ಇಲ್ಲಿ ಹಗಲು-ರಾತ್ರಿ ಹಾರಾಡುತ್ತಿದೆ ರಾಷ್ಟ್ರಧ ್ವಜ: ದೇಶದ ಕಾನೂನು ಮಾತ್ರ ಇಲ್ಲಿಗಿಲ್ಲ..!

Posted: ಮಾರ್ಚ್ 19, 2014 in Uncategorized

ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯ ರಸ್ತೆ ಬದಿಯಲ್ಲಿರುವ ಕೊಮೊಡೋರ್ ಜೆ.ಕಸ್ತಲೀನೊ ಎಂಬವರ ಮನೆ ಮುಂಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಾಡುತ್ತಿರುವುದು ಕಂಡು ಬಂದಿದ್ದು, ಇದರ ವಿರುದ್ಧ ಸಂಬಂಧಿಸದವರಾರು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಮಾರ್ಚ್ 19ರಂದು ರಾತ್ರಿ ಗಂಟೆ 9.15ಕ್ಕೆ ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನು udupibits.com ಫೋಟೋ ತೆಗೆದಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ವಿಷಯವನ್ನು ರಾತ್ರಿ ಗಂಟೆ 9.30ಕ್ಕೆ ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಶೊಕ್ (ಮೊಬೈಲ್ ನಂ: 9480805451, ದೂರವಾಣಿ: 0820-2554139), ಕಾಪು ಸರ್ಕಲ್ ಇನ್ಸ್ ಪೆಕ್ಟರ್ (ಮೊಬೈಲ್: 9480805431) ಹಾಗೂ ಜಿಲ್ಲಾ ನಿಯಂತ್ರಣ ಕಚೇರಿಯ ಅಧಿಕೃತರ ಗಮನಕ್ಕೆ ಮೌಖಿಕವಾಗಿ ತರಲಾಯಿತು. ಆದರೂ ಯಾವೊಬ್ಬ ಅಧಿಕಾರಿಯೂ ರಾಷ್ಟರಧ್ವಜವನ್ನು ಅವರೋಹಣ ಮಾಡುವ ಕೆಲಸವನ್ನಾಗಲೀ, ದೇಶದ ಧ್ವಜ ಸಂಹಿತೆಯ ವಿರುದ್ಧ ನಡೆದುಕೊಂಡ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕನಿಷ್ಟ ಕರ್ತವ್ಯ ಪಾಲನೆಯ ಕೆಲಸವನ್ನಾಗಲೀ ಇದುವರೆಗೂ (ದಿನಾಂಕ: 19.03.2014, ಸಮಯ: 10.15ರ ವರೆಗೂ) ಮಾಡಿಲ್ಲ.

ದೂರು ನೀಡಿದರೂ ಕ್ರಮ ಕೈಗೊಳ್ಳದ ಬಗ್ಗೆ ಇಂದು ಬೆಳಗ್ಗೆ udupibits.com ಸಬ್ ಇನ್ಸ್ ಪೆಕ್ಟರ್ ಅಶೋಕ್ ಅವರನ್ನು ಮಾತನಾಡಿಸಿದಾಗ, ‘ಕಳೆದ ಕೆಲವು ತಿಂಗಳುಗಳಿಂದ
ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಾಡುತ್ತಿರುವುದು ನಿಜ. ನಾವೂ ಗಮನಿಸಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸಿದಾಗ, ರಾಷ್ಟ್ರಧ್ವಜ ಹಾರಿಸಿದವರು, ರಾಷ್ಟ್ರಧ್ವಜ ಹಾರಾಡಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿಂದೆಯೇ ಒಂದು ಬಾರಿ ಆರ್ ಐ ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ನಾವೀಗ ಮುಂದೇನು ಮಾಡಬೇಕು ಎಂದು ಉನ್ನತ ಅಧಿಕಾರಿಗಳಲ್ಲಿ ಸಲಹೆ ಕೇಳಿದ್ದೇವೆ’ ಎಂದು ತಿಳಿಸಿದ್ದಾರೆ.

ಕೆಲವೆಡೆಗಳಲ್ಲಿ ರಾತ್ರಿ ಹೊತ್ತು ರಾಷ್ಟ್ರಧ್ವಜ ಹಾರಿಸಿದವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡ ುದಾಹರಣೆ ಇರುವಾಗ, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಕೊಮೊಡೋರ್ ಒಬ್ಬರಿಗೆ ಮಾತ್ರ ಈ ದೇಶದಲ್ಲಿ ಪ್ರತ್ಯೇಕ ಕಾನೂನುಗಳೇನಾದರೂ ಇದೆಯೇ ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಚಿತ್ರ-ವರದಿ: ಶ್ರೀರಾಮ ದಿವಾಣ.
[police, udupi police, shirva police, udupi district police, flag, national flag, national flag and constitutution, prevention of insult to national honour act 1971, ರಾಷ್ಟ್ರಧ್ವಜ, ಧ್ವಜಸಂಹಿತೆ]

http://en.wikipedia.org/…/Prevention_of_Insults_to…
Prevention of Insults to National Honour Act, 1971 – Wikipedia, the free encyclopediaen.
wikipedia.org. The Prevention of Insults to National Honour Act,1971 is a law in India prohibit..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s