ರಾಷ್ಟ್ರಧ್ವಜಕ್ಕೆ ಅಪಮಾನ: 4ನೇ ದಿನವೂ ಮುಂದುವರಿ ಕೆ !

Posted: ಮಾರ್ಚ್ 22, 2014 in Uncategorized

ಉಡುಪಿ: ದೂರು ನೀಡಿ ಮೂರು ದಿನಗಳು ಕಳೆದರೂ ಇನ್ನೂ ಸಹ ಉಡುಪಿ ಜಿಲ್ಲಾಡಳಿತ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯ ‘ವನಸೌರಭ’ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಗಲು-ರಾತ್ರಿ ಎನ್ನದೆ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ಅವರೋಹಣ ಮಾಡಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.

ನೌಕದಳದ ನಿವೃತ್ತ ಕೊಮೊಡೋರ್ ಜೆರೋಮ್ ಕಸ್ತಲಿನೊ ಎಂಬವರು ತಮ್ಮ ಮನೆ ಮುಂಭಾಗದಲ್ಲಿ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಿಸುತ್ತಿರುವುದಾಗಿದೆ. ಇದರ ವಿರುದ್ಧ ಈ ಹಿಂದೆಯೇ ವ್ಯಕ್ತಿಯೊಬ್ಬರು ಸ್ಥಳೀಯ ಕಂದಾಯ ನಿರೀಕ್ಷಕರಿಗೆ (ಆರ್ ಐ) ದೂರು ನೀಡಿದ್ದು, ಆರ್ ಐ ಅವರು ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳಕ್ಕೆ ಭೇಟಿ ನೀಡಿದಾಗ,
ಕೊಮೊಡೋರ್ರವರು ಆರ್ ಐ ಅವರನ್ನೇ ಹೀಯಾಳಿಸಿ ಸ್ಥಳಕ್ಕೆ ಮರಳುವಂತೆ
ಮಾಡಿದ್ದರೆನ್ನಲಾಗಿದೆ.

ಕೊಮೊಡೋರ್ ಮೇಲಿನ ಭಯದಿಂದ ಅಂದು ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಯಾವುದೇ ರೀತಿಯ ಕ್ರಮವನ್ನೂ ಕೈಗೊಳ್ಳದೆ ಕೈಚೆಲ್ಲಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೊಮೊಡೋರ್ ಕಸ್ತಲಿನೊ ಅವರು ಆ ಬಳಿಕ ವಿವಿಧೆಡೆಗಳಲ್ಲಿ ಭಾಷಣ ಮಡಲು ಅವಕಾಶ ಸಿಕ್ಕಿದಲ್ಲೆಲ್ಲಾ ತಾನು ಹಾರಿಸಿದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ತನ್ನ ವಿರುದ್ಧ ಕ್ರಮಕೈಗೊಳ್ಳು ಬಂದ ಅರ್ ಐ ಬೈಯ್ದು ಕಳುಹಿಸಿದೆ ಎಂದು ಹೇಳುತ್ತಾ ಅವಮಾನಿಸುವ ಪ್ರಸಂಗಗಳು ನಡೆಸುತ್ತಿದ್ದರೆಂದು ಹೇಳಲಾಗಿದೆ.

ರಾಷ್ಟ್ರಧ್ವಜ ಹಾರಾಡುತ್ತಿದ್ದ ಸ್ಥಳಕ್ಕೆ ಮಾರ್ಚ್ 18ರಂದು ರಾತ್ರಿ ಗಂಟೆ 9.15ಕ್ಕೆ ತೆರಳಿದ http://www.udupibit.in ವರದಿಗಾರ, ಕತ್ತಲಲ್ಲಿಯೇ ಹಾರಾಡುತ್ತಿದ್ದ ರಾಷ್ಟ್ರಧ್ವಜದ ಫೋಟೋ ಸೆರೆಹಿಡಿದಿದ್ದು, ಗಂಟೆ 9.30ಕ್ಕೆ ಶಿರ್ವ ಠಾಣಾಧಿಕಾರಿ ಅಶೋಕ್, ಕಾಪು ವೃತ್ತ ನಿರೀಕ್ಷಕರು ಹಾಗೂ ಜಿಲ್ಲಾ ನಿಯಂತ್ರಣ ಕಚೇರಿಗೆ ಮೌಖಿಕ ದೂರು ನೀಡಿದ್ದರು.

ಆದರೆ ಪೊಲೀಸ್ ಅಧಿಕಾರಿಗಳು ಮಾರ್ಚ್19ರ ಬೆಳಗ್ಗೆ ವರೆಗೂ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ ಪ್ರಕರಣದ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಮಾ.19ರ ಬೆಳಗ್ಗೆ ಈ ಬಗ್ಗೆ ಎಸ್ಪಿ ಡಾ.ಬೋರಲಿಂಗಯ್ಯ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ರಾತ್ರಿ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಅವರ ಗಮನಕ್ಕೂ ತರಲಾಯಿತು. ಈ ನಡುವೆ ಇನ್ನೂ ಕೆಲವರು ಎಸ್ಪಿ ಬೋರಲಿಂಗಯ್ಯ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೂ ಮಾ.22ರ ಮೂಂಜಾನೆ ವರೆಗೂ ಇದರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಹೇಡಿತನ ಪ್ರದರ್ಶಿಸಿದೆ.
ಚಿತ್ರ-ವರದಿ: ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s