ಲೋಕಾಯುಕ್ತ ದಾಳಿಯ ಬಳಿಕ ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಗೆ ಇಲಿಗಳ ದಾಳಿ !

Posted: ಮೇ 5, 2014 in Uncategorized

ಉಡುಪಿ: ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಳಿ ನಡೆಸಿ ಕಡತಗಳನ್ನು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಂಡ ಬಳಿಕ ಆಸ್ಪತ್ರೆಯ ಪ್ರಯೋಗಶಾಲೆಗೆ ಇಲಿಗಳು ದಾಳಿ ಮಾಡಲು ಆರಂಭಿಸಿವೆಯಂತೆ !

ಉಡುಪಿ ಸಹಿತ ರಾಜ್ಯದ 19 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಿಗೆ ಉಪಕರಣಗಳು ಮತ್ತು ರಾಸಾಯನಿಕಗಳನ್ನು ಖರೀದಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಬಹುಕೋಟಿ ಹಗರಣ ನಡೆಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಶ್ರೀರಾಮ ದಿವಾಣ ಅವರು ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದ್ದರು. ಈ ವಿಷಯ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವರದಿಯ ಆಧಾರದಲ್ಲಿ ಲೋಕಾಯುಕ್ತ ಇಲಾಖೆಯ ಮಂಗಳೂರು ಮತ್ತು ಉಡುಪಿಯ ಪೊಲೀಸ್ ಅಧಿಕಾರಿಗಳು ಮಾರ್ಚ್ 14 ರಂದು ಏಕಕಾಲಕ್ಕೆ ಜಿಲ್ಲಾಸ್ಪತ್ರೆ ಮತ್ತು ಮಕ್ಕಳ ಹಾಗೂ ಮಹಿಳೆಯರ ಆಸ್ಪತ್ರೆಗಳಿಗೆ ದಾಳಿ ನಡೆಸಿದ್ದರು.

ಲೋಕಾಯುಕ್ತ ದಾಳಿ ನಡೆಯುವ ವರೆಗೂ ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಗೆ ಒಂದೇ ಒಂದು ದಿನ ಕೂಡಾ ಇಲಿಗಳು ಬಂದದ್ದೇ ಇಲ್ಲ. ಆಶ್ಚರ್ಯವೆಂದರೆ, ಲೋಕಾ ದಾಳಿ ನಡೆದ ಬಳಿಕ ಪ್ರಯೋಗಶಾಲೆಯೊಳಗೆ ಪ್ರವೇಶಿಸಲಾರಂಭಿಸಿದ ಇಲಿಗಳು, ಯಾವ ಉಪಕರಣಗಳ ಖರೀದಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಗರಣ ನಡೆಸಿದ್ದಾರೆಯೋ, ಅದೇ ಉಪಕರಣಗಳ ಒಳಭಾಗಕ್ಕೆ ಸಹ ನುಗ್ಗಿದ ಇಲಿಗಳು ಉಪಕರಣಗಳನ್ನು ಹಾಳು ಮಾಡಿವೆಯಂತೆ !

ಇಲಿಗಳನ್ನು ಹಿಡಿಯುವುದಕ್ಕಾಗಿಯೇ ಆಸ್ಪತ್ರೆ ಅಧಿಕಾರಿಗಳು ಲೋಕಾ ದಾಳಿ ನಡೆದ ಬಳಿಕ ಹೊಸ ಬೋನುಗಳನ್ನು ಖರೀದಿಸಿದ್ದಾರೆ. ಈ ಬೋನಗಳಿಗೆ ಇಲಿಗಳು ಸಿಕ್ಕಿಬೀಳಲಿಕ್ಕಾಗಿ ತಿಂಡಿಗಳನ್ನು ಇರಿಸುತ್ತಾರೆ. ಆದರೆ, ಪ್ರಯೋಗಶಾಲೆಗೆ ಪ್ರವೇಶಿಸುವ ಇಲಿಗಳು ಬೋನಿನೊಳಗೆ ಪ್ರವಶಿಸುವುದೇ ಇಲ್ಲವಂತೆ. ಮಾತ್ರವಲ್ಲ, ತಿಂಡಿಗಳನ್ನು ಸಹ ತಿನ್ನುವುದೇ ಇಲ್ಲವಂತೆ. ಪ್ರಯೋಗಶಾಲೆಗೆ ನುಗ್ಗುವ ಇಲಿಗಳು, ನೇರವಾಗಿ ಉಪಕರಣಗಳ ಒಳಭಾಗಕ್ಕೆ ಹೋಗಿ ಉಪಕರಣಗಳನ್ನು ಹಾಳುಗೆಡವುತ್ತವಂತೆ !

ಇದೀಗ ಈ ಉಪಕರಣಗಳನ್ನು ಮತ್ತು ಈ ಉಪಕರಣಗಳ ಮೂಲಕ ಉಪಯೋಗಿಸಲಾಗುವ ರಾಸಾಯನಿಕಗಳನ್ನು ಬಳಕೆ ಮಾಡುವುದುನ್ನು ಆಸ್ಪತ್ರೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಉಪಕರಣಗಳನ್ನು ಪರಿಶೀಲನೆ ನಡೆಸಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕಂಪೆನಿಯೊಂದರ ಸಿಬ್ಬಂದಿಗಳು ಉಪಕರಣಗಳನ್ನು ಇಲಿಗಳು ಕಟ್ ಮಾಡಿವೆ ಎಂದು ವರದಿ ನಿಡಿದ್ದಾರೆ. ಆದುದರಿಂದ ಆಸ್ಪತ್ರೆ ಅಧಿಕಾರಿಗಳು ಮತ್ತೆ ಹೊಸ ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರಂತೆ !

ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಹಾಗೂ ಕೆಲವು ಮಂದಿ ಸಿಬ್ಬಂದಿಗಳು ಶಾಮೀಲಾಗಿದ್ದಾರೆ. ಅತ್ಯಾಶ್ಚರ್ಯಕರ ವಿಷಯವೆಂದರೆ, ಪ್ರಯೋಗಶಾಲೆಗೆ ನುಗ್ಗುವ ಇಲಿಗಳು ಹಗರಣದಲ್ಲಿ ಭಾಗಿಯಾಗಿರುವವರ ಮನೆಗಳಿಂದಲೇ ನೇರವಾಗಿ
ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಗಳಿಗೆ ಆಗಮಿಸುತ್ತಿವೆ ಎಂದು ಶಂಕಿಸಲಾಗಿದೆ.

ಲೋಕಾಯುಕ್ತ ದಾಳಿಯ ಬಳಿಕ ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಗೆ ನುಗ್ಗಿ ಇಲಿಗಳು ಉಪಕರಣಗಳನ್ನು ಹಾಳುಗೆಡವಿದ ಪ್ರಕರಣ ತೀವ್ರವಾದ ಕುತೂಹಲಕ್ಕೆ ಮತ್ತು ಗಂಭೀರವಾದ ಸಂಶಯಗಳಿಗೆ ಕಾರಣವಾಗಿದೆ.
tags: udupi news, udupi, district hospital udupi, districts hospitals, udupi district administrators, taluk hospitals, hospitals, doctors, blood, health, u.t.khadar, blood bank, principal secretory health & family karnataka, http://www.udupibits.com, http://www.udupibits.in]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s