ಚುನಾವಣೆ ಅಕ್ರಮ: ಡೀಯಸ್ ಗ್ರಾಫಕ್ಸ್ ಗೆ ನೋಟೀಸ್

Posted: ಮಾರ್ಚ್ 28, 2014 in Uncategorized

ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಸುವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆಗಳು ನಡೆಯುತ್ತಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ ಮಾರ್ಚ್ 25ರಂದು ಮಧ್ಯಾಹ್ನ ಗಂಟೆ 12-15 ಕ್ಕೆ ಉಡುಪಿ ತಾಲೂಕಿನ ಬಡಾ ಗ್ರಾಮದ ಉಚ್ಚಿಲ ವೆಸ್ಟ್ ಕೋಸ್ಟ್ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ27ಡಿ. 1975 ಸಂಖ್ಯೆಯ ಲಾರಿಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಾಗಿಸುತ್ತಿದ್ದಾಗ 20 ಲಕ್ಷ ರು.ಗಳನ್ನು ಲಾರಿ ಸಹಿತ ವಶಪಡಿಸಿಕೊಂಡು ಲಾರಿ ಚಾಲಕ ಕೊರಂಗ್ರಪಾಡಿಯ ಶಾಂತರಾಮ್ ಶೆಟ್ಟಿ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಒಂದು ಲಕ್ಷ
ಕರಪತ್ರಗಳನ್ನು ಮಾಹಿತಿ ನೀಡದೇ ಮುದ್ರಿಸಿದ ಉಡುಪಿ ನಗರದ ಡೀಯಸ್ ಗ್ರಾಫಿಕ್ಸ್ ಇವರಿಗೆ ಆರ್ಪಿ ಆಕ್ಟ್ 951 ಸೆಕ್ಷನ್ 127ಎ ಅಡಿ ನೋಟೀಸು ಜಾರಿ ಮಾಡಲಾಗಿದೆ ಎಂದು
ಮುದ್ದುಮೋಹನ್ ಹೇಳಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ವತಿಯಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 160 ದಾಳಿ ನಡೆಸಲಾಗಿದ್ದು, 64 ಪ್ರಕರಣಗಳಡಿಯಲ್ಲಿ 45 ಆಪಾದಿತರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. 22.500 ಲೀಟರ್ಸ್ ಗೋವಾ ಮದ್ಯ, 227.940 ಲೀಟರ್ಸ್ ಅಕ್ರಮ ಮದ್ಯ (ಒಟ್ಟು 250.390 ಲೀ) ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಸಿಆರ್ ಪಿಸಿ ಕಲಂ 107, 109, 110ರ ಅಡಿಯಲ್ಲಿ ಒಟ್ಟು 980 ಪ್ರಸ್ತಾವನೆ ಸ್ವೀಕರಿಸಿದ್ದು, 342 ಭದ್ರತಾ ಮುಚ್ಚಳಿಕೆ ಪಡೆಯಲಾಗಿದೆ, 638 ಬಾಕಿಯಿದೆ. ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಲೈಸೆನ್ಸ್ ಪಡೆದಿರುವ 4112 ಶಸ್ತ್ರಾಸ್ರ್ತಗಳಿದ್ದು, 4031 ಶಸ್ತ್ರಾಸ್ತ್ರಗಳ ಠೇವಣಿ ಇಡಲಾಗಿದ್ದು, ಶೇ.98.03 ಸಾಧನೆ ಮಾಡಲಾಗಿದೆ ಎಂದು ಡಾ.ಮುದ್ದುಮೋಹನ್ ವಿವರ ನೀಡಿದ್ದಾರೆ.

ಡೀಯಸ್ ಗ್ರಾಫಿಕ್ಸ್ ಬಗ್ಗೆ:

ಉಡುಪಿ ನಗರದಲ್ಲಿರುವ ಡೀಯಸ್ ಗ್ರಾಫಿಕ್ಸ್ ಸಂಸ್ಥೆಯು ಒಂದು ಕಂಟ್ಯೂಟರ್ ಗ್ರಾಫಿಕ್ಸ್ ಸಂಸ್ತೆಯೇ ಹೊರತು ಪ್ರಿಂಟಟಿಂಗ್ ಪ್ರೆಸ್ ಅಲ್ಲ. ಆದರೆ ಡೀಯಸ್ ಗ್ರಾಫಿಕ್ಸ್ ಮುದ್ರಿಸಿದ್ದು ಎನ್ನಲಾದ ಬಿಜೆಪಿಯ ಚುನಾವಣಾ ಪ್ರಚಾರ ಕರಪತ್ರಗಳು ಮನೆ ಮನೆಗಳಿಗೆ ವಿತರಣೆಯಾಗುತ್ತಿದೆ. ಒಂದು ಲಕ್ಷ ಕರಪತ್ರಗಳನ್ನು ಮುದ್ರಿಸಲಾಗಿದೆ ಎಂದು
ಕರಪತ್ರದಲ್ಲಿ ಮುದ್ರಿಸಲಾಗಿದೆ. ಪ್ರಿಂಟಿಂಗ್ ಪ್ರೆಸ್ ಅಲ್ಲದ, ಕೇವಲ ಕಂಪ್ಯೂಟರ್ ಗ್ರಾಫಿಕ್ಸ್ ಸಂಸ್ಥೆಯು ಕರಪತ್ರಗಳನ್ನು ಮುದ್ರಿಸಿದ್ದು ಆಶ್ಚರ್ಯಕರವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s