# ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಅಗತ್ಯ. ಪ್ರಜಾಪ್ರಭುತ್ವಕ್ಕೆ ಅರ್ಥ ಹಾಗೂ ಗರಿಮೆ ಸಿಗುವುದೇ ಚುನಾವಣೆಯಿಂದ. ಮುಕ್ತ ಹಾಗೂ ನಿಭರ್ೀತ ಚುನಾವಣೆಗೆ ಚುನಾವಣಾ ಆಯೋಗ ತನ್ನೆಲ್ಲ ಮಾನವಸಂಪನ್ಮೂಲ ಹಾಗೂ ಕಾನೂನು ಬಳಸಿಕೊಂಡು ಜನಾಧಿಕಾರದ ಚಲಾವಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತದೆ.

ಚುನಾವಣಾ ದಿನದಂದು ಜನತೆ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಮಾಡುವ ದಿನ. ಪ್ರಸ್ತುತ ದೇಶದಲ್ಲಿ 16ನೇ ಲೋಕಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಭಾರತೀಯ ಚುನಾವಣಾ ಆಯೋಗ ಸಜ್ಜಾಗಿದ್ದು, ನಮ್ಮ ರಾಜ್ಯದಲ್ಲಿ ರಾಜ್ಯಾದ್ಯಂತ ಇದೇ ಏಪ್ರಿಲ್ 17ರಂದು ಬೆಳಗ್ಗೆ ಗಂಟೆ 7ರಿಂದ ಸಂಜೆ ಗಂಟೆ 6ರ ವರೆಗೆ ಮತದಾನ ನಡೆಯಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಜನತೆ ಅಂದು ತಮ್ಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ.

ಎಪ್ರಿಲ್ 17ರಂದು ಮತದಾನ ಹಕ್ಕನ್ನು ಚಲಾಯಿಸಲು ಸಾರ್ವಜನಿಕ ರಜೆ ಘೋಷಿಸಲಾಗಿದೆ; ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವ ಸಲುವಾಗಿ ಅಂದು ಎಲ್ಲ ಸರಕಾರಿ, ಖಾಸಗಿ, ಅನುದಾನಿತ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆಯನ್ನು ಸರಕಾರ ಘೋಷಿಸಿದೆ.

ಮತದಾನ ವ್ಯವಸ್ಥೆಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಒಂದು ದಿನ ಮುಂಚಿತವಾಗಿಯೇ ಮತಗಟ್ಟೆಗಳಿಗೆ ತೆರಳಿ ಪೂರ್ವ ಸಿದ್ಥತೆಗಳನ್ನು, ಅಂದರೆ ಮತಯಂತ್ರದ ಸಮರ್ಪಕ ಕಾರ್ಯ ವ್ಯವಸ್ಥೆ, ಮತಯಂತ್ರ ಇಡುವ ನಿಗದಿತ ಸೂಕ್ತ ಸ್ಥಳ, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟ್ಗಳು ಕುಳಿತುಕೊಳ್ಳುವ ಸ್ಥಳ ಎಲ್ಲವನ್ನೂ ವ್ಯವಸ್ಥೆ ಮಾಡುತ್ತಾರೆ.

ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಮತದಾನದ ಅವಧಿಯನ್ನು ಸಂಜೆ 6 ಗಂಟೆಯವರೆಗೂ ವಿಸ್ತರಿಸಲಾಗಿದೆ. ಈ ಅವಧಿಯನ್ನು ಮತದಾರರು ಸದ್ಬಳಕೆ ಮಾಡಿಕೊಳ್ಳಬಹುದು.

ಮತದಾನ ಮಾಡುವುದು ಹೇಗೆ ?

ಮೊದಲು ಮತದಾರ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಇದಕ್ಕಾಗಿ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಯಿಂದ ತಿಳಿದುಕೊಳ್ಳಬೇಕು.

ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ಅವರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಮತದಾರರಿಗೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ. ಈ ಗುರುತಿನ ಚೀಟಿಯ ಮೇಲೆ ಮತಗಟ್ಟೆಯ ಸಂಖ್ಯೆ, ಮತಗಟ್ಟೆ ವಿಳಾಸ, ವಿಧಾನ ಸಭಾ ಕ್ಷೇತ್ರದ ವಿಳಾಸ ಇತ್ಯಾದಿ ವಿವರಗಳು ಇರುತ್ತವೆ. ಈ ಗುರುತಿನ ಚೀಟಿಯೊಂದಿಗೆ ಮತದಾರ ಮತಗಟ್ಟೆಯನ್ನು ತಲುಪಿದಲ್ಲಿ, ಅವನಿಗೆ ಮತದಾನ ಮಾಡುವುದು ಅತ್ಯಂತ ಸುಲಭವಾಗುತ್ತದೆ.

ಆದರೆ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಗಾಬರಿಯಾಗುವುದು ಬೇಡ, ಈ ಗುರುತಿನ ಚೀಟಿ ಇಲ್ಲದಿದ್ದರೂ ಮತಗಟ್ಟೆಗೆ ಹೋಗಬಹುದು.

ಮತದಾನಕ್ಕೆ ಬೇಕಿರುವ ಅವಶ್ಯ ದಾಖಲೆಗಳು : ಮತದಾರರ ಗುರುತಿನ ಚೀಟಿ (ವೋಟರ್ ಐಡೆಂಟಿಟಿ ಕಾರ್ಡ್) ಮತಗಟ್ಟೆಗೆ ಹೋಗುವ ಸಮಯದಲ್ಲಿ ಮತದಾರನು ತಮ್ಮೊಂದಿಗೆ ಇದನ್ನು ಅವಶ್ಯಕವಾಗಿ ತೆಗೆದುಕೊಂಡು ಹೋಗಬೇಕು. ಇದು ಮತದಾನ ಮಾಡಲು ಅಗತ್ಯ ದಾಖಲೆಯಾಗಿರುತ್ತದೆ.

ಮತಗಟ್ಟೆಗಳಲ್ಲಿ ಮತದಾನ ಮಾಡುವ ಮತದಾರರನ್ನು ಗುರುತಿಸಲು ಎಪಿಕ್ ಕಾರ್ಡನ್ನು ಹಾಜರು ಪಡಿಸಲು ವಿಫಲರಾದಲ್ಲಿ ಅದಕ್ಕೆ ಬದಲಿಯಾಗಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಭಾವಚಿತ್ರ ಇರುವ ಉದ್ಯೋಗ ಸಂಬಂಧ ಗುರುತಿನ ಕಾರ್ಡ್, ಪಾಸ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಎಂಎನ್ಆರ್ ಇಜಿಎ ಜಾಬ್ ಕಾರ್ಡ್, ಕಾರ್ಮಿಕ ಇಲಾಖೆಯಿಂದ ನೀಡಿರುವ ಹೆಲ್ತ್ ಇನ್ಸುರೆನ್ಸ್ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ ಪತ್ರ, ದೃಢೀಕೃತ ಮತದಾರ ಚೀಟಿ, ಈ 11 ಬದಲಿ ದಾಖಲಾತಿಗಳ ಪೈಕಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಯ ಸಮಕ್ಷಮ ಹಾಜರುಪಡಿಸಿ ಮತ ಚಲಾಯಿಸಬಹುದು.

ಆದರೆ, ಒಂದು ವೇಳೆ ನಿಮ್ಮ ಬಳಿ ಗುರುತಿನ ಚೀಟಿಯಿದ್ದು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ನೀವು ಮತ ಹಾಕಲು ಸಾಧ್ಯವಿಲ್ಲ.

ಮತಗಟ್ಟೆ ತಲುಪಿ ಏನು ಮಾಡಬೇಕು :

ಮತದಾನ ಕೇಂದ್ರದ ಒಳಗೆ ಹೋಗಿ ನಿಮ್ಮ ಗುರುತಿನ ಚೀಟಿಯನ್ನು ಮೊದಲನೇ ಮತಗಟ್ಟೆ ಅಧಿಕಾರಿಗೆ ತೋರಿಸಿ. ಆಗ ಸಂಬಂಧಪಟ್ಟ ಸಿಬ್ಬಂದಿಯು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಗುರುತಿಸುತ್ತಾರೆ. ನಂತರ ಎರಡನೇ ಮತಗಟ್ಟೆ ಅಧಿಕಾರಿ ನಿಮ್ಮ ಬಲಗೈನ ತೋರು ಬೆರಳಿಗೆ ಶಾಹಿ ಗುರುತು ಹಾಕುತ್ತಾರೆ ಮತ್ತು ಒಂದು ಚೀಟಿಯನ್ನು ನೀಡುತ್ತಾರೆ. ನಂತರ ಒಂದು ದೊಡ್ಡ ಪುಸ್ತಕದಲ್ಲಿ ನಿಮ್ಮ ಸಹಿಯನ್ನು ಹಾಕಿಸಿಕೊಳ್ಳುತ್ತಾರೆ. ಸಹಿ ಮಾಡಲು ಬಾರದಿದ್ದಲ್ಲಿ ಹೆಬ್ಬೆಟ್ಟಿನ ಗುರುತು ಹಾಕಿಸಿಕೊಳ್ಳುತ್ತಾರೆ.

ಮೂರನೇ ಮತಗಟ್ಟೆ ಅಧಿಕಾರಿಯು ನಿಮ್ಮ ತೋರು ಬೆರಳಿನ ಶಾಹಿಯನ್ನು ಪರಿಶೀಲಿಸಿ, ಗುರುತಿನ ಚೀಟಿಯನ್ನು ಪರಿಶೀಲಿಸಿ, ನಿಮಗೆ ಮತದಾನ ಮಾಡಲು ಒಪ್ಪಿಗೆ ನೀಡುತ್ತಾರೆ. ಈಗ ನೀವು ಮತದಾನ ಮಾಡುವ ಯಂತ್ರದ ಬಳಿ ತಲುಪಲು ಸಾಧ್ಯವಾಗುತ್ತದೆ. ಅಲ್ಲಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿಗೆ ಇರುವ ಗುಂಡಿಯನ್ನು ಒತ್ತಬೇಕು. ಇಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ನೀವು ಮತ ನೀಡಬೇಕಾಗಿರುವ ಅಭ್ಯರ್ಥಿಯ ಹೆಸರು ಮತ್ತು ಅವರಿಗೆ ನೀಡಲಾಗಿರುವ ಚಿನ್ಹೆ ಸರಿಯಾಗಿದೆಯೇ ಎಂಬುದು.

ಮತಯಂತ್ರದಲ್ಲಿ ನಿಮ್ಮ ಆಯ್ಕೆಯ ಅಭ್ಯಥರ್ಿಯ ಗುರುತಿನ ಎದುರು ಇರುವ ನೀಲಿ ಗುಂಡಿಯನ್ನು ನೀವು ಒತ್ತುತ್ತಿದ್ದಂತೆ ಪೀ…… ಎಂಬ ಶಬ್ದದೊಂದಿಗೆ ಕೆಂಪು ದೀಪ
ಹೊತ್ತಿಕೊಳ್ಳುತ್ತದೆ. ಆಗ ನಿಮ್ಮ ಮತ ಚಲಾವಣೆ ಆಗಿದೆ ಎಂದು ಅರ್ಥ.

ನಿಮ್ಮ ಮತದಾನವನ್ನು ಯಾರಾದರೂ ಆಕ್ಷೇಪಿಸಿದರೆ ಏನು ಮಾಡಬೇಕು?

ನೀವು ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಅಲ್ಲಿರುವ ಯಾವುದೇ ಅಭ್ಯರ್ಥಿಯ ಏಜೆಂಟರು ನೀವು ಮತದಾರರ ಪಟ್ಟಿಯಲ್ಲಿ ಇರುವ ವ್ಯಕ್ತಿ ಅಲ್ಲ ಎಂದು ನಿಮ್ಮ ಮತದಾನವನ್ನು ಆಕ್ಷೇಪಿಸಬಹುದು. ಅಂತಹ ಸಮಯದಲ್ಲಿ ಮತಗಟ್ಟೆ ಅಧಿಕಾರಿಗೆ ನೀವು ಸರಿಯಾದ ಗುರುತಿನ ಚೀಟಿ ತೋರಿಸಿ, ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿ ನೀವೇ ಎಂಬುದನ್ನು ಸಾಬೀತುಪಡಿಸಿ ಮತದಾನ ಮಾಡಬಹುದು. ಒಂದು ವೇಳೆ ನೀವು ಅಗತ್ಯ ದಾಖಲೆ ತೋರಿಸಲು ವಿಫಲರಾದಲ್ಲಿ, ನೀವು ಮತದಾನ ಮಾಡಲು ಸಾಧ್ಯವಿಲ್ಲ ಹಾಗೂ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ನಿಮಗೆ ಮತದಾನದ ಗುರುತಿನ ಚೀಟಿ ಅಥವಾ ಚುನಾವಣೆಗೆ ಸಂಬಂಧಪಟ್ಟ ಯಾವುದೇ ವಿಷಯಗಳ ಕುರಿತು ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳನ್ನು
ಸಂಪರ್ಕಿಸಬಹುದಾಗಿದೆ.

ನೆನಪಿಡಿ, ಒಂದಕ್ಕಿಂತ ಹೆಚ್ಚು ಮತ ಕ್ಷೇತ್ರಗಳಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರನ್ನು ನೊಂದಾಯಿಸಬೇಡಿ. ಒಂದಕ್ಕಿಂತ ಹೆಚ್ಚು ಗುರುತಿನ ಚೀಟಿಗಳನ್ನು ಮಾಡಿಸಬೇಡಿ. ಮತದಾನ ಮಾಡಲು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಬಲಿಯಾಗಬೇಡಿ. ಜಾತಿ, ಧರ್ಮ ಇತ್ಯಾದಿಗಳನ್ನು ಆಧರಿಸಿ ಮತದಾನ ಮಾಡಬೇಡಿ. ಚುನಾವಣೆಯ ದಿನ ಯಾವುದೇ ರೀತಿಯ ಪ್ರಚಾರಗಳನ್ನು ಮಾಡಬೇಡಿ ಹಾಗೂ ಯಾವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ನೀಡಿದ್ದೇನೆ ಎಂದು ಯಾರಿಗೂ ಹೇಳಬೇಡಿ ಹಾಗೂ ಚರ್ಚಿಸಬೇಡಿ.

ಮತದಾನ ಮಾಡುವ ಸಂದರ್ಭದಲ್ಲಿ ವೃದ್ಧರಿಗೆ, ರೋಗಿಗಳಿಗೆ, ಗಭರ್ಿಣಿಯರಿಗೆ,
ಅಂಗವಿಕಲರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದು, ಅಂತಹವರು ಸರದಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಬೇಕಿಲ್ಲ. ಅಂತಹವರಿಗೆ ಆದ್ಯತೆಯ ಮೇರೆಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅಂಗವಿಕಲ ಮತ್ತು ವೃದ್ಧ ಮತದಾರರು ತಮ್ಮ ಸಹಾಯಕ್ಕಾಗಿ ತಮ್ಮೊಡನೆ ಒಬ್ಬ ಸಹಾಯಕರನ್ನು ಕರೆದುಕೊಂಡು ಹೋಗಬಹುದು. ಅಂಧ ಮತದಾರರಿಗೆ ಬ್ರೈಲ್ ಲಿಪಿಯುಳ್ಳ ಮತದಾನ ಯಂತ್ರದ ವ್ಯವಸ್ಥೆಯಿರುತ್ತದೆ.

ಮತದಾನ ಸಮಯ ಮೀರಿದ್ದು, ಆ ಸಮಯದಲ್ಲಿ ತಾವು ಸರದಿಯ ಸಾಲಿನಲ್ಲಿ ನಿಂತಿದ್ದರೆ ತಾವು ಮತದಾನ ಮಾಡುವ ಅಧಿಕಾರವನ್ನು ಹೊಂದಿರುತ್ತೀರಿ. ನಿಗದಿತ ಸಮಯ ಮೀರಿ ಬಂದವರಿಗೆ ಮತದಾನ ಮಾಡುವ ಅಧಿಕಾರವಿಲ್ಲ.

ನೆನಪಿಡಿ, ಮತದಾನ ಮಾಡುವುದು ನಮ್ಮ ಅಧಿಕಾರ ಹಾಗೂ ಕರ್ತವ್ಯ ಕೂಡಾ ಆದುದರಿಂದ ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೇ ನಿಭರ್ೀತಿಯಿಂದ ಮತದಾನ ಕೇಂದ್ರಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ, ಯೋಗ್ಯ, ಪ್ರ್ರಾಮಾಣಿಕ ಜನಪ್ರತಿನಿಧಿಯನ್ನು ಚುನಾಯಿಸಿ… ಎಪ್ರಿಲ್ 17ರಂದು ತಪ್ಪದೇ ಮತ ಚಲಾಯಿಸಿ.
– ಬಿ.ಶಿವಕುಮಾರ್, ವಾರ್ತಾ ಇಲಾಖೆ, ನಾಯರ್ ಕೆರೆ, ಉಡುಪಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s