ಕೊಡಚಾದ್ರಿ ತಪ್ಪಲು ಅತಿಕ್ರಮಣ-ಆಡಳಿತ ಪಕ್ಷದ ಕೈ ವಾಡ: ಸಿಬಿಐ ತನಿಖೆಗೆ ಒತ್ತಾಯ

Posted: ಮಾರ್ಚ್ 6, 2014 in Uncategorized
ಟ್ಯಾಗ್ ಗಳು:, , , , , , , , , , ,

ಉಡುಪಿ: ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಎಸ್ಟೇಟ್ ಮಾಲಿಕರು ನೂರಾರು ಎಕ್ರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಕೊಟ್ಯಂತರ ರು. ಮೊತ್ತದ ಅರಣ್ಯ ನಾಶ ಮಾಡಿದ್ದಾರೆ. ಮ್ಯಾಂಗನೀಸ್ ಗಣಿಗಾರಿಕೆ ಮಡುವ ಹುನ್ನಾರವೂ ಇದರ ಹಿಂದುಗಡೆ ಇದೆ. ಕೇರಳದ ಆಡಳಿತ ಪಕ್ಷದ ಪ್ರಭಾವೀ ರಾಜಕಾರಣಿಗಳ ಕೈವಾಡವೂ ಇರುವ ಬಗ್ಗೆ ಸಂಶಯವಿದೆ. ಸ್ಥಳೀಯ ಜಿಲ್ಲಾ ಉಸ್ತುವರಿ ಸಚಿವರು, ಸಂಸದರು, ಶಾಸಕರು ಎಲ್ಲರೂ ಇಲ್ಲಿ
ನಡೆಯುತ್ತಿರುವ ಭೂಒತ್ತುವರಿ ಬಗ್ಗೆ ಮೌನ ವಹಿಸಿರುವುದನ್ನು ನೋಡಿದರೆ ಶಂಕೆ ಬಲವಾಗುತ್ತದೆ. ಈ ಬಗ್ಗೆ ಸರಕಾರ ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಕೆ.ಕೆ.ಸಾಬು ಸರಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾರ್ಚ್ 5ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಪಶ್ಚಿಮಘಟ್ಟದದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅತಿಕ್ರಮಣ, ಅರಣ್ಯನಾಶ, ಹೋರಾಟಗಾರರ ವಿರುದ್ಧ ಹಾಕಿಕೊಂಡು ಬರಲಾದ ಸುಳ್ಳು ಕೇಸುಗಳು, ರಾಜಕೀಯ ಪ್ರಭಾವ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾ ಅವರು ಈ ಒತ್ತಾಯ ಮಾಡಿದರು.

ವೆಂಕಟ್ರಮಣ ಐಯ್ಯಂಗಾರ್ ಎಂಬವರಿಂದ ಕೋಯಕುಟ್ಟಿ ಮತ್ತು ಕಂಪೆನಿಯು ಇಲ್ಲಿನ 6 ಸಾವಿರಕ್ಕೂ ಅಧಿಕ ಭೂಮಿಯನ್ನು ಖರೀದಿಸಿದೆ. ಇದರೊಂದಿಗೆ ಸಾವಿರಕ್ಕೂ ಅಧಿಕ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆಂದು ಸಾಬು ಆರೋಪಿಸಿದರು.

ಇಲ್ಲಿನ ಅತಿಕ್ರಮಿತ ಭೂಮಿಯನ್ನು ಸರಕಾರ ವಶಪಡಿಸಿಕೊಂಡು, ಬಳಿಕ ನಿವೇಶನ ರಹಿತ ಬಡವರಿಗೆ ವಿತರಿಸಬೇಕು ಎಂದು ಆಗ್ರಹಿಸಿದ ಸಾಬು, ಜಡ್ಕಲ್ ಗ್ರಾಮದ ಕೊಚ್ಚಲುಮಕ್ಕಿ ಎಂಬಲ್ಲಿಯೂ 30 ಎಕ್ರೆ ಸರಕಾರಿ ಭೂಮಿಯನ್ನು ಅತಿಕ್ರಮಣ ಮಡಲಾಗಿದೆ. ಇಂಥ ಹಲವು ಅತಿಕ್ರಮಣಗಳು ಇಲ್ಲಿ ನಡೆದಿದೆ. ಆದರೆ ಅತಿಕ್ರಮಣ ತಡೆಯಬೇಕದ ಎಲ್ಲರೂ ಮೌನವಾಗಿದ್ದಾರೆ ಎಂದು ಸಾಬು ಹೇಳಿದರು.

ಹತ್ತಾರು ಎಸ್ಟೇಟ್ ಮಾಲೀಕರು ಕೊಡಚಾದ್ರಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಹರಿಯುವ ಹಳ್ಳಕ್ಕೆ ತಡೆ ಒಡ್ಡಿದ್ದಾರೆ. ಇದರಿಂದಾಗಿ ಕೃಷಿಕರಿಗೆ ನಿರಿನ ಸಮಸ್ಯೆ ಉಂಟಾಗಿದೆ. ಇಲ್ಲಿ ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಇದೆ ಎಂದು ದಸಂಸ ಮುಖಂಡ ವಸುದೇವ ಮುದೂರು ಅಪಾದಿಸಿರು.

ಇಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಜನಪ್ರತಿನಿಧಿಗಳಿಗೆ, ಸರಕಾರಿ
ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಒಂದು ವಾರದೊಳಗೆ ನ್ಯಾಯ ಸಿಗದೇ ಹೋದಲ್ಲಿ ಕೇಮಾರು ಈಶ ವಿವಿಠಲದಾಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ರಾಜ್ಯದ ಇತರ ಪರಿಸರ-ಜನಪರ ಸಂಗಟನೆಗಳ ಬೆಂಬಲ ಪಡೆದುಕೊಂಡು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ
ಹಮ್ಮಿಕೊಳ್ಳುವುದಾಗಿ ಕೆ.ಕೆ.ಸಾಬು ಮುನ್ನೆಚ್ಚರಿಕೆ ನೀಡಿದರು.

ಹೋರಾಟಗಾರರಾದ ರಾಮಚಂದ್ರ ಸೋಮಯಾಜಿ, ವಸಂತ, ಸುವರ್ಣ ಕುಮಾರ್ ಮುಸದೂರು, ಎಂ.ವಿಜಯ ಶಾಸ್ತ್ರೀ, ರವೀಂದ್ರ, ಉದಯ ಎಸ್.ಪೂಜಾರಿ, ಲಕ್ಷ್ಮಣ ಶೆಟ್ಟಿ, ವಿಘ್ನೇಶ್ವರ ಶಾಸ್ತ್ರೀ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s