮುಖದ, ಬಿಳಿ ತಲೆ ಕೂದಲಿನ ಮಲ್ಲಪ್ಪ ಅವರು ಕನ್ನಡ, ತುಳು ಮತ್ತು ಹಿಂದಿ ಭಾಷೆಗಳನ್ನು ಮಾತನಾಡಬಲ್ಲವರು. ಬಲಬದಿಯ ಕೆನ್ನೆಯಲ್ಲಿ ಗಾಯದ ಗುರುತು ಹೊಂದಿರುವ ಇವರು, ಕಾಣೆಯಾದ ದಿನದಂದು ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.

ಈ ಬಗ್ಗೆ ಮಲ್ಲಪ್ಪ ಇವರ ಪುತ್ರ ಮುತ್ತು ರಾಜ್ ಇಟಗಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಣೆಯಾದ ವ್ಯಕ್ತಿಯನ್ನು ಕಂಡವರು ಹತ್ತರಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s