ಸುನ್ನಿ ಗೂಂಡಾಗಿರಿ, ರಾಜಕಾರಣಿಗಳ ಸಂಚಿನಿಂದ ಧಾ ರ್ಮಿಕ ಪ್ರವಚನ ರದ್ದು: ಸಲಫಿ ನಾಯಕ ಶಫಿ

Posted: ಮಾರ್ಚ್ 13, 2014 in Uncategorized

ಉಡುಪಿ: ದಾರಿ ತಪ್ಪಿದ ಸುನ್ನಿ ಯುವಕರ ಗೂಂಡಾಗಿರಿ ಮತ್ತು ಆಡಳಿತ ಪಕ್ಷದ ರಾಜಕಾರಣಿಗಳ ಷಡ್ಯಂತ್ರದಿಂದಾಗಿ ಮಾರ್ಚ್ 12ರಂದು ಸಂಜೆ ಹೆಜಮಾಡಿ ಕಣ್ಣಂಗಾರ್ ಬೈಪಾಸ್ ನಲ್ಲಿ ಆಯೋಜಿಸಿದ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ರದ್ದುಪಡಿಸಬೇಕಾಗಿ ಬಂತು ಎಂದು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (ರಿ) ಇದರ ದಕ್ಷಿಣ ಕರ್ನಾಟಕ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಶಫಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.12ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ತಮ್ಮ ಸಂಸ್ಥೆಯ ಉದ್ದೇಶ ಮತ್ತು ಕಾರ್ಯಕ್ರಮ ರದ್ಧಾಗಲು ಕಾರಣವಾದ ಘಟನೆಗಳ ಬಗ್ಗೆ ಅವರು ಸಮಗ್ರ ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು.

ಮಾರ್ಚ್ 10ರಂದು ಸಂಜೆ ಸುನ್ನಿ ಯುವಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧಾರ್ಮಿಕ ಪ್ರವಚನಕ್ಕೆ ಅವಕಾಶ ನೀಡಬಾರದೆಂದು ಉಗ್ರ ಪ್ರತಿಭಟನೆ ನಡೆಸಿದರು. ಪೊಲೀಸರು ಕಾರ್ಯಕ್ರಮಕ್ಕೆ ಧ್ವನಿವರ್ಧಕ ಪರವಾನಿಗೆ ನೀಡಿಯಾಗಿತ್ತು. ಪ್ರತಿಭಟನೆಯ
ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಮತ್ತು ಚುನಾವಣೆ ಬಳಿಕ ನಡೆಸುವಂತೆ ಪೊಲೀಸ್ ಅಧಿಕಾರಿಗಳು ವಿನಂತಿಸಿಕೊಂಡ ಕಾರಣಕ್ಕೆ ಅವರ ಮನವಿಗೆ ಗೌರವಿ ನೀಡಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಮೆಜಾರಿಟಿ ರಾಜಕೀಯದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ರಾಜಕರಣಿಗಳು ಸಹ ಪ್ರತಿಭಟನೆ ನಡೆಸಿದವರ ಪರವಾಗಿ ನಡೆದುಕೊಂಡು ಧಾರ್ಮಿಕ ಪ್ರವಚನದ ವಿರುದ್ಧ ಸಂಚು ನಡೆಸಿದರೆಂದು ಶಫಿ ಗಂಭೀರ ಆರೋಪ ಮಾಡಿದರು.

ಇಸ್ಲಾಂನಲ್ಲಿ ಬಹುದೇವಾರಾಧನೆಗೆ ಅವಕಾಶವಿಲ್ಲ. ಬಹುದೇವಾರಾಧನೆ ಮಾಡುವಾತ ನೈಜ ಮುಸ್ಲೀಂ ಆಗಲಾರ. ಪುರೋಹಿತರಿಂದಾಗಿ ಇಸ್ಲಾಂನಲ್ಲಿ ಮೂಢನಂಬಿಕೆ, ಕಂದಾಚಾರ, ದರ್ಗಾ ಪೂಜೆ, ಹರಕೆ ತುಂಬಿಕೊಂಡಿದೆ. ಪ್ರಾಣಿಗಳ ಸಮಾಧಿಯನ್ನೂ ದರ್ಗಾ ಮಾಡಿಕೊಂಡದ್ದಿದೆ. ಮಂಗಳೂರಿನ ಪಾಂಡೇಶ್ವರದ ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲಿರುವ ದರ್ಗಾ ಹಿಂದೆ ಪೊಲೀಸ್ ಅಧಿಕಾರಿ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದ ಹಿಂದೂ ಮಹಿಳೆಯೊಬ್ಬರ ಸಮಾಧಿ. ಇದನ್ನೇ ಬಳಿಕ ದರ್ಗಾ ಮಾಡಲಾಯಿತು. ಇದೆಲ್ಲಾ ಇದೀಗ ಹಣ ಮಾಡುವ ದಂದೆಯಾಗಿ ಪರಿಣಮಿಸಿದೆ ಎಂದು ಇಸ್ಮಾಯಿಲ್ ಶಫಿ ಹೇಳಿದರು.

ಮರಣ ಹೊಂದಿದ ಮಹಾತ್ಮರಲ್ಲಿ ಪ್ರಾರ್ಥನೆ ಮಾಡುವುದು, ಅವರ ಬಗ್ಗೆ ಪವಾಡಗಳ ಕಟ್ಟು ಕಥೆಯನ್ನು ಹೆಣೆದು ಪ್ರಚಾರ ಮಾಡುವುದು ಇತ್ಯಾದಿಗಳಿಂದಾಗಿ ಇಸ್ಲಾನಲ್ಲಿ ಈಗ ಕಲಬೆರಕೆಯೇ ತುಂಬಿದೆ. ಇದಕ್ಕೆಲ್ಲಾ ಕರ್ನಾಟಕ ಸಲಫಿ ಮೂವ್ ಮೆಂಟ್ ನ ವಿರೋಧವಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ. ಈ ಸಂಘಟನೆಗೆ ದಕ್ಷಿಣ ಕರ್ನಾಟಕದ 6 ಜಿಲ್ಲೆಗಳಲ್ಲಿ 3 ಲಕ್ಷ ಮಂದಿ ಸದಸ್ಯರಿದ್ದಾರೆ ಎಂದು ಇಸ್ಮಾಯಿಲ್ ವಿವರ ನೀಡಿದರು.

ಅಪರಾಧ ಪ್ರಪಂಚದಲ್ಲಿ ಮುಸ್ಲೀಂ ಯುವಕರ ಪಾತ್ರ, ಸಂಖ್ಯೆ ಬಹಳ ದೊಡ್ಡದಿದೆ. ಇದಕ್ಕೆ ಪುರೋಹಿತರ ಬೆಂಬಲವೂ ಇದೆ. ಇಂಥವರಿಗೆ ಸರಿಯದ ಬೋದನೆ ನೀಡುವುದೂ ಮೂವ್ ಮೆಂಟ್ ಕಾರ್ಯವಾಗಿದೆ. ಪುರೋಹಿತರ ಪ್ರಚೋದನೆಯಿಂದ ಪ್ರೇರಿತರಾಗಿ ಸಂಸ್ಥೆಯ ಕಾರ್ಯಕ್ರಮಕ್ಕೆ ಕಲ್ಲು ಹೊಡೆದ ಅನೇಕ ಮಂದಿ ಬಳಿಕ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪದೊಂದಿಗೆ ಸಂಸ್ಥೆಗೆ ಸೇರಿದವರೂ ಇದ್ದಾರೆ. ಆದರೆ ನಾವು ರಾಜಿ ಮಾತುಕತೆಗೆ ಬಂದವರ ಜೊತೆಗೆ ಅವರನ್ನು ಕ್ಷಮಿಸಿ ರಾಜಿಯಾಗಿದ್ದೇವೆ, ಮುಂದೆಯೂ ರಾಜಿಯಾಗಲು ಸಿದ್ದರಿದ್ದೇವೆ. ಯಾವುದೇ ರೀತಿಯ ಪ್ರತಿಕಾರ ಕ್ರಮಗಳಿಗೆ ಮಾತ್ರ ಇಳಿಯಲಾರೆವು. ಆದರೆ ಯಾವುದೇ ಕಾರಣಕ್ಕೂ ತತ್ವದೊಂದಿಗೆ ರಾಜಿ ಇಲ್ಲ ಎಂದು ಇಸ್ಮಾಯಿಲ್ ಶಫಿ ಸ್ಪಷ್ಟಪಡಿಸಿದರು.

ಮೊಹಮ್ಮದ್ ಹನೀಫ್, ರಹಮತುಲ್ಲಾ, ಉಮ್ಮರ್ ಫಾರೂಖ್, ಅಬ್ದುಲ್ ಜಲೀಲ್, ಅಬ್ದುಲ್ ರವೂಫ್ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s