ಒಂದೆಡೆ ನೀರಿನ ಅಭಾವ; ಇನ್ನೊಂದೆಡೆ ನೀರಿನ ಪೋಲು: ವರದಿ ಮಾಡಲು ಹೋದ ಮಾಧ್ಯಮದವರಿಗೆ ಅಡ್ಡಿ !

Posted: ಮಾರ್ಚ್ 19, 2014 in Uncategorized

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆಯಲ್ಲಿರುವ ವಾಟರ್ ಟ್ಯಾಂಕ್ ನಿಂದ ಕಳೆದ ಕೆಲವು ದಿನಗಳಿಂದ ನೀರು ವ್ಯರ್ಥವಾಗಿ ಹರಿದುಹೋಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಚಿತ್ರೀಕರಣಕ್ಕೆ ತೆರಳಿದ ಮಾಧ್ಯಮದವರ ಮೇಲೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ ಹಾಗೂ ಇವರ ಬೆಂಬಲಿಗರು ಕರ್ತವ್ಯಕ್ಕೆ ಅಡ್ಡಿಪಡಿಸಿ ದುರ್ವರ್ತನೆ ತೋರಿದ ಘಟನೆ ಮಾರ್ಚ್ 17ರಂದು ನಡೆದಿದೆ.

ಉಡುಪಿ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ನಗರಸಭೆ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿರುವ ಬಗ್ಗೆ ಬಿಜೆಪಿ ಇತ್ತೀಚೆಗೆ ಸತ್ಯಶೋಧನೆ ನಡೆಸಿ ಮಾಧ್ಯಮಗೋಷ್ಟಿ ಕರೆದು ಮಾಹಿತಿ ನೀಡಿತ್ತು. ಬಜೆ ಮತ್ತು ಶಿರೂರು ಅಣೆಕಟ್ಟಿನಲ್ಲಿ ದಿನದ 24 ಗಂಟೆಯೂ ನೀರು ಕೊಡುವಷ್ಟು ನೀರಿರುವ ಬಗ್ಗೆ ಸಾಕ್ಷ್ಯಾಧಾರ ಸಹಿತ ವಿವರ ನೀಡಿದ್ದರು. ಈ ನಡುವೆ, ದೊಡ್ಡಣಗುಡ್ಡೆ ಹಾಗೂ ಇತರ ಪ್ರದೇಶಗಳಿಗೆ ನೀರು ಒದಗಿಸುವ ಒಂದು ವಾಟರ್ ಟ್ಯಾಂಕ್ ದೊಡ್ಡಣಗುಡ್ಡೆಯಲ್ಲಿದ್ದು, ಇದರಿಂದ ಕಳೆದ ಕೆಲವು ದಿನಗಳಿಂದ ಜಲಪಾತದಂತೆ ನೀರು ಪೋಲಾಗುತ್ತಿತ್ತು. ಇದರ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಕಾರಣ ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದರು.

ವಾಟರ್ ಟ್ಯಾಂಕ್ ನಿಂದ ನೀರು ಪೋಲಾಗಿ ಹೋಗುತ್ತಿರುವ ಬಗ್ಗೆ ಸ್ಥಳೀಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ ಅವರು ಸ್ಥಳೀಯರು ಹಾಗೂ ಸ್ಥಳದಲ್ಲಿದ್ದ ಮಾದ್ಯಮ ಮಂದಿಯ ಮೇಲೆ ಹರಿಹಾಯ್ದರೆಂದು ದೂರಲಾಗಿದೆ.

ನೀರನ್ನು ಬೇಕಂತಲೇ ಪೋಲು ಮಾಡಲಾಗುತ್ತಿದೆ. ಇದು ರಾಜಕೀಯ ಪಿತೂರಿ. ನೀರು ಪೋಲಾದರೆ ನಿಮಗೇನು ಸಮಸ್ಯೆ ಎಂಬಿತ್ಯಾದಿಯಾಗಿ ಅಸಡ್ಡೆಯಿಂದ ಬೊಬ್ಬಿಟ್ಟ ಸೆಲಿನಾ ಕರ್ಕಡ ಅವರು, ಬಳಿಕ ಮಾಧ್ಯಮದವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೂ ಯತ್ನಿಸಿದರೆಂದು
ಆರೋಪಿಸಲಾಗಿದೆ.

ಸ್ಥಾಯಿ ಸಮಿತಿ ಅಧ್ಯಕ್ಷೆಯ ದುರ್ವರ್ತನೆ ಬಗ್ಗೆ ಸ್ಥಲದಲ್ಲಿದ್ದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ವಾಟರ್ ಟ್ಯಾಂಕಿಯಿಂದ ನೀರು ಬಿಡುವ ವಾಲ್ವ್ ಮೆನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಇದೀಗ ಬದಲಾಯಿಸಲಾಗಿದೆ. ಈಗಿನ ವಾಲ್ವ್ಮೆನ್ಗೆ ನೀರು ಬಿಡುವ ಬಗ್ಗೆ ಸರಿಯಾದ ಅನುಭವ ಇಲ್ಲದ ಕಾರಣ ಟ್ಯಾಂಕಿಯಿಂದ ನೀರು ಪೋಲಾಗುತ್ತಿದೆ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s