ಪ್ರಾಣಭಯದಲ್ಲಿ ವೃದ್ಧ ದಂಪತಿಗಳು: ಶಿಕ್ಷಕನ ವಿರ ುದ್ಧ ದೂರು

Posted: ಮಾರ್ಚ್ 18, 2014 in Uncategorized

ಉಡುಪಿ: ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆಯ ಪತಿ, ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ, ಚರ್ಚ್ ಪಾಲನಾ ಮಂಡಳಿಯೊಂದರ ಉಪಾಧ್ಯಕ್ಷ, ಉಡುಪಿ ತಾಲೂಕಿನ ಪಿಲಾರು ನಿವಾಸಿ ಜೋಸೆಫ್ ಡಿಸೋಜ ಎಂಬವರಿಂದ ತಾವು ಪ್ರಾಣಭಯ ಎದುರಿಸುತ್ತಿದ್ದು, ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪಿಲಾರುವಿನಲ್ಲೇ ವಾಸವಾಗಿರುವ ಹಿರಿಯ ನಾಗರಿಕ ದಂಪತಿಗಳು
ಮುಖ್ಯಮಂತ್ರಿಗಳು, ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಡಿಜಿಪಿ, ಎಸ್ಪಿ ಹಾಗೂ ಡಿವೈಎಸ್ಪಿ ಇವರಿಗೆ ಮನವಿ ಸಲ್ಲಿಸಿ ಅಂಗಲಾಚಿಕೊಂಡಿದ್ದಾರೆ.

ತಮ್ಮಿಬ್ಬರು ಹೆಣ್ಣು ಮಕ್ಕಳು ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಆರೋಪಿ ದಾರಿಯಲ್ಲಿ ಅವರಿಗೆ ಕಿರುಕುಳ ಕೊಡುತ್ತಿದ್ದ. ಆಗ ಪರ ಊರಿನಲ್ಲಿದ್ದ ತಾವು, ಊರಿಗೆ ಬಂದ ಬಳಿಕ ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದ ಬಗ್ಗೆ ಆತನಲ್ಲಿ ಪ್ರಶ್ನಿಸಿ, ಗದರಿಸಿದ್ದೆವು. ಅದನ್ನೇ ಮೂಲವಾಗಿರಿಸಿಕೊಂಡು, ನಮ್ಮ ಅಸಹಾಯಕ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ಆರೋಪಿ ಅಂದಿನಿಂದ ತಮ್ಮ ಮೇಲೆ ನಿರಂತರವಾಗಿ ವಿವಿಧ ರೀತಿಯಲ್ಲಿ ದೌರ್ಜನ್ಯ ನಡೆಸಿಕೊಂಡು ಬರುತ್ತಿದ್ದಾನೆ. ಜೊತೆಗೆ ತನಗಿರುವ ರಾಜಕೀಯ ಪ್ರಭಾವ ಬಳಸಿಕೊಂಡು ಪ್ರಕರಣಗಳೆಲ್ಲವನ್ನೂ ಮುಚ್ಚಿಹಾಕಿಕೊಂಡು ಬರುತ್ತಿದ್ದಾನೆ ಎಂದು ನೊಂದ ವೃದ್ಧ ದಂಪತಿಗಳಾದ ಸಂತಾನ್ ಮಥಾಯಸ್ (83) ಹಾಗೂ ಶ್ರೀಮತಿ ಅಲೀಸ್ ಮಥಾಯಸ್
ಅಲವತ್ತುಕೊಂಡಿದ್ದಾರೆ.

ಮದ್ಯಪಾನ ಮಾಡಿಕೊಂಡು ಬಂದು ಕಲಹದಲ್ಲಿ ನಿರತವಾಗುವುದು, ಹಲ್ಲೆ ನಡೆಸುವುದು, ಜೀವ ಬೆದರಿಕೆ ಹಾಕುವುದು, ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಇತ್ಯಾದಿಗಳನ್ನು ನಿರಂತವಾಗಿ ಮಾಡಿಕೊಂಡು ಬರುತ್ತಿರುವ ಆರೋಪಿ, ತನ್ನ ರಾಜಕೀಯ ಮತ್ತು ಹಣದ ಪ್ರಭಾವದಿಂದ ಶಿರ್ವ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗದಂತೆ ನೋಡಿಕೊಂಡು ಬಂದಿದ್ದಾನೆ ಎಂದು ನೊಂದ ಕುಟುಂಬದ ವಯೋವೃದ್ಧ ದಂಪತಿಗಳು ದೂರಿದ್ದಾರೆ.

ಆರೋಪಿ ಜೋಸೆಫ್ ಡಿಸೋಜ ತನಗೆ ಈಗಾಗಲೇ ಎರಡೆರಡು ಬಾರಿ ಅವಾಚ್ಯ ಶಬ್ದಗಳಿಂದ ಬೈಯ್ದು, ತನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿಸುವುದಾಗಿಯೂ, ಕಾರಿನ ಅಡಿಗೆ ಹಾಕಿ
ಕೊಲ್ಲುವುದಾಗಿಯೂ ಜೀವ ಬೆದರಿಕೆಗಳನ್ನು ಹಾಕುತ್ತಿರುವುದಾಗಿಯೂ ಸಂತಾನ್ ಮಥಾಯಸ್ ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s