ಕಬೀರ್ ಹತ್ಯೆ: ಕಾಂಗ್ರೆಸ್ ಸರಕಾರ, ಸಚಿವ ಖಾದರ್ ರಿಂದ ಮಹಾದ್ರೋಹ- ಶ್ರೀರಾಮ ದಿವಾಣ.

Posted: ಏಪ್ರಿಲ್ 20, 2014 in Uncategorized

# ಶೃಂಗೇರಿ ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ಎ.19ರಂದು ಬೆಳಗ್ಗೆ ಎಎನ್ಎಫ್ ಪೊಲೀಸ್ ಸಿಬ್ಬಂದಿಗಳು ಮಂಗಳೂರಿನ ಕಬೀರ್ (28) ಎಂಬವರನ್ನು ಗುಂಡು ಹಾರಿಸಿ ಹತ್ಯಗೈದ ಅಪರಾಧ ಕೃತ್ಯದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕ್ಯಾಬಿನೆಟ್ ಸಚಿವರಾದ ಯು.ಟಿ.ಖಾದರ್ ಅವರು ಅನ್ಯಾಯಕ್ಕೊಳಗಾದ ಕಬೀರ್, ಇವರ ಕುಟುಂಬ, ಸಮಾಜ ಮತ್ತು ನ್ಯಾಯಕ್ಕೇ ಅನ್ಯಾಯವೆಸಗಿದೆ, ದ್ರೋಹವೆಸಗಿದೆ !

ಕಬೀರ್ ಕೊಲೆ ಕೃತ್ಯ ನಡೆದು ಈಗಾಗಲೇ ಒಂದಿಡೀ ದಿನ ಕಳೆದಿದೆ. ಹಂತಕ ಯಾರೆಂದು ಸ್ಪಷ್ಟವಾಗಿ ಗೊತ್ತಿದ್ದರೂ, ಆರೋಪಿಯನ್ನು ಕೃತ್ಯ ನಡೆದು 24 ಗಂಟೆ ಕಳೆದರೂ ಇನ್ನು ಸಹ ಬಂಧಿಸಲಾಗಿಲ್ಲ. ಆರೋಪಿ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಬೇಕು, ಆರೋಪಿಯನ್ನು ಶೃಂಗೇರಿ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ಪ್ರಾಥಮಿಕ ಹಂತದ ಈ ಕನಿಷ್ಟ ಕರ್ತವ್ಯವನ್ನು ಕೂಡಾ ರಾಜ್ಯ ಸರಕಾರ ಮಾಡದೆ ಕರ್ತವ್ಯಲೋಪವೆಸಗಿದೆ, ಕಾನೂನಿಗೆ ಅಪಚಾರವೆಸಗಿದೆ.

ಈ ನಡುವೆ ರಾಜ್ಯ ಸಚಿವ ಸಂಪುಟದ ಕ್ಯಾಬಿನೆಟ್ ದರ್ಜೆ ಸಚಿವರಾದ ಯು.ಟಿ.ಖಾದರ್ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಮಾಡುವ ಮೂಲಕ ಕಬೀರ್ ಹಂತಕನನ್ನು ಮೊದಲ ಹಂತದಲ್ಲಿ ರಕ್ಷಿಸಿ ನ್ಯಾಯ ಮತ್ತು ಕಾನೂನಿಗೇ ಮಹಾದ್ರೋಹವೆಸಗಿದ್ದಾರೆ.

ಖಾದರ್ ಅವರಿಗೆ, ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಪೊಲೀಸ್ ಇಲಾಖೆ ಮೇಲೆ
ವಿಶ್ವಾಸವಿಲ್ಲವೇ ? ತಮ್ಮದೇ ಆಡಳಿತದಲ್ಲಿರುವ, ತಮ್ಮದೇ ಸರಕಾರದ ಅಧೀನದಲ್ಲಿರುವ ಪೊಲೀಸ್ ಇಲಾಖೆಯಿಂದ ನ್ಯಾಯಯುತ, ನಿಷ್ಪಕ್ಷಪಾತ ತನಿಖೆ ನಡೆಸುವ ನಂಬಿಕೆ, ಸಾಮರ್ಥ್ಯ ಸರಕಾರಕ್ಕೆ ಇಲ್ಲವೇ ?

ಇದುವರೆಗೆ ರಾಜ್ಯದಲ್ಲಿ ಎಷ್ಟು ಪ್ರಕರಣಗಳನ್ನು ಪೊಲೀಸ್ ಇಲಾಖೆಯಿಂದ ವರ್ಗಾಯಿಸಿ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ? ಎಷ್ಟು ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ಸರಿಯಾಗಿ, ಸಮರ್ಥವಾಗಿ, ದಕ್ಷತೆಯಿಂದ, ನ್ಯಾಯುತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಅಗುವಂತೆ ನೋಡಿಕೊಂಡಿದೆ ಎಂಬುದನ್ನು ಈಗಲಾದರೂ ಸರಕಾರ ಮತ್ತು ಸಚಿವ ಖಾದರ್ ಅವರು ರಾಜ್ಯದ ಜನತೆಗೆ ಬಹಿರಂಗಪಡಿಸಬೇಕು, ಸ್ಪಷ್ಟಪಡಿಸಬೇಕು – ಶ್ರೀರಾಮ ದಿವಾಣ, 20.04.2014.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s