ಕೊಡವೂರು: ಸ್ಮರಣ ಸಂಚಿಕೆ ಬಿಡುಗಡೆ

Posted: ಮಾರ್ಚ್ 11, 2014 in Uncategorized

ಉಡುಪಿ: ಇತಿಹಾಸ ಕಣ್ಣಿಗೆ ಕಾಣುತ್ತದೆ. ಪುರಾಣವನ್ನು ಸಮರ್ಥನೆ ಮಾಡುವುದು ಕಷ್ಟ. ಆದರೆ ಆದು ಕೊಡವೂರು ಕ್ಷೇತ್ರದಲ್ಲಿ ದೃಡವಾಗಿದೆ ಎಂದು ಜಾನಪದ ಸಂಶೋದಕ
ಕೆ.ಎಲ್.ಕುಂಡಂತಾಯ ತಿಳಿಸಿದರು.
ಮಾರ್ಚ್ 10ರಂದು ಸಂಜೆ ನಡೆದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ
ಬ್ರಹ್ಮಕಲಶೋತ್ಸವ ಪ್ರಯುಕ್ತ ರಚಿಸಲಾದ ಸ್ಮರಣಸಂಚಿಕೆ ‘ಶ್ರೀಶಂ ವೈಭವ’ದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕೊಡವೂರು ದೇವರು ದೈವಗಳ ಒಂದು ಅದ್ಭುತ ಕ್ಷೇತ್ರ. ಜನಪದೀಯ ಹಿನ್ನಲೆಯೊಂದಿಗೆ ಮತ್ತೆ ಬರುವುದು ಪುರಾಣ. ಕೊಡವೂರಿನಲ್ಲಿ ಒಂದು ಮನಸ್ಸು, ಅಲೋಚನೆ, ದೃಢ ಸಂಕಲ್ಪ ಸಾವಿರಾರು ಕೈಗಳು ಕಾಲಗರ್ಭದ ಸತ್ಯವನ್ನು ಶೋಧಿಸಿ ಅದನ್ನು ದೃಡೀಕರಿಸಿ ಆ ಸತ್ಯವನ್ನು ಪ್ರಪಂಚಕ್ಕೆ ತೋರಿಸಿದೆ ಎಂದರು.

ಇಂದು ಪ್ರತಿಯೊಂದು ಮನೆಯಲ್ಲಿಯೂ ಭಿನ್ನಾಭಿಪ್ರಾಯವಿದೆ. ಎಲ್ಲರಲ್ಲೂ ನಂಜು ತುಂಬಿಕೊಂಡು ಸೌಹಾರ್ದತೆಯ ಕೊರತೆ ಕಾಣುತ್ತಿದೆ. ನಮ್ಮ ಮನೆಯಲ್ಲಿನ ಸಂಬಂಧಗಳ ಅಭಿಪ್ರಾಯಗಳು ಬೇರೆಯಾಗಿರದೇ ಸಂಬಂಧಗಳು ಗಟ್ಟಿಯಾದರೆ ಸಮಾಜವೂ ಸುಧಾರಣೆಯಾಗುತ್ತದೆ. ಆ ಮೂಲಕ ದೇವಳದ ಸಾನಿಧ್ಯವೂ ವೃದ್ದಿಯಾಗುತ್ತದೆ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶಿರ್ವದಿಸಿದರು.

ದೇವಳದ ಆಡಳಿತ ಮೊಕ್ತೇಸರ ಟಿ. ರಾಘವೆಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲಿಯಾನ್, ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯ್ಯಮ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷ ದಿನೇಶ್ ಜಿ. ಸುವರ್ಣ, ಮದ್ವನಗರ ವಿಶ್ವಬ್ರಾಹ್ಮಣ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ಅಚ್ಚುತ ಆಚಾರ್ಯ,
ಬ್ರಹ್ಮಕಲಶೋತ್ಸವ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ, ಸ್ಮರಣ ಸಂಚಿಕೆಯ ಸಂಪಾದಕಿ ಪೂರ್ಣಿಮಾ ಜನಾರ್ದನ್, ಹಯವದನ ತಂತ್ರೀ, ಎಲ್ಐಸಿಯ ನಿವೃತ್ತ ಅಧಿಕಾರಿ ಜಯರಾಮ್ ಕಲ್ಮಾಡಿ ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಹ ಮೊಕ್ತೇಸರರಾದ ಕೆ. ರಾಘವೇಂದ್ರ ಭಟ್, ಕೆ. ಟಿ. ಪ್ರಸಾದ್, ಸುರೇಶ್ ಶೆಟ್ಟಿ, ವಿಜಯ ಎಂ. ಬಂಗೇರ, ಕಾಳು ಶೇರಿಗಾರ, ಈಶ್ವರ್, ಸುಧಾ ಉಳಿತ್ತಾಯ, ಡಾ. ಗೋದಾವರಿ ಮತ್ತಿತರರು ಉಪಸ್ಥಿತರಿದ್ದರು. ಜೀಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಸ್ವಾಗತಿಸಿದರು. ಜನಾರ್ದನ ಕೊಡವೂರು ಮತ್ತು ಸತೀಶ್ ಕೊಡವೂರು ನಿರೂಪಿಸಿದರು. ಸಹ ಮೊಕ್ತೇಸರ ಸುರೇಶ್ ಶೆಟ್ಟಿ ವಂದಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s