ಯುವತಿ ನಾಪತ್ತೆ

Posted: April 22, 2014 in Uncategorized

ಉಡುಪಿ: ಮಲ್ಪೆ ಸಮೋಪದ ವಡಭಾಂಡೇಶ್ವರ ನಿವಾಸಿ ರಾಮ ಪಾಲನ್ ಎಂಬವರ ಪುತ್ರಿ ಕು.ರಕ್ಷಾ (20) ಎಂಬಾಕೆ ಎ.18ರಂದು ಸಂಜೆ 5 ಗಂಟೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಮಣಿಪಾಲದ ಟ್ಯಾಪ್ಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಕ್ಷಾ, ಎ.18ರಂದು ಸಂಜೆ ಮನೆಯವರು ‘ಓದು’ ಎಂದು ಹೇಳಿದ್ದಕ್ಕೆ ಸಿಟ್ಟುಗೊಂಡು ಮನೆಯಿಂದ ಹೊರಗೆ ಹೋದವಳು ಮನೆಗೆ ಮರಳದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ.

ಈ ನಡುವೆ ಈಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಈಕೆಯ ಗೆಳಯ-ಗೆಳತಿಯರನ್ನು ಸಂಪರ್ಕಿಸಲಾಗಿದೆಯಾದರೂ, ಇದುವರೆಗೂ ಯಾವುದೇ ಮಾಹಿತಿಯೂ ಲಭಿಸಿಲ್ಲ. ಇದರಿಂದಾಗಿ ಮನೆಮಂದಿ ಆತಂಕಿತರಾಗಿದ್ದಾರೆ.

ಈಕೆಯನ್ನು ಕಂಡವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಕೋರಲಾಗಿದೆ. ಮಲ್ಪೆ ಠಾಣೆಯ ಪೊಲೀಸರು ಯುವತಿಯ ಪತ್ತೆಗಾಗಿ ಹುಡುಕಾಟ
ನಡೆಸುತ್ತಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s