ಚುನಾವಣೆ ಹಿನ್ನೆಲೆ: 405 ಅಬಕಾರಿ ದಾಳಿ

Posted: April 16, 2014 in Uncategorized

ಉಡುಪಿ: 16ನೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆಯಾದ ನಿಮಿತ್ತ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ 5ರಿಂದ ಎಪ್ರಿಲ್ 14ರವರೆಗೆ ಉಡುಪಿ ಜಿಲ್ಲಾ
ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮಗಳನ್ನು ಪತ್ತೆಹಚ್ಚಲು ಉಡುಪಿ ಜಿಲ್ಲಾಡಳಿತದಿಂದ ಪ್ರತೀ ವಿಧಾನಸಭಾ ಕ್ಷೇತ್ರವಾರು ರಚಿಸಿರುವ 5 ಅಬಕಾರಿ ತಂಡಗಳು ಮತ್ತು
ಜಿಲ್ಲೆಯಾದ್ಯಂತ ಒಂದು ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಈವರೆಗೆ ಒಟ್ಟು 405 ದಾಳಿಗಳನ್ನು ನಡೆಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಮುದ್ದುಮೋಹನ್ ತಿಳಿಸಿದ್ದಾರೆ.

ಮದ್ಯದಂಗಡಿಗಳಲ್ಲಿ ಸನ್ನದು ಷರತ್ತು ಉಲ್ಲಂಘನೆಗೆ ಸಂಬಂಧಿಸಿದಂತೆ 56
ಮೊಕದ್ದಮೆಗಳನ್ನು ಮತ್ತು ಅನಧಿಕೃತ ಸ್ಥಳಗಳಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ ಕಲಂ.15ಎ ಅಡಿಯಲ್ಲಿ 47 ಮೊಕದ್ದಮೆಗಳನ್ನು ಹಾಗೂ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ 14 ಘೋರ, ಹೀಗೆ ಒಟ್ಟು 117 ಅಬಕಾರಿ ಮೊಕದ್ದಮೆಗಳನ್ನು ಪತ್ತೆಹಚ್ಚಿ, ಈ ಸಂಬಂಧ 66 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ 461.090 ಲೀಟರ್ ಮದ್ಯ ಮತ್ತು 67.600 ಲೀಟರ್ ಬೀರ್ ಅಲ್ಲದೇ ನಗದು 190 ರು.ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಅಕ್ರಮ ಮದ್ಯ ಸಾಗಾಟಕ್ಕೆ ಉಪಯೋಗಿಸಿದ 2 ಲಕ್ಷ ರು. ಮೌಲ್ಯದ ಓಮ್ನಿ ಕಾರು ಮತ್ತು 1.20 ಲಕ್ಷ ರು. ಮೌಲ್ಯದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಜಫ್ತುಪಡಿಸಿದ ವಸ್ತುಗಳ ಒಟ್ಟು ಅಂದಾಜು ಮೌಲ್ಯ 4,52,150 ರು.ಗಳಾಗಿದೆ.

ಎ.15ರ ಸಂಜೆ 6 ಗಂಟೆಯಿಂದ ಎ.17ರ ಮಧ್ಯರಾತ್ರಿ 12 ಗಂಟೆಯವರೆಗೆ ಚುನಾವಣಾ ಅಯೋಗ ಮದ್ಯ ಮಾರಾಟ ನಿಷೇಧ ದಿನಗಳೆಂದು ಘೋಷಣೆ ಮಾಡಿದ್ದು, ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಮದ್ಯ ಮಾರಾಟ ಮಡುವಂತಿಲ್ಲ, ಮಾರಾಟ ಮಾಡುವುದು ಕಂಡುಬಂದರೆ ಅಬಕಾರಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬಹುದೆಂದು ಜಿಲ್ಲಾ
ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s