ಉಡುಪಿ: ಗ್ರಾಹಕರ ಜಾಗೃತಿ ಕಾರ್ಯಕ್ರಮಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಡುಗಡೆಗೊಳಿಸಿದ ಒಂದು ಲಕ್ಷ ರು.ಗಳ ಅನುದಾನವನ್ನು ಉಡುಪಿಯ ಬಳಕೆದಾರರ ವೇದಿಕೆಯು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

2012-13ನೇ ಸಾಲಿಗೆ ಗ್ರಾಹಕರ ಕಲ್ಯಾಣ ನಿಧಿಯಿಂದ ಒಂದು ಲಕ್ಷ ರು.ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಳಕೆದಾರರ ವೇದಿಕೆಗೆ ಬಿಡುಗಡೆಮಾಡಿತ್ತು. 2013ರ ಅಕ್ಟೋಬರ್ 26ರಂದು ಬಳಕೆದಾರರ ವೇದಿಕೆಯು ಒಂದು ಲಕ್ಷ ರು.ಗಳ ಅನುದಾನವನ್ನು ಬಳಕೆ ಮಾಡಲಾದ ಬಗ್ಗೆ ಪ್ರಮಾಣಪತ್ರ ಮತ್ತು ಈ ಸಂಬಂಧದ ಓಚರ್ ಗಳನ್ನು ಇಲಾಖೆಗೆ ನೀಡಿತ್ತು.

ಓಚರ್ ಇತ್ಯಾದಿಗಳನ್ನು ಪರಿಶೀಲನೆ ನಡೆಸಿದ ಇಲಾಖಾಧಿಕಾರಿಗಳು, ಗ್ರಾಹಕರ ಜಾಗೃತಿ ಕಾರ್ಯಕ್ರಮಗಳಿಗಾಗಿ ಬಿಡುಗಡೆಗೊಳಿಸಲಾದ ಹಣವನ್ನು ಬಳಕೆದಾರರ5 ವೇದಿಕೆಯು ಗ್ರಾಹಕರ ಜಾಗೃತಿ ಕಾರ್ಯಕ್ರಮಗಳಿಗಾಗಿ ಸರಿಯಾದ ರೀತಿಯಲ್ಲಿ ವಿನಿಯೋಗ ಮಾಡದೆ, ದುರುಪಯೋಗ ಪಡಿಸಿಕೊಂಡಿರುವುದನ್ನು ಪತ್ತೆಹಚ್ಚಿದ್ದು, ಈ ಸಂಬಂಧವಾಗಿ 2013ರ ನವೆಂಬರ್ 16ರಂದು ಬಳಕೆದಾರರ ವೇದಿಕೆಯ ಸಂಚಾಲಕರಾದ ಕಡಿಯಾಳಿ ದಾಮೋದರ ಐತಾಲ್ ಅವರಿಗೆ ಲಿಖಿತವಾಗಿಯೇ ಪತ್ರ ಬರೆದು ಗಮನಸೆಳೆದಿದ್ದಾರೆ.

ಗ್ರಾಹಕರ ಜಾಗೃತಿ ಕಾರ್ಯಕ್ರಮಗಳಿಗಾಗಿಯೇ ಒಂದು ಲಕ್ಷ ರು.ಗಳನ್ನು
ವಿನಿಯೋಗಿಸಬೇಕಾಗಿದ್ದ ಬಳಕೆದಾರರ ವೇದಿಕೆಯು, ಬಿಡುಗಡೆಯಾದ ಅನುದಾನದಲ್ಲಿ ಅರ್ಧದಷ್ಟು ಹಣವನ್ನೂ ಕೇವಲ ಲಘು ಉಪಹಾರ ಮತ್ತು ಊಟಕ್ಕಾಗಿ ಖರ್ಚು ಮಾಡಿರುವುದು ಷ್ಪಷ್ಟವಾಗಿದೆ. ಗ್ರಾಹಕರ ಜಾಗೃತಿ ಕಾರ್ಯಕ್ರಮದ ಹೆಸರಲ್ಲಿ ಲಘು ಉಪಹಾರ ಮತ್ತು ಊಟಕ್ಕಾಗಿ ಬಳಕೆದಾರರ ವೇದಿಕೆಯು ಕರ್ಚು ಮಾಡಿದ ಮೊತ್ತ ಬರೋಬ್ಬರಿ 44,900 ರು. ಈ ಬಗ್ಗೆ ಬಳಕೆದಾರರ ವೇದಿಕೆಗೆ ಬರೆದ ಪತ್ರದಲ್ಲಿ ಇಲಾಖೆ ಆಕ್ಷೇಪ ದಾಖಲಿಸಿದೆ.

ತೆಂಕನಿಡಿಯೂರಿನಲ್ಲಿ ಬಳಕೆದಾರರ ವೇದಿಕೆಯು ನಡೆಸಿದ ಕಾರ್ಯಕ್ರಮಕ್ಕೆ ಸರಬರಾಜು ಮಾಡಲಾದ ಊಟ ಮತ್ತು ತಿಂಡಿಗೆ ಸಂಬಂಧಿಸಿದಂತೆ ಎರಡೆರಡು ಬಾರಿ ಬಿಲ್ ಮಾಡಿದ ಪ್ರಸಂಗವೂ ದಾಖಲಾತಿಗಳ ತಪಾಸನೆ ಸಮಯದಲ್ಲಿ ಬಹಿರಂಗಕ್ಕೆ ಬಂದಿದೆ. ಮಾತ್ರವಲ್ಲ, ಗ್ರಾಹಕರ ಜಾಗೃತಿ ಕಾರ್ಯಕ್ರಮಕ್ಕೆ ವಿನಿಯೋಗ ಮಾಡಬೇಕಾದ ಹಣದಲ್ಲಿಯೇ ಬಳಕೆದಾರರ ವೇದಿಕೆಯ ಕಚೇರಿಗೆ ಸಂಬಂಧಪಟ್ಟಂತೆ ದೂರವಾಣಿ ಬಿಲ್ಲು, ಕೆಇಬಿ ಬಿಲ್ಲು, ಕಚೇರಿಯ ಕಂಪ್ಯೂಟರ್ ರಿಪೇರಿ ಮತ್ತು ಟೋನರ್ ರೀಫಿಲ್ ಮಾಡಿರುವುದು ಹಾಗೂ ಇದಕ್ಕಾಗಿ 7,733 ರು. ಕರ್ಚು ಮಾಡುವ ಮೂಲಕ ಬಳಕೆದಾರರ ವೇದಿಕೆಯು ಯಾವ ಉದ್ಧೇಶಕಾಗಿ ಸರಕಾರ ವೇದಿಕೆಗೆ ಅನುದಾನವನ್ನು ಬಿಡುಗಡೆಗೊಳಿಸಿದೆಯೋ, ಆ ಕಾರ್ಯಕ್ರಮಕ್ಕೆ ಹಣ ವಿನಿಯೋಗಿಸದೆ ದುರುಪಯೋಗ
ಮಾಡಿಕೊಂಡಿರುವುದು ಸಾಕ್ಷ್ಯಾಧಾರ ಸಹಿತ ದೃಢಪಟ್ಟಿದೆ.

ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾಧಿಕಾರಿಗಳು, ಮತ್ತೊಮ್ಮೆ ಹೊಸತಾಗಿ ಓಚರ್ ಗಳನ್ನು ಮಂಡಿಸುವಂತೆ ಮತ್ತು ಕಾರ್ಯಕ್ರಮಗಳನ್ನು ನಡೆಸಿರುವ ಬಗ್ಗೆ ಸಭೆ ನಡೆಸಿದ ಸ್ಥಳಗಳಲ್ಲಿ ತೆಗೆದ ಫೋಟೋಗಳನ್ನು ಕಳುಹಿಸಿಕೊಡುವಂತೆಯೂ ಬಳಕೆದಾರ ವೇದಿಕೆಯ ಸಂಚಾಲಕರಿಗೆ ಬರೆದ ಪತ್ರದಲ್ಲಿ ಆದೇಶಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s