ಉಡುಪಿ: ನಾವೆಲ್ಲ ಹರಿಹರರಂತೆ ಒಂದಾದರೆ ನಮ್ಮ ದೇಶದಲ್ಲಿ ನಡೆಯುವ ಆಕ್ರಮಣ, ಅನ್ಯಾಯಗಳನ್ನು ಎದುರಿಸಲು, ದೇಶವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಅವರು ಮಾರ್ಚ್ 4ರಂದು ಸಂಜೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ಪುನಃ ಪ್ರತಿಷ್ಠೆ – ಬ್ರಹ್ಮ ಕಲಶೋತ್ಸವದ ಭಾಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶರ್ವವಚನ ನೀಡಿದರು. ನಾವೆಲ್ಲ ಒಂದಾಗಿ ನಮ್ಮ ದೇಶ, ಸಂಸ್ಕ್ರತಿಯನ್ನು ಕಾಪಾಡಬೇಕು. ಶಂಕರನಾರಾಯಣರು ದೇಶಕ್ಕೆ ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದರು.

ಶಂಕರನಾರಾಯಣರದು ಅಭೇದ್ಯವಾದ ಸ್ನೇಹ. ಅವರಂತೆ ನಾವೆಲ್ಲ ಸಮಾಜದಲ್ಲಿ ಐಕ್ಯಮತ್ಯದಿಂದ ಬಾಳಬೇಕಾಗಿದೆ. ನಾವು ದೇವರ ಹೆಸರಿನಲಿ ಕಚ್ಚಾಡುವುದನ್ನು ಬಿಟ್ಟು ಸಾಮರಸ್ಯದಿಂದ ಬಾಳಬೇಕೆಂದು ಕರೆ ನೀಡಿದರು.

ಇಂದು ನಮ್ಮಲ್ಲಿ ಬೇಕಾದಷ್ಟು ಐಶ್ವರ್ಯ, ಅಂತಸ್ತು ಇದೆಯಾದರೂ ಮಾನಸಿಕ ನೆಮ್ಮದಿ ಇಲ್ಲ. ದೇವಸ್ಥಾನಗಳಿಂದ ಮಾತ್ರ ನಮಗೆ ಮನಶ್ಯಾಂತಿ ದೊರೆಯುವುದು ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.

ದೈವೀಶ್ರದ್ದೆ, ಸಂಸ್ಕ್ರತಿಯನ್ನು ಕಾಪಾಡುವುದು ದೇವಸ್ಥಾನಗಳ ಉದ್ದೇಶ. ದೈವೀಶಕ್ತಿಯ ಪ್ರೇರಣೆಯಿಂದ ಸಮಾಜ ಬೆಳಗಲಿ, ಶ್ರದ್ದೆ ಇನ್ನಷ್ಟು ತುಂಬಲಿ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

ಅಧ್ಯಕ್ಷತೆಯನ್ನು ಶಂಕರನಾರಾಯಣ ದೇವಸ್ಥಾನದ ಆಡಳಿತ ಮೋಕ್ತೇಸರ ಟಿ. ರಾಘವೇಂದ್ರ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಪ್ರಮೋದ್ ಮದ್ವರಾಜ್, ನಗರಸಭೆ ಅಧ್ಯಕ್ಷ ಯುವರಾಜ್ ಪಿ., ಮಾಜಿ ಶಾಸಕ ರಘುಪತಿ ಭಟ್, ನಗರಸಭೆ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ನಗರಸಭಾ ಸದಸ್ಯೆ ಮೀನಾಕ್ಷಿ ಮಾಧವ , ಮಟ್ಟು ಪ್ರವೀಣ್ ತಂತ್ರಿ, ಸಹಮೋಕ್ತೇಸರರಾದ ಕೆ. ರಾಘವೇಂದ್ರ ಭಟ್, ವಿಜಯ ಎಂ. ಬಂಗೇರ, ಕಾಳು ಶೇರಿಗಾರ್, ಕೆ. ಟಿ. ಪ್ರಸಾದ್, ಈಶ್ವರ್, ಸುರೇಶ್ ಶೆಟ್ಟಿ, ಸುಧಾ ಉಳಿತ್ತಾಯ, ಡಾ. ಗೋದಾವರಿ ಮೊದಲಾದವರು ಉಪಸ್ಥಿತರಿದ್ದರು.

ದೇವಳದ ಆಡಳಿತ ಮೊಕ್ತೇಸರ ಟಿ. ರಾಘವೆಂದ್ರ ರಾವ್, ಪಾಕತಜ್ಞ ರಾಘವೇಂದ್ರ ಭಟ್, ಜೀರ್ಣೋದ್ದಾರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ರವರನ್ನು ಪೇಜಾವರ ಮತ್ತು ಸುಬ್ರಹ್ಮಣ್ಯ ಶ್ರೀಗಳು ಸಮ್ಮಾನಿಸಿದರು. ಜೀರ್ಣೋದ್ದಾರ ಸಮತಿಯ ಗೌರವಾಧ್ಯಕ್ಷ ಕೆ. ರವಿರಾಜ ಹೆಗ್ಢೆ ಸ್ವಾಗತಿಸಿದರು. ಜನಾರ್ದನ ಕೊಡವೂರು ಹಾಗೂ ಸತೀಶ್ ಕೊಡವೂರು ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s