ಬಿಜೆಪಿ ಚುನಾವಣಾ ಪ್ರಚಾರ ಕರಪತ್ರದ ವಿರುದ್ಧ ದೂರು

Posted: ಏಪ್ರಿಲ್ 2, 2014 in Uncategorized
ಟ್ಯಾಗ್ ಗಳು:, , , , , , , , , , , , ,

ಕರ್ನಾಟಕ ಜನಪರ ವೇದಿಕೆ
ಜೆ.ಜೆ.ಬಿಲ್ಡಿಂಗ್, ಮಿಷನ್ ಕಂಪೌಂಡ್, ಉಡುಪಿ-1.

ಇವರಿಗೆ,
ಮುಖ್ಯ ಚುನಾವಣಾ ಅಧಿಕಾರಿಗಳು, ಕರ್ನಾಟಕ ರಾಜ್ಯ.
ಡಾ.ಮುದ್ದುಮೋಹನ್, ಜಿಲ್ಲಾ ಚುನಾವಣಾಧಿಕಾರಿಗಳು, ಉಡುಪಿ ಜಿಲ್ಲೆ.
ಅಮರನಾಥ ಮಲ್ಲಿಕ್, ಸಾಮಾನ್ಯ ವೀಕ್ಷಕರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಶ್ರೀಮತಿ ರಂಜನ್ ಝಾ, ಚುನಾವಣಾ ವೆಚ್ಚ ವೀಕ್ಷಕರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ವಿಷಯ: ಬಿಜೆಪಿ ಮತಯಾಚಿಸುತ್ತಾ ಮನೆ ಮನೆಗೆ ವಿತರಿಸುತ್ತಿರುವ ಪ್ರಚಾರ ಕರಪತ್ರದ ವಿರುದ್ಧ ದೂರು.

ಮಾನ್ಯರೇ,

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಮೂರು ವಿಧದ ಪ್ರಚಾರ ಕರಪತ್ರಗಳನ್ನು ವಿತರಿಸುತ್ತಾ ಮತ ಯಾಚನೆ ಮಾಡುತ್ತಿದೆ. ದಿನಾಂಕ 30.03.2014ರಂದು ವಿತರಿಸಿದ ಕರಪತ್ರ ನಮಗೆ ಲಭಿಸಿರುತ್ತದೆ. ಈ ಕರಪತ್ರಗಳ ವಿರುದ್ಧ ನಾವು ಈ ಮೂಲಕ ದೂರು ಸಲ್ಲಿಸುತ್ತಿದ್ದೇವೆ. ಈ ದೂರನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇವೆ.

1. ‘ಭಾರತೀಯ ಜನತಾ ಪಾರ್ಟಿ – ಕರ್ನಾಟಕ, ಸಂಪದ್ಭರಿತ-ಸುರಕ್ಷಿತ-ಸಧೃಢ ಭಾರತಕ್ಕಾಗಿ, ನರೇಂದ್ರ ಮೋದಿ, ಭಾರತ ಗೆಲ್ಲಿಸಿ’ ಎಂಬ ಶಿರ್ಷಿಕೆ ಮತ್ತು ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಇವರುಗಳ ಭಾವಚಿತ್ರ ಇರುವ ಆರು ಪುಟಗಳ ಪ್ರಚಾರ ಕರಪತ್ರ. ಇದರಲ್ಲಿ ಮುದ್ರಿಸಿದವರ, ಮುದ್ರಣ ಸಂಸ್ಥೆಯ ಮತ್ತು ಮುದ್ರಿತ ಪ್ರತಿಗಳ ಯಾವುದೇ ಮಾಹಿತಿ ಇಲ್ಲ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ.

2. ‘ಜನಜಾಗರಣ ಅಭಿಯಾನ, ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ’ ಎಂಬ ಶಿರ್ಷಿಕೆ ಇರುವ ನಾಲ್ಕು ಪುಟಗಳ ಪ್ರಚಾರ ಕರಪತ್ರ. ಇದನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮುದ್ರಿಸಿದೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ‘ಮುದ್ರಣ: ರಾಷ್ಟ್ರೋತ್ಥಾನ ಮುದ್ರಣಾಲಯ’ ಎಂದು ಮುದ್ರಿಸಲಾಗಿದೆ. ಆದರೆ ಮುದ್ರಿತ ಪ್ರತಿಗಳ ವಿವರ ಇಲ್ಲ. ಆದುದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

3. ‘ಈ ಬಾರಿ ಮೋದಿ ಸರ್ಕಾರ’ ಎಂಬ ಶಿರ್ಷಿಕೆ ಇರುವ ಮತ್ತು ನರೇಂದ್ರ ಮೋದಿ ಭಾವಚಿತ್ರ ಇರುವ ಎರಡು ಪುಟಗಳ ಕರಪತ್ರ. ಇದನ್ನು ಬಿಜೆಪಿ ಕರ್ನಾಟಕ ಮುದ್ರಿಸಿದೆ. ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಮುದ್ರಿಸಲಾಗಿದೆ. ಮುದ್ರಣಗೊಂಡಿರುವುದು ‘ಸ್ಪ್ಯಾನ್ ಪ್ರಿಂಟ್’ ಎಂದು ಇದೆ. ಆದರೆ, ಯಾವ ಊರಿನ ಉಲ್ಲೇಖವಿಲ್ಲ. ಈ ಕರಪತ್ರವನ್ನು ರಾಜ್ಯ ಮಟ್ಟದಲ್ಲಿ ವಿತರಿಸಲು ಮುದ್ರಿಸಿದಂತೆ ಇದೆ. ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಹೇಳಲಾಗಿದೆಯಾದರೂ, ಮುದ್ರಿತ ಪ್ರತಿಗಳ ಸಂಖ್ಯೆ ಹಲವು ಲಕ್ಷಗಳು ಇರುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸುವ ಅಗತ್ಯವಿದೆ.

ಈ ಮೇಲೆ ಪ್ರಸ್ತಾಪಿಸಿದ ಮೂರೂ ಕರಪತ್ರಗಳ ಫೋಟೋ ಪ್ರತಿಯನ್ನು ಇದರ ಜೊತೆಗೆ ಲಗ್ತೀಕರಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮತ್ತೊಮ್ಮೆ ಕೋರುತ್ತೇವೆ.

ಇತೀ ತಮ್ಮ ವಿಶ್ವಾಸಿ,

– ಶ್ರೀರಾಮ ದಿವಾಣ,
(ಅಧ್ಯಕ್ಷ)

ದಿನಾಂಕ: 01.04.2014.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s