ಕುಡಿಯುವ ನೀರಿಗೆ ಮೊದಲ ಆದ್ಯತೆ: ನೂತನ ಜಿಲ್ಲಾಧ ಿಕಾರಿ ಡಾ.ಮುದ್ದು ಮೋಹನ್

Posted: March 2, 2014 in Uncategorized
Tags: , , , , , , ,

ಉಡುಪಿ: ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದೇ ತನ್ನ ಮೊದಲ ಆದ್ಯತೆ ಎಂದು ಫೆಬ್ರವರಿ 28ರಂದು ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಮಾರ್ಚ್ ಒಂದರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಡಾ.ಮುದ್ದು ಮೋಹನ್ ಅವರು ತಿಳಿಸಿದರು.

ಮುಂದಿನ ವಾರದಿಂದ ಚುನಾವಣಾ ಸಿದ್ದತೆ ಕಡೆಗೆ ಗಮನ ಹರಿಸಲಾಗುವುದು. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಚುನಾವಣೆ ನಡೆಯಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುವುದು. ಕೋಮು ಸೌಹಾರ್ದದ ಜಿಲ್ಲೆಯಾದ ಉಡುಪಿ ಜಿಲ್ಲೆಯ ಜನರು ಕಷ್ಟ ಸಹಿಷ್ಣುಗಳು ಮತ್ತು ಸಾಂಸ್ಕೃತಿಕ ನಗರ ಎಂದು ಕೊಂಡಾಡಿದರು.

ಎಂಡೋಸಲ್ಫಾನ್ ಪರ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ 120 ಲಕ್ಷ ರು. ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ 810 ಮಂದಿಯನ್ನು ಎಂಡೋ ಬಾಧಿತರೆಂದು ಗುರುತಿಸಲಾಗಿದೆ. ಇವರಲ್ಲಿ 518 ಮಂದಿಗೆ ಸೂಕ್ತ ಮಾಸಾಶನ ವಿತರಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುದ್ದು ಮೋಹನ್ ಹೇಳಿದರು.

ಮೂಲತಹ ರಾಯಚೂರು ಜಿಲ್ಲೆಯವರಾದ ಡಾ.ಮುದ್ದು ಮೋಹನ್, ಗಾಯಕರು. ರಾಜ್ಯದ ರಾಜಧಾನಿ ಬೆಂಗಳೂರು ಸಹಿತ ಧಾರಾವಾಡ, ಮೈಸೂರು, ಗದಗ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ, ಕಂದಾಯ, ಶಿಕ್ಷಣ, ವೈದ್ಯಕೀಯ ಶಿಕ್ಷಣ ಮುಂತಾದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s