ಮಗನ ಕೊಲೆಗೈದ ತಂದೆಗೆ ಜೀವಾವಧಿ ಶಿಕ್ಷೆ

Posted: ಮಾರ್ಚ್ 26, 2014 in Uncategorized

ಉಡುಪಿ: ಪತ್ನಿಯ ಶೀಲದ ಮೇಲಿನ ಶಂಕೆಯಿಂದ ತನ್ನ ಮಗ ತನಗೆ ಹುಟ್ಟಿದವನಲ್ಲ ಎಂಬ ಸಂಶಯದಿಂದ ನೈಲಾನ್ ಹಗ್ಗದಿಂದ ಕುತ್ತಿಗೆ ಉರುಳು ಬಿಗಿದು ಉಸಿರುಗಟ್ಟಿಸಿ ಹತ್ತು ವರ್ಷ ಪ್ರಾಯದ ಮಗನ ಕೊಲಗೈದ ಅಪರಾಧಿ ತಂದೆಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಂ.ಅಂಗಡಿ ಅವರು ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರು. ದಂಡ ವಿಧಿಸಿ ಮಾಚರ್್ 24ರಂದು ತೀರ್ಪು ನೀಡಿದ್ದಾರೆ.

80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ತೋಟದಮನೆ ನಿವಾಸಿ ವಾಸುದೇವ ನಾಯ್ಕ (51) ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2011ರ ಮೇ 4ರಂದು ಮಧ್ಯರಾತ್ರಿ ಸಮಯ ತನ್ನ ಮಗ ವಿಶ್ವಾಸ ನಾಯಕ್ನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಉರುಳು ಹಾಕಿ, ಅದರ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನಿನ ಕೊಂಡಿಗೆ ಹಾಕಿ, ಆ ಕೊಂಡಿಯಿಂದ ಹಗ್ಗ ಎಳೆದು ಕಿಟಿಕಿಯ ಕಬ್ಬಿಣದ ರಾಡ್ ಗೆ ಕಟ್ಟಿ ಕೊಲೆಗೈದಿದ್ದನು. ಈ ಸಂದರ್ಭದಲ್ಲಿ ಮನೆಯಲ್ಲಿ ವಿಶ್ವಾಸ್ ನಾಯಕ್ ತಾಯಿ ಲಲಿತಾ ಪ್ರಭು ಮನೆಯಲ್ಲಿರಲಿಲ್ಲ.

ಆರೋಪಿ ವಾಸುದೇವ ನಾಯ್ಕ 51 ವರ್ಷ ಪ್ರಾಯ ತೋಟದಮನೆ ಕಬ್ಯಾಡಿ 80 ಬಡಗು ಬೆಟ್ಟು ಗ್ರಾಮ ಉಡುಪಿ ತಾಲೂಕು ನಿವಾಸಿಯಾಗಿದ್ದು ವಾಸುದೇವ ನಾಯ್ಕನು ಶ್ರೀಮತಿ ಲಲಿತ ಪ್ರಭು ರವರ ಗಂಡನಾಗಿದ್ದು ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು ತನ್ನ ಮಕ್ಕಳು ತನಗೆ ಹುಟ್ಟಿಲ್ಲ ಎಂಬ ಸಂಶಯದಿಂದ ಶ್ರೀಮತಿ ಲಲಿತ ಪ್ರಭು ರವರು ಮನೆಯಲ್ಲಿ ಇಲ್ಲದ ಸಮಯದಲ್ಲಿ 2011 ಮೇ 4 ರಂದು ರಾತ್ರಿ 12 ಗಂಟೆಗೆ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ತೋಟದ ಮನೆ ನಂ. 2-114ನೇ ಮಧ್ಯ ಕೋಣೆಯಲ್ಲಿ ಮಲಗಿದ್ದ ತನ್ನ ಮಗ 10 ವರ್ಷ ಪ್ರಾಯ ವಿಶ್ವಾಸ ನಾಯಕ ಎಂಬ ಬಾಲಕನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಉರುಳು ಹಾಕಿ ಅದರ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನಿನ ಕೊಂಡಿಗೆ ಹಾಕಿ ಆ ಕೊಂಡಿಯಿಂದ ಹಗ್ಗ ಎಳೆದು ಕಿಟಕಿಯ ಕಬ್ಬಿಣದ ರಾಡ್ಗೆ ಕಟ್ಟಿ ವಿಶ್ವಾಸ ನಾಯಕ ಎಂಬ ಬಾಲಕನ ಕುತ್ತಿಗೆಗೆ ನೈಲಾನ್ ಹಗ್ಗದ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿದೆ.

ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇನ್ಸ್ ಪೆಕ್ಟರ್ ಎಚ್.ಡಿ.ಕುಲಕಣರ್ಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೊಪಿಗೆ ಯಾರೊಬ್ಬರೂ ಜಾಮೀನು ನೀಡಲು ಮುಂದೆ ಬಾರದ ಕಾರಣ ವಾಸುದೇವ ನಾಯಕ್ ಈತನಕ ನ್ಯಾಯಾಂಗ ಬಂಧನದಿಂದ
ಬಿಡುಗಡೆಯಾಗಿರಲಿಲ್ಲ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s