‘ಕಣ್ಣಂಗಾರ್ ಜಮಾತ್ ಅನುಮತಿ ಪಡೆಯದೆ ಯಾವುದೇ ಮುಸ ್ಲೀಂ ಧಾರ್ಮಿಕ ಸಭೆ ನಡೆಸುವಂತಿಲ್ಲ’

Posted: ಮಾರ್ಚ್ 16, 2014 in Uncategorized

ಉಡುಪಿ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಆರೋಪಿಸಿದಂತೆ ತಾವು ಯಾವುದೇ ರೀತಿಯ ಗೂಂಡಾಗಿರಿಯನ್ನು ನಡೆಸಿಲ್ಲ. ಬದಲಾಗಿ ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಸಲಫಿಗಳ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸಿದ್ದೇವೆ. ಮಾ.12ರಂದು ಸಂಜೆ ಕಣ್ಣಂಗಾರ್ ಬೈಪಾಸ್ ನಲ್ಲಿ ಆಯೋಜಿಸಿದ್ದ ಧಾರ್ಮಿಕ ಪ್ರವಚನದ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಧಾರ್ಮಿಕ ಪ್ರವಚನಕ್ಕೆ ಅನುಮತಿ ನೀಡಿಲ್ಲ ಎಂದು ಕಣ್ಣಂಗಾರ್ ಉರೂಸ್ ಸಮಿತಿ ಸಂಚಾಲಕ ಎಸ್.ಎಚ್.ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

ಮಾ.12ರಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಸಲಫಿ ಮೂವ್ ಮೆಂಟ್, ಕಣ್ಣಂಗಾರ್ ನಲ್ಲಿ ಹಮ್ಮಿಕೊಂಡ ಧಾರ್ಮಿಕ ಪ್ರವಚನವನ್ನು ಸುನ್ನಿ ಗೂಂಡಾಗಳ ಮತ್ತು ಆಡಳಿತ ಪಕ್ಷದ ರಾಜಕಾರಣಿಗಳ ಕೈವಾಡದ ಕಾರಣದಿಂದಾಗಿ ಮುಂದೂಡುವಂತಾಗಿದೆ ಎಂದು ಆರೋಪಿಸಿದ್ದಕ್ಕೆ ಪ್ರತಿಯಾಗಿ, ಮಾ.14ರಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮುಹಮ್ಮದ್ ಹನೀಫ್ ಅವರು ತಮ್ಮ ಮೇಲಿನ ಆರೋಪಗಳನ್ನು
ಅಲ್ಲಗೆಳೆದರು.

ಸರ್ವ ಧರ್ಮಿಯರಿಂದಲೂ ಗೌರವಿಸಲ್ಪಡುವ ಮಂಗಳೂರು ಪಾಂಡೇಶ್ವರದ ಪೊಲೀಸ್ ಕಮಿಷನರ್ ಕಚೇರಿ ಬಳಿಯ ದರ್ಗಾವು ಇತಿಹಸ ಪ್ರಸಿದ್ದವಾಗಿದ್ದು, ಇಸ್ಲಾಮಿಕ್ ಚರಿತ್ರೆ ಗ್ರಂಥಗಳಲ್ಲಿ ಉಲ್ಲೇಕವಿರುವ ಪವಿತ್ರ ತಾಣವಾಗಿದೆ. ಈ ದರ್ಗಾದ ವಿರುದ್ಧ ಹೇಳಿಕೆ ನೀಡಿರುವ ಸಲಫಿಗಳ ಮಾತು ತೀರಾ ಪ್ರಚೋದನಾಕಾರಿಯಾಗಿದೆ. ಇದರಿಮದಾಗಿ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು. ಆದುದರಿಂದ ಮುಂದೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಗೆ ಯಾವುದೇ ಸಭೆ ನಡೆಸಲೂ ಅವಕಾಶ ನೀಡಬಾರದು ಎಂದು ಮುಹಮ್ಮದ್ ಹನೀಫ್ ಅಧಿಕಾರಿಗಳನ್ನು
ವಿನಂತಿಸಿದರು.

ಪೂರ್ವಿಕ ಮುಸಲ್ಮಾನರನ್ನು ಒಳಗೊಂಡ ಶೇಕಡಾ 99ರಷ್ಟು ಮುಸ್ಲೀಮರು ಬಹುದೇವ
ಆರಾಧಕರೆನ್ನುವ ಸಲಫಿಗಳು ತೌಹೀದ್ ಹೆಸರಿನಲ್ಲಿ ಕಚ್ಚಾಡಿ ಪರಸ್ಪರ ಶಿರ್ಕ್ ಆರೋಪವನ್ನು ಮಾಡುತ್ತಿದ್ದಾರೆ. ಜಿನ್ ವಿರೋಧಿಸುವುದಕ್ಕಾಗಿ ದ.ಕ.ಜಿಲ್ಲಾ ಸಲಫಿಗಳಿಂದ
ತಿರಸ್ಕೃತರಾದ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನವರು ಉಡುಪಿ ಜಿಲ್ಲೆಗೆ ಲಗ್ಗೆ ಇಟ್ಟು ದರ್ಗಾದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಹಮ್ಮದ್ ಹನೀಫ್ ಹೇಳಿದರು.

ಆರಾಧನೆ ಅಲ್ಲಾಹನಿಗೆ ಮಾತ್ರ. ಒಬ್ಬ ವ್ಯಕ್ತಿ ಅಥವಾ ಶಕ್ತಿಯನ್ನು, ಮಹಾತ್ಮಾರನ್ನು ದೇವರೆಂದು ನಂಬಿ ಗೌರವಿಸುವುದು, ಸಹಾಯಾರ್ಥನೆ ಮಾಡುವುದು, ಸಹಾಯ ಬೇಡುವುದು ಊರೂಸು, ದರ್ಗಾ ಝಿಯಾರತ್ ಆಗಿದ್ದು, ಇವುಗಳು ಆರಾಧನೆ ಆಗುವುದಿಲ್ಲ. ಈ ರೀತಿ ಮಾಡುವುದಕ್ಕೆ ಖುರ್ ಆನ್ ಮತ್ತು ಹದೀಸ್ ಗಳಲ್ಲಿ ಪುರಾವೆಗಳಿವೆ ಎಂದು ಮುಹಮ್ಮದ್ ಹನೀಫ್
ಸಮರ್ಥಿಸಿಕೊಂಡರು.

ಕಣ್ಣಂಗಾರ್ ಜಮಾತ್ ವ್ಯಾಪ್ತಿಯಲ್ಲಿ ಯಾವುದೇ ಮುಸ್ಲೀಂ ಧಾರ್ಮಿಕ ಸಭೆ, ಸಮಾರಂಭ, ಸಮ್ಮೇಳನಗಳನ್ನು ಕಣ್ಣಂಗಾರ್ ಜಮಾಅತಿನ ಅಧಿಕೃತ ಅನುಮತಿ ಪಡೆಯದೇ ನಡೆಸುವಂತಿಲ್ಲ ಎಂದು ಮುಹಮ್ಮದ್ ಹನೀಫ್ ಸ್ಪಷ್ಟಪಡಿಸಿದರು.

ಕಣ್ಣಂಗಾರ್ ಮಸೀದಿ ಅಧ್ಯಕ್ಷ ಎಚ್.ಬಿ.ಮುಹಮ್ಮದ್ ಹಾಜಿ, ಎಂ.ಎಸ್.ಅಬ್ದುರ್ರಝಾಕ್, ಹಂಝ ಅಹ್ಮದ್, ಬಿ.ಕೆ.ಮುಹಮ್ಮದ್, ಅಬ್ದುಲ್ ಅಝೀಝ್ ಹೆಜಮಾಡಿ, ಸಿದ್ಧಿಕ್ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s