ಬಸ್ರೂರು ರಾಜೀವ್ ಶೆಟ್ಟಿ ರೆಡ್ ಕ್ರಾಸ್ ಸೊಸೈಟಿ ಯ ಗೌರವವನ್ನೇ ಹಾಳುಗೆಡವಿದ್ದಾರೆ: ಚಿತ್ತಾರಿ ವೆಂಕಟ ಸ್ವಾಮಿ

Posted: ಮಾರ್ಚ್ 9, 2014 in Uncategorized
ಟ್ಯಾಗ್ ಗಳು:, , , , , , , , , , , ,

ಉಡುಪಿ: ಡಾ.ಶರತ್ ಕುಮಾರ್ ಅವರು ವೀಣಾ ಕೆ.ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಡಾ.ರಾಮಚಂದ್ರ ಬಾಯರಿ ಎಂಬವರ ವಿರುದ್ಧ ಉಡುಪಿ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದಾವೆ ಹೂಡಿದ್ದಾರೆ. ನ್ಯಾಯಾಧೀಶರು ಉಡುಪಿ ನಗರ ಠಾಣೆಯ ಪೊಲೀಸರಿಗೆ ಕ್ರಿಮಿನಲ್ ಪ್ರೊಸಿಜರ್ ಅಡಿಯಲ್ಲಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈ ಮೊಕದ್ದಮೆಯಲ್ಲಿ ಎರಡನೇ ಅಪಾದಿತರು ಬೇರೆ ಯಾರೂ ಆಗಿರದೆ ಬಸ್ರೂರು ರಾಜೀವ್ ಶೆಟ್ಟಿಯವರೇ ಆಗಿದ್ದಾರೆ. ಈ ಕೇಸ್ ನಲ್ಲಿ ಪೊಲೀಸರು ಎಫ್ಐಆರ್
ದಾಖಲಿಸಿದ್ದಾರೆ. ನ್ಯಾಯಾಲಯವು ವಾರೆಂಟ್ ಹೊರಡಿಸಿದೆ. ಬಸ್ರೂರು ರಾಜೀವ್ ಶೆಟ್ಟಿಯವರು ನ್ಯಾಯಾಲಯದಿಮದ ಬೇಲ್ ಪಡೆದುಕೊಂಡಿದ್ದಾರೆ. ಬೇಲ್ ಮೇಲೆ ಇರುವ ವ್ಯಕ್ತಿಗಳು ಸ್ಟಾರ್ ಕೀ ಫೌಂಡೇಶನ್ ಸಹಯೋಗದೊಂದಿಗೆ ರೆಡ್ಕ್ರಾಸ್ ಸಂಸ್ಥೆಯಿಂದ ಶ್ರವಣದೋಷವಿರುವ ಮಕ್ಕಳಿಗೆ ನವೆಂಬರ್ 2013ರಲ್ಲಿ ನಡೆದ ಹಿಯರಿಂಗ್ ಏಡ್ಸ್ ಅಳವಡಿಸುವ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರ ಪಕ್ಕದಲ್ಲಿ ಕುಳಿತದ್ದೇ ದೊಡ್ಡ ತಪ್ಪು ಎಂದು ರೆಡ್ಕ್ರಾಸ್ ಸೊಸೈಟಿಯ ರಾಜ್ಯ ಆಡಳಿತ ಮಂಡಳಿ ಸದಸ್ಯ ಗುಲ್ಬರ್ಗಾದ ಚಿತ್ತಾರಿ ವೆಂಕಟಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಬೆಂಗಳೂರಿನಲ್ಲಿರುವ ರಾಜ್ಯ ಶಾಖೆಯ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 20ರಂದು ನಡೆದ ರಾಜ್ಯ ಅಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮಗಳಿದ್ದಾಗ ಸದಸ್ಯರ ಸೇವೆ ಬಳಸಿಕೊಂಡು ಬಳಿಕ ಅವರುಗಳಿಗೆ ಅವಮಾನವಾಗುವ ರೀತಿಯಲ್ಲಿ ಬಸ್ರೂರು ರಾಜೀವ್ ಶೆಟ್ಟಿಯವರು ನಡೆದುಕೊಳ್ಳುತ್ತಿರುತ್ತಾರೆ. ಅನೇಕ ವಿಷಯಗಳಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸದಸ್ಯರುಗಳ ನಡುವೆ ಒಡಕು ಮೂಡಿಸುವುದು, ಸದಸ್ಯರನ್ನು ಬಿಟ್ಟು ಹೊರಗಿನ ವ್ಯಕ್ತಿಗಳನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆಯ ಗೌರವವನ್ನು
ಹಾಳುಗೆಡವಿದ್ದಾರೆ ಎಂದು ಚಿತ್ತಾರಿ ವೆಂಕಟಸ್ವಾಮಿ ಸಭೆಯಲ್ಲಿ ಆರೋಪಿಸಿದ್ದರು.

ರೆಡ್ ಕ್ರಾಸ್ ಸಂಸ್ಥೆಯ ಏಳು ಸೂತ್ರಗಳಿಗೆ ವಿರುದ್ಧವಾಗಿ ಬಸ್ರೂರು ರಾಜೀವ್ ಶೆಟ್ಟಿಯವರು ನಡೆದುಕೊಳ್ಳುತ್ತಿರುವುದರಿಂದ ಕೂಡಲೇ ಅವರನ್ನು ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಸಬಾಪತಿ ಸ್ಥಾನದಿಂದ ರಿಮೂವ್ ಮಾಡಬೇಕು ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ಸಸ್ಪೆಂಡ್ ಮಾಡಬೇಕು ಎಂದು ಚಿತ್ತಾರಿ ವೆಂಕಟಸ್ವಾಮಿ ಸಭೆಯಲ್ಲಿ ಒತ್ತಾಯಿಸಿದ್ದರು.

ಅಂತಿಮವಾಗಿ ಈ ಸಭೆಯಲ್ಲಿ ಬಸ್ರೂರು ರಾಜೀವ್ ಶೆಟ್ಟಿಯವರನ್ನು ಆಡಳಿತ ಮಂಡಳಿ ಸಭೆಯು ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಛಾಟಿಸಿತು ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ಸಸ್ಪೆಂಡ್ ಮಾಡಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s