ಮಲಗಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನ ಕಳವು !

Posted: ಫೆಬ್ರವರಿ 21, 2014 in Uncategorized

ಉಡುಪಿ: ಮನೆಯೊಳಗೆ ಕಿಟಿಕಿ ಬಳಿ ಮಲಗಿದ್ದ ಮಹಿಳೆಯೋರ್ವಳ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಳ್ಳರು ಕಳವು ಮಾಡಿಕೊಂಡು ಹೋದ ಪ್ರಕರಣ ಫೆ.19ರಂದು ರಾತ್ರಿ ಪಡುತೋನ್ಸೆ ಗ್ರಾಮದ ಹೂಡೆಯ ಮತ್ತಜಾ ಮಝಿಲ್ ನಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಸಾಗರದ ಜನತಾ ನಗರ ನಿವಾಸಿ ಯಾಸಿನ್ ಎಂಬವರು ತನ್ನ ಪತ್ನಿಯೊಂದಿಗೆ ಹೂಡೆಯಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದವರು, ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ಗಂಟೆ 12.30 ಕ್ಕೆ ಪತ್ನಿ ಯಾಸಿನ್ ರವರನ್ನು ಎಬ್ಬಿಸಿ ವಿಷಯವನ್ನು ತಿಳಿಸಿದರು ಎನ್ನಲಾಗಿದೆ.

ಹುಕ್ ಆಕಾರದ ರಾಡ್ ನ್ನು ಬಳಸಿ ಕಳ್ಳರು ಕರಿಮಣಿ ಸರವನ್ನು ಎಳೆದಿದ್ದಾರೆ. ಪಕ್ಕದಲ್ಲೇ ಇರಿಸಲಾಗಿದ್ದ ಬ್ಯಾಗನ್ನೂ ಕೂಡಾ ಕಳ್ಳರು ಎಳೆದು ಹಾಕಿದ್ದು ಚೆಲ್ಲಾಪಿಲ್ಲಿ ಮಾಡಿದ್ದರೆನ್ನಲಾಗಿದೆ. 3.5 ಪವನಿನ ಕರಿಮಣಿ ಸರದ ಬೆಲೆ 35 ಸಾವಿರ ರು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಯಾಸಿನ್ ನೀಡಿದ ದೂರಿನ ಪ್ರಕಾರ ಮಲ್ಪೆ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s