ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನ ೌಕಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭ

Posted: ಫೆಬ್ರವರಿ 22, 2014 in Uncategorized

ಉಡುಪಿ: ಕೇಂದ್ರ ಸರಕಾರಿ ನೌಕರರ ಏಳನೇ ವೇತನ ಆಯೋಗದ ವ್ಯಾಪ್ತಿಗೆ ತಮ್ಮನ್ನೂ ಸೇರಿಸಬೇಕು, ಇಲ್ಲದೇ ಇದ್ದಲ್ಲಿ ತಮಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರತ್ಯೇಕ ವೇತನ ಆಯೋಗವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ನೇತೃತ್ವದಲ್ಲಿ ಅಂಚೆ ನೌಕರರು ಫೆ.21 ರಿಂದ ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಫೆ.18ರಿಂದ ನೌಕರರು ಮುಷ್ಕರ ನಡೆಸುತ್ತಿದ್ದು, ಮುಷ್ಕರದ ಎರಡನೇ ಹಂತವಾಗಿ ಫೆ.21ರಿಂದ ಮುಷ್ಕರದ ಜೊತೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಅಂಚೆ ನೌಕರರನ್ನು ಇದುವರೆಗೂ ಖಾಯಮಾತಿ ಮಾಡಿಲ್ಲ, ಇದರಿಂದಾಗಿ ನೌಕರರಿಗೆ ಹಾಗೂ ಕುಟುಂಬಕ್ಕೆ ಸಾಮಾಜಿಕ ಇಲ್ಲದಂತಾಗಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ ರವರಿಗೆ ಪಾಯಿಂಟ್ ಆಧಾರಿತ ಕೆಲಸ, ಇದರಿಂದಾಗಿ ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ. ನಿರ್ಧಿಷ್ಟ ಸೇವಾ ಅವಧಿಯ ನಂತರವೂ ಭಡ್ತಿ ನೀಡದಿರುವುದು, ಮೂಲ ವೇತನವನ್ನು ಹೆಚ್ಚಿಸದಿರುವುದು, ಖಾಲಿ ಇರುವ ಹುದ್ದೆಗಳನ್ನು ತುಂಬದಿರುವುದು, ಇರುವ ಹುದ್ದೆಗಳನ್ನು ಕಡಿತಗೊಳಿಸಿ, ಹೆಚ್ಚುವರಿ ಕೆಲಸಗಳನ್ನು ನೀಡುವುದು, ಅಂಚೆ ಪೇದೆ ಮತ್ತು ಎಂಟಿಎಸ್, ನಾಲ್ಕನೆ ದರ್ಜೆ ನೌಕರರ ನೇಮಕಾತಿಯಲ್ಲೂ 25 ಶೇಕಡಾ ಹೊರಗಿನ ನೇರ ನೇಮಕಾತಿ ಪ್ರಕ್ರಿಯೆ
ಮಾಡಹೊರಟಿರುವುದು ಇತ್ಯಾದಿಗಳಿಂದಾಗಿ ಗ್ರಾಮೀಣ ಅಂಚೆ ನೌಕರರಿಗೆ ಭಾರೀ ಸಮಸ್ಯೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಂಘದ ಕರ್ನಾಟಕ ವಲಯ ಕಾರ್ಯಾಧ್ಯಕ್ಷ ಮತ್ತು ಉಡುಪಿ ವಿಭಾಗೀಯ ಕಾರ್ಯದರ್ಶಿ ಬಿ.ವಿಜಯ ನಾಯಿರಿ, ಅಧ್ಯಕ್ಷ ಬಸವ ಬಿಲ್ಲವ, ನಾಗರಾಜ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ವೈಕುಂಠ ಐತಾಳ್ ಸಾಸ್ತಾನ, ಸಂತೋಷ್ ಮಧ್ಯಸ್ಥ ಕೋಟ, ವಾದಿರಾಜ್ ಉಡುಪಿ, ಕಿರಣ್ ಪರ್ಕಳ, ರಾಘವೇಮದ್ರ ಕುಂದಾಪುರ, ಮೀರಾ ತೊಟ್ಟಂ, ಪೂರ್ಣಿಮಾ, ಸ್ನೇಹಲತಾ, ಹೇಮಂತ್ ಕುಮಾರ್ ರಮಾನಾಥ ಹಳ್ಳಾಡಿ ಮೊದಲಾದವರು ಸತ್ಯಾಗ್ರಹದ ನೇತೃತ್ವ ವಹಿಸಿದ್ದಾರೆ.
[tgas: post, post office]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s