ಕಬೀರ್ ಹತ್ಯೆ; ಸಿಬಿಐ ತನಿಖೆಗೆ ಆಗ್ರಹಿಸಿ ಸಿಪಿಐ ಎಂ ಪ್ರತಿಭಟನೆ

Posted: ಏಪ್ರಿಲ್ 23, 2014 in Uncategorized
ಟ್ಯಾಗ್ ಗಳು:, , , , , , , ,

ಉಡುಪಿ: ಶೃಂಗೇರಿ ಸಮೀಪ ತನಿಕೋಡು ಚೆಕ್ ಪೋಸ್ಟ್ ಬಳಿ ನಕ್ಸಲ್ ಎಂದು ಶಂಕಿಸಿ ಎಎನ್ಎಫ್ ಪೊಲೀಸ್ ಸಿಬ್ಬಂದಿ ಮಂಗಳೂರಿನ ಕಬೀರ್ (28) ಎಂಬವರನ್ನು ಗುಂಡು ಹೊಡೆದು ಹತ್ಯೆಗೈದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಹಂತಕ ಸಿಬ್ಬಂದಿಯನ್ನು ಅಮಾನತುಪಡಿಸಿ ಬಂಧಿಸಬೇಕು ಮತ್ತು ಕಬೀರ್ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಸಿಪಿಐಎಂ ಉಡುಪಿ ತಾಲೂಕು ಸಮಿತಿಯು ಎ.22ರಂದು ಉಡುಪಿ ತಾಲೂಕು ಕಚೇರಿ ಉಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು.

ಜಾನುವಾರುಗಳ ಸಾಗಾಟ ಕ್ರಮಬದ್ಧವಾಗಿರದಿದ್ದರೆ ಅದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿತ್ತು. ಆದರೆ ಹಾಗೆ ಮಡುವ ಬದಲಾಗಿ ತಪಾಸಣಾ ಠಾಣೆಯ ಬಳಿಯೇ ಗುಂಡು ಹಾರಿಸಿ ಹತ್ಯೆಗೈದಿರುವುದು ಮಾತ್ರ ಅಮಾನವೀಯ ಕ್ರಮವಾಗಿದೆ. ಕಬೀರ್ ಅವರಿಗೆ ಗುಂಡು ಹಾರಿಸಿದ ಸಿಬ್ಬಂದಿ ಯಾರು, ಗುಂಡು ಹಾರಿಸಲು ಆದೇಶ ನೀಡಿದ ಅಧಿಕಾರಿ ಯಾರು ಮತ್ತು ಯಾವ ಕಾರಣಕ್ಕಾಗಿ ಗುಂಡು ಹಾರಿಸಲಾಯಿತು ಎಂಬುದು ತನಿಖೆಯಾಗಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ಕಬೀರ್ ಹತ್ಯಾ ಪ್ರಕರಣವನ್ನು ತನಿಖೆಗೆ ಒಳಪಡಿಸಿರುವುದು ಮತ್ತು ಕೊಲೆಯಾದ ಕಬೀರ್ ಕುಟುಂಬಕ್ಕೆ ನಷ್ಟ ಪರಿಹಾರ ಘೋಷಿಸಿರುವುದನ್ನು ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಖಂಡಿಸಿದ್ದಾರೆ. ಕಬೀರ್ ಹತ್ಯೆಯನ್ನು ಸಮರ್ಥಿಸಿದ್ದಾರೆ. ಶಾಸಕ ಸುನಿಲ್ ಕುಮಾರ್ಗೆ ಮಾನವೀಯತೆ ಇದೆಯೇ ಎಂದು ಸಿಪಿಐಎಂ ಪ್ರಶ್ನಿಸಿದೆ.

ಕಬೀರ್ ಹತ್ಯೆ ಪೂರ್ವನಿಯೋಜಿತ ಕೃತ್ಯವೆಂದು ಆರೋಪಿಸಿದ ಸಿಪಿಐಎಂ, ನೊಂದ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕೆಂದು ಮನವಿ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅಲ್ಪ ಸಂಖ್ಯಾತರನ್ನು ಗುರಿ ಮಾಡಿಕೊಂಡು ಅಮಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಶಿಕ್ಷೆಗೆ ಗುರಿಪಡಿಸುತ್ತಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರದಲ್ಲಿಯೂ ಅದೇ ಕ್ರಮ ಮುಂದುವರಿದಿದೆ. ಅಲ್ಪ ಸಂಖ್ಯಾತರಿಗೆ ಹಾಗೂ ದಲಿತರಿಗೆ ರಕ್ಷಣೆ ಒದಗಿಸಬೇಕಾಗಿದೆ ಎಂದು ಸಿಪಿಐಎಂ ಮನವಿ ಮಾಡಿದೆ. ಮನವಿಯನ್ನು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಯಿತು.

ಸಿಪಿಐಎಂ ಮುಖಮಡರಾದ ಪಿ.ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ವಿಠಲ ಪೂಜಾರಿ, ಸಂಜೀವ ನಾಯಕ್, ಕೆ.ಲಕ್ಷ್ಮಣ್, ದಯಾನಂದ ಮಲ್ಪೆ, ವಿದ್ಯಾರಾಜ್ ಮೊದಲಾದವರು ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s