ಉಡುಪಿ: ಅಲೆವೂರು ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಸಂಚರಿಸುತ್ತಿದ್ದ ಬೈಕ್ ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ.14ರಂದು ಬೆಳಗ್ಗೆ ಗಂಟೆ 8.45ಕ್ಕೆ ಸಂಭವಿಸಿದೆ.
ಮಣಿಪಾಲದ ಮಂಚಿ ನಿವಾಸಿ ಭಾಗೀರಥಿ (65) ಮೃತರು. ಈ ಬಗ್ಗೆ ಮೃತರ ಪುತ್ರಿ ರಾಂಪುರ ಕೆಇಬಿ ಕಚಢೇರಿ ಬಳಿಯ ನಿವಾಸಿ ಮಂಜುಳಾ ಸುರೇಶ್ ನೀಡಿದ ದೂರಿನಂತೆ ಆರೋಪಿ ಬೈಕ್ ಸವಾರ ಫಯಾಝ್ ಅಲಿ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ
ದಾಖಲಿಸಿಕೊಂಡಿದ್ದಾರೆ.