ಮನೆಗಳಿಗೆ ಭಗವಾಧ್ವಜ ಕಟ್ಟಿ ಬಿಜೆಪಿ ಪರ ಮತಯಾಚನೆ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ !

Posted: ಏಪ್ರಿಲ್ 8, 2014 in Uncategorized
ಟ್ಯಾಗ್ ಗಳು:, , , , , , , , , , , , , , ,

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಪರವಾಗಿ ಮತಯಾಚಿಸಲು ಮನೆ ಮನೆಗೆ ಭೇಟಿ ನೀಡುತ್ತಿರುವ ಬಿಜೆಪಿ ಕಾರ್ಯಕರ್ತರು ಮತದಾರರ ಮನೆಗಳ ಆವರಣದಲ್ಲಿ ಭಗವಾಧ್ವಜಗಳನ್ನು ಕಟ್ಟಿ ಧರ್ಮದ ಹೆಸರಲ್ಲಿ ಮತಯಾಚನೆ ಮಾಡುವ ಮೂಲಕ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ಪ್ರಕರಣ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ಮಲ್ಪೆ ಪಡುಕರೆ, ಕಿದಿಯೂರು ಪಡುಕರೆ, ಕಡೆಕಾರ್ ಪಡುಕರೆ, ಕುತ್ಪಾಡಿ ಪಡುಕರೆ, ಕಣಕೊಡ ಪಡುಕರೆ ಮುಂತಾದ ಪ್ರದೇಶಗಳ ನೂರಾರು ಮನೆಗಳ ಆವರಣದಲ್ಲಿ ಭಗವಾಧ್ವಜಗಳು
ಹಾರಾಡುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಈ ಎಲ್ಲಾ ಪ್ರದೇಶಗಳ ಮನೆಗಳಲ್ಲಿ ಭಗವಾಧ್ವಜಗಳನ್ನು ಕಟ್ಟಲಾಗಿದೆ.

20ರಿಂದ 30 ಮಂದಿಯಷ್ಟಿದ್ದ ಬಿಜೆಪಿ ಕಾರ್ಯಕರ್ತರು ಇಲ್ಲೆಲ್ಲಾ ಗುಂಪು ಗುಂಪಾಗಿ ಶೋಭಾ ಕರಂದ್ಲಾಜೆ ಪರವಾಗಿ ಮತ ಯಾಚನೆ ಮಾಡಲು ಮನೆ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೀಗೆ ಭೇಟಿ ನೀಡಿದಾಗ ಮತ ಯಾಚನೆ ಜೊತೆಗೆ ಭಗವಾಧ್ವಜಗಳನ್ನು ಕಟ್ಟಿದ್ದಾರೆ. ಪರಿಸರ ಪ್ರದೇಶಗಳಲ್ಲಿ ಹಲವಾರು ಭಜನಾ ಮಂದಿರಗಳಿರುವುದರಿಂದ ಮತ್ತು ಇಲ್ಲೆಲ್ಲಾ
ಭಗವಾಧ್ವಜಗಳಿರುವುದರಿಂದ ಈ ಪ್ರದೇಶಗಳ ಬಹುತೇಕ ಯಾರೂ ಭಗವಾಧ್ವಜ ಕಟ್ಟುವುದನ್ನು ಮುಖಾಮುಖಿಯಾಗಿ ವಿರೋಧಿಸಲಿಲ್ಲ. ಆದರೆ ಹಲವಾರು ಮನೆಗಳವರು ಬಿಜೆಪಿ ಕಾರ್ಯಕರ್ತರ ಈ ಕ್ರಮವನ್ನು ಇಷ್ಟಪಡಲಿಲ್ಲವೆನ್ನಲಾಗಿದೆ.

ಭಗವಾಧ್ವಜ ಹಿಂದೂ ಧರ್ಮದ ಧ್ವಜವಾಗಿದ್ದು, ಇದನ್ನು ಒಂದು ರಾಜಕೀಯ ಪಕ್ಷದ
ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಮತಯಾಚನೆ ಮಾಡುವಾಗ ದುರ್ಬಳಕೆ ಮಾಡಿಕೊಂಡ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಪರವಾಗಿರುವ ಹಿಂದೂ ಮತದಾರರು ಬಿಜೆಪಿ ಕಾರ್ಯಕರ್ತರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳೀಯವಾಗಿ ಘರ್ಷಣೆ ಬೇಡವೆಂಬ ಕಾರಣಕ್ಕೆ ಎಲ್ಲರೂ ಮೌನವಹಿಸಿದ್ದಾರೆಂದು ತಿಳಿದುಬಂದಿದೆ.

ಮತಯಾಚನೆ ಸಮಯದಲ್ಲಿ ಧರ್ಮವನ್ನು ರಾಜಕೀಯದ ಜೊತೆಗೆ ದುರುಪಯೋಗಪಡಿಸಿದ ಬಿಜೆಪಿ ಕ್ರಮ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಹಾಗೂ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಮಾತ್ರ ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s