ಕುಖ್ಯಾತ ಕಳ್ಳರ ಬಂಧನ: 12.23 ಲಕ್ಷ ರು.ಮೌಲ್ಯದ ಚಿನ್ನಾಭರಣ ವಶ

Posted: ಏಪ್ರಿಲ್ 2, 2014 in Uncategorized

ಉಡುಪಿ: ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿ, ಇವರಿಂದ ಕಳವು ಮಾಡಲಾದ 12.23 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅರುಣ ಬಿ.ನಾಯಕ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.

ಮೂಲತಹ ಕೇರಳ ರಾಜ್ಯದ ಕೋಯಿಕ್ಕೋಡು ಜಿಲ್ಲೆಯವನಾಗಿದ್ದು, ಹಾಲಿ ಹಾಸನ ಜಿಲ್ಲೆ ಬೇಲೂರು ತಾಲೂಕು ಅಂಗಡಿಹಳ್ಳಿ ನಿವಾಸಿ ಮಹೇಶ್ (19) ಹಾಗೂ ಬೆಂಗಳೂರು ನಾಗರಬಾವಿ ಸರಸ್ವತಿ ಕಾಲನಿ ನಿವಾಸಿ ಮಣಿ ಯಾನೆ ಮಣಿಕಂಠ (19) ಬಂಧಿತರು.

ಬಂಧಿತರು ಜನವರಿಯಿಂದ ಉಡುಪಿ, ಕುಂದಾಪುರ, ಮಂಗಳೂರು, ಕಾರ್ನಾಡು, ಐಕಳ, ಬೆಳ್ತಂಗಡಿ ಮೊದಲಾದೆಡೆಗಳಲ್ಲಿ ಬೀಗ ಹಾಕಲಾದ ಮನೆಗಳಿಂದ ಕಳ್ಳತನ ಮಾಡುತ್ತಿದ್ದರೆನ್ನಲಾಗಿದೆ. ಮಾ.13ರಂದು ರಾತ್ರಿ ಬಾರ್ಕೂರಿನ ಮನೆಯೊಂದರಿಂದ ದೊಡ್ಡ ಮೊತ್ತದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.

ಆರೋಪಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಉಡುಪಿ ಬಲಾಯಿಪಾದೆ ಮತ್ತು ಸುರತ್ಕಲ್ ನಲ್ಲಿ ಟೆಂಟ್ ನಲ್ಲಿ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದುಕೊಂಡು, ‘ಶ್ರೀ ಶ್ರೇಯಸ್ ವೃದ್ಧಾಶ್ರಮ, ಅನಾಥರ ಅಶ್ರಯ ಧಾಮ, ಮಾಗಡಿ, ಬೆಂಗಳೂರು’ ಎಂಬ ಹೆಸರಿನಲ್ಲಿ ಕರಪತ್ರ ಮುದ್ರಿಸಿಕೊಂಡು ಮನೆ ಮನೆಗೆ ಹೋಗಿ ತೋರಿಸಿ ಆಶ್ರಮಕ್ಕೆ ಹಳೆ ಬಟ್ಟೆ ಕೇಳಿಕೊಂಡು ಆಶ್ರಮಕ್ಕೆ ಬಟ್ಟೆ ಸಂಗ್ರಹ ಮಾಡುವ ನೆಪದಲ್ಲಿ ಬೀಗ ಹಾಕಿದ ಮನೆಯನ್ನು
ಗುರುತಿಸಿಕೊಂಡು ಬಳಿಕ ಕಳ್ಳತನ ಮಾಡುತ್ತಿದ್ದರೆನ್ನಲಾಗಿದೆ.

ಬಂಧಿತ ಕಳ್ಳರಿಂದ 13.23 ಲಕ್ಷ ರು. ಮೌಲ್ಯದ, 490.280 ಗ್ರಾಂ ತೂಕದ
ಚಿನ್ನಾಭರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಬ್ರಹ್ಮಾವರ ಪಿಎಸ್ಐ ಗಿರೀಶ್ ಎಸ್., ಎಎಸ್ಐ ಬಾಲಕೃಷ್ಣ, ಸಿಬ್ಬಂದಿಗಳಾದ ಸುದೇಶ್ ಶೆಟ್ಟಿ, ಪ್ರಸನ್ನ, ಜೀವನ್, ರಮೇಶ, ಪ್ರಸಾದ್ ಶೆಟ್ಟಿ, ಶೈಲೇಶ್ ಕುಮಾರ್, ಅರುಣ, ಬೆರಳಚ್ಚು ವಿಭಾಗದ ಅಚ್ಚುತ, ಚಂದ್ರಶೇಖರ್ ಹಾಗೂ ಅಣ್ಣಪ್ಪ ನಾಯ್ಕ ಈ
ಕಾರ್ಯಾಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s