ರಾಜಕೀಯ ಷಡ್ಯಂತ್ರದಿಂದ ನೀರಿನ ಕೃತಕ ಅಭಾವ ಸೃಷ್ ಟಿ: ರಘುಪತಿ ಭಟ್ ಗಂಭಿರ ಆರೋಪ

Posted: ಮಾರ್ಚ್ 14, 2014 in Uncategorized

ಉಡುಪಿ: ಉಡುಪಿ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಜ್ಯಾರಿಗೊಳಿಸಿದ ಸ್ವರ್ಣ ಎರಡನೇ ಹಂತದ ಯೋಜನೆಯನ್ನು ವಿಫಲ ಯೋಜನೆ ಎಂದು ಬಿಂಬಿಸುವ ರಾಜಕೀಯ ಷಡ್ಯಂತ್ರದ ಭಾಗವಾಗಿ ಪ್ರಸ್ತುತ ನಗರಸಭೆಯ ಕಾಂಗ್ರೆಸ್ ಆಡಳಿತವು ನಗರಸಭಾ ವ್ಯಾಪ್ತಿಯಲ್ಲಿ ಕೃತಕ ನೀರಿನ ಅಭಾವವನ್ನು ಸೃಷ್ಟಿಸಿದೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.

ಮಾರ್ಚ್ 13ರಂದು ಪತ್ರಕರ್ತರನ್ನು ಬಜೆ ಮತ್ತು ಶಿರೂರು ಡ್ಯಾಂಗೆ ಕರೆದೊಯ್ದು ವಾಸ್ತವ ಸ್ಥಿತಿಯನ್ನು ತೋರಿಸುವುದರ ಜೊತೆಗೆ, ಉಡುಪಿ ನಗರ ಬಿಜೆಪಿ ಸಮಿತಿಯು ನಗರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ನಗರಸಭೆಯ ವಿರೋಧ ಪಕ್ಷದ ನಾಯಕ ಡಾ.ಎಂ.ಆರ್.ಪೈ ಅಧ್ಯಕ್ಷತೆಯಲ್ಲಿ ರಚಿಸಿದ ಸತ್ಯ ಶೋಧನಾ ಸಮಿತಿಯು ಅಧ್ಯಯನ ನಡೆಸಿ ಕಂಡುಕೊಂಡ ಮಾಹಿತಿಗಳನ್ನು ವಿವರಿಸುತ್ತಾ ರಘುಪತಿ ಭಟ್ ಮಾತನಾಡುತ್ತಿದ್ದರು.

ಕಳೆದ ಒಂದು ತಿಂಗಳಿಂದ ನಗರದಲ್ಲಿ ನೀರಿನ ಹಾಹಾಕಾರವಿದೆ. ಇದು ಕಾಂಗ್ರೆಸ್ ಆಡಳಿತ ಸೃಷ್ಟಿಸಿದ ಕೃತಕ ನೀರಿನ ಅಭಾವವೇ ಹೊರತು ಬೇರೇನೂ ಅಲ್ಲ. ಬಜೆ ಮತ್ತು ಶಿರೂರು ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಕಳೆದ ಸಲ ಇದೇ ಅವಧಿಯಲ್ಲಿ ಎಷ್ಟು ನೀರು ಇತ್ತೋ ಅದಕ್ಕಿಂತ ಅಧಿಕ ನೀರು ಈಗ ಲಭ್ಯವಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಶಿರೂರು ಡ್ಯಾಂನ ಒಂದು ಗೇಟ್ ನ್ನು ತೆರೆದಾಗಿತ್ತು. ಈ ಬಾರಿ ಇನ್ನೂ ಸಹ ಶಿರೂರು ಡ್ಯಾಂನಿಂದ ಗೇಟ್ ತೆರೆಯಲಾಗಿಲ್ಲ ಎಂದು ಭಟ್ ವಿವರಿಸಿದರು.

ನಗರಸಭಾ ಆಡಳಿತ ಸರಿಯಾಗಿ ನೀರಿನ ನಿರ್ವಹಣೆ ಮಾಡಿದಲ್ಲಿ ಮುಂದಿನ ಮೂರು ತಿಂಗಳಿನವರೆಗೂ ನೀರಿನ ಸಮಸ್ಯೆ ಬಾರದು. ಅಷ್ಟು ನೀರು ಇದೆ. ಪ್ರಸ್ತುತ ನೀರನ್ನು ವ್ಯರ್ಥವಾಗಿ ಆವಿಯಾಗಲು ಬಿಟ್ಟು ಬಿಡಲಾಗಿದೆ. ನಗರದ ನಾಗರಿಕೆ ಮಾರ್ಚ್ 7ರಿಂದ ಎರಡು ದಿನಕ್ಕೊಮ್ಮೆ ನೀರು ಬಿಡುವ ಮೂಲಕ ದ್ರೋಹವೆಸಗಲಾಗುತ್ತಿದೆ. ಇದೇ ಸಮಯದಲ್ಲಿ ಮಣಿಪಾಲದ ಮಾಹೆಗೆ ದಿನದ 24 ಗಂಟೆಯೂ ನೀರು ಬಿಡಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಮಾಜಿ ಶಾಸಕರು ಪ್ರಶ್ನಿಸಿದರು.

ಮರಳು ತೆಗೆಯುವುದನ್ನು ಇನ್ನೂ ಸಹ ನಿಲ್ಲಿಸುವ ಕೆಲಸ ಮಾಡಿಲ್ಲ. ಶಾಸಕರು ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸವನ್ನೇ ಮಡಿಲ್ಲ. ಕುಡಿಯುವ ನೀರಿನ ವಿಷಯವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಈ ಮೂಲಕ ಕೃತಕ ನೀರಿನ ಅಭಾವ ಸೃಷ್ಟಿಸಿ ಬಳಿಕ ಟ್ಯಾಂಕರ್ ಮೂಲಕ ನೀರು ವಿತರಿಸಿ ಓಟಿನ ಬೇಟೆ ಆಡುವ ಉದ್ಧೇಶವೂ ಇದರ ಹಿಂದೆ ಇರುವ ಹಾಗಿದೆ ಎಂದು ರಘುಪತಿ ಭಟ್ ಅಪಾದಿಸಿದರು.

ಸತ್ಯಶೋಧನಾ ಸಮಿತಿಯ ವರದಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರಿಗೆ ಸಲ್ಲಿಸಲಾಗುವುದು. ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಕನಿಷ್ಟ ಎಪ್ರಿಲ್ ಕೊನೆಯ ವರೆಗಾದರೂ ಪ್ರತಿದಿನ ನಗರದ ನಾಗರಿಕರಿಗೆ ಪ್ರತಿ ದಿನವೂ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ನಗರಸಭೆ ಆಡಳಿತ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭಟ್ ಮುನ್ನೆಚ್ಚರಿಕೆ ನೀಡಿದರು.

ಎರಡೂ ಡ್ಯಾಂಗಳಲ್ಲೂ ಮರಳು ಚೀಲ ಹಾಕಿದ ರೀತಿ ಸರಿಯಾಗಿಲ್ಲ. ಇದರಿಂದಾಗಿ ನೀರು ಅಣೆಕಟ್ಟಿನಿಂದ ಸೋರಿ ಹೋಗುತ್ತಿದೆ. ಮರಳು ಚೀಲ ಹಾಕುವ ಗುತ್ತಿಗೆದಾರರನ್ನು ಬದಲಾಯಿಸಿದ್ದು ಮತ್ತು ಪ್ರಸ್ತುತ ಮರಳು ಚೀಲ ಹಾಕಿದ ವ್ಯಕ್ತಿಗೆ ಅನುಭವದ ಕೊರತೆಯೇ ಇದಕ್ಕೆ ಕಾರಣವೆಂದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕರು ಹಾಗೂ ಪತ್ರಕರ್ತರ ಜೊತೆಗೆ ಸ್ಥಳೀಯರು ದೂರಿದರು.

ಡಾ.ಎಂ.ಅರ್.ಪೈ, ದಿನಕರ ಶೆಟ್ಟಿ ಹೆರ್ಗ, ಕಿರಣ್ ಕುಮಾರ್, ನವೀನ್ ಭಂಡಾರಿ, ರಾಘವೇಂದ್ರ ಕಿಣಿ, ವಸಂತಿ ಶೆಟ್ಟಿ, ಗೀತಾ ಶೇಟ್, ರಕ್ಷತಾ ಬಾಲಕೃಷ್ಣ ಪೂಜಾರಿ, ವಿಜಯ ಕುಂದರ್ ಮೊದಲಾದವರು ಬಜೆ ಮತ್ತು ಶಿರೂರು ಡ್ಯಾಂಗೆ ಭೇಟಿ ನೀಡಿದ ರಘುಪತಿ ಭಟ್ ಜೊತೆಗಿದ್ದರು. ಚಿತ್ರಗಳು: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s