ಆಪ್ ಕಾರ್ಯಕರ್ತರಿಂದ ಜಾಡುಯಾತ್ರೆ

Posted: February 23, 2014 in Uncategorized
Tags: , , , , , , , , , , , , , ,

ಉಡುಪಿ: ಆಮ್ ಆದ್ಮಿ ಪಕ್ಷ (ಎಎಪಿ)ದ ಕಾರ್ಯಕರ್ತರು ಫೆ.22ರಂದು ಉಡುಪಿಯ
ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಜಾಡು ಯಾತ್ರೆ ನಡೆಸಿ ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸಿದರು.

ತಲೆಗೆ ಗಾಂಧಿ ಟೋಪಿ, ಕೈಯ್ಯಲ್ಲಿ ರಾಷ್ಟ್ರಧ್ವಜ ಮತ್ತು ಪಕ್ಷದ ಚುನಾವಣಾ ಚಿಹ್ನೆಯಾದ ಪೊರಕೆಯನ್ನು ಹಿಡಿದುಕೊಂಡು ಜಾಥಾ ನಡೆಸಿದರು. ಭ್ರಷ್ಟಾಚಾರ ಹಣದುಬ್ಬರ, ಬಲವಂತದ ಕೃಷಿಭೂಮಿ ಸ್ವಾಧೀನ ಮತ್ತು ನೈಸರ್ಗಿಕ ಸಂಪತ್ತಿನ ಲೂಟಿಯ ವಿರುದ್ಧ ಹಾಗೂ ಜನಲೋಕಪಾಲ್, ಸ್ವರಾಜ್ ಕಲ್ಪನೆ, ಉಚಿತ ಶಿಕ್ಷಣ, ವೈದ್ಯಕೀಯ ಸವಲತ್ತು, ರೈತರ ಬೆಳೆಗೆ ಬೆಂಬಲ ಬೆಲೆ, ಚುನಾವಣಾ ನೀತಿ ಸಂಹಿತೆ ಪರವಾಗಿ ಕಾರ್ಯಕರ್ತರು ಜಾಥಾದುದ್ದಕ್ಕೂ ಘೋಷಣೆಗಳನ್ನು ಕೂಗಿದರು.

ಜಾಡು ಜಾಥವನ್ನು ಸರ್ವಿಸ್ ಬಸ್ ನಿಲ್ದಾಣದ ಗಡಿಯಾರ ಗೋಪುರದ ಮುಂಭಾಗದಲ್ಲಿ ಮುಕ್ತಾಯಗೊಳಿಸಿದ ಕಾರ್ಯಕರ್ತರು, ಬಳಿಕ ಗಾಂಧಿ ಪ್ರತಿಮೆಯನ್ನು ಸ್ವಚ್ಛಗೊಳಿಸಿದರು. ಎಎಪಿ ಜಿಲ್ಲಾ ಸಂಚಾಲಕ ಯತೀಶ್ ಕುಮಾರ್ ಕಟಪಡಿ, ಸಹಸಂಚಾಲಕ ಭುವನೇಂದ್ರ ಸುವರ್ಣ, ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಅನಿತಾ ಒಲಿವೆರ್ ಡಿಸೋಜಾ, ಇತರ ಪ್ರಮುಖರಾದ ಸಂಜೀವ ಜತ್ತನ್ನ, ಮನೋಹರ್ ವೇಗಸ್, ಜಿ.ಎ.ಕೋಟೆಯಾರ್, ನರೇಂದ್ರ ಕಾಮತ್ ಮುಂತಾದವರು ಜಾಡುಜಾಥದ ನೇತೃತ್ವ ವಹಿಸಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s