ಉಡುಪಿ: ಉಡುಪಿ ದೇವಾಡಿಗರ ಸಂಘದ ಅಧೀನದಲ್ಲಿರುವ ಚಿಟ್ಪಾಡಿಯ ದೇವಾಡಿಗರ ಸಭಾಭವನಕ್ಕೆ ಗವಾಕ್ಷಿಯಿಂದ ಅಕ್ರಮ ಪ್ರವೇಶ ಮಾಡಿದ ದೇವಾಡಿಗರ ಹಿತರಕ್ಷಣಾ ವೇದಿಕೆಯ ಸದಸ್ಯರು, ಸಭಾ ಭವನದ ಅಧ್ಯಕ್ಷರ ಗಮನಕ್ಕೆ ತಾರದೆ ಸಮಾಜ ಬಾಂಧವರನ್ನು ಸಂಘದ ವಿರುದ್ಧ ಎತ್ತಿ ಕಟ್ಟುವ ಉದ್ಧೇಶದಿಂದ ಸಭೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಮೇ 4ರಂದು ಸಂಜೆ 4 ಗಂಟೆಗೆ ದೇವಾಡಿಗರ ಹಿತರಕ್ಷಣಾ ವೇದಿಕೆಯ ಸದಸ್ಯರು ದೇವಾಡಿಗರ ಸಂಘದ ಕಾರ್ಯದರ್ಶಿಯ ಸರ್ವಾಧಿಕಾರಿ ಧೋರಣೆ ಮತ್ತು ಸಂಘದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ಸಂಘದ ವಿರುದ್ಧ ಸಭಾಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಸಭಾಭವನದ ಉಪಾಧ್ಯಕ್ಷ ರತ್ನಾಕರ ಜಿ.ಎಸ್. ನೀಡಿದ ದೂರಿನಂತೆ ದೇವಾಡಿಗರ ಹಿತರಕ್ಷಣಾ ವೇದಿಕೆಯ ಸದಸ್ಯರಾದ ಶ್ರೀಧರ ದೇವಾಡಿಗ, ಚಂದ್ರಕಾಂತ ದೇವಾಡಿಗ, ಜೀವರತ್ನ ದೇವಾಡಿಗ, ಉಮೇಶ ದೇವಾಡಿಗ, ಮಂಜುನಾಥ ದೇವಾಡಿಗ, ಹೇಮಂತ ದೇವಾಡಿಗ, ರಾಘವೇಂದ್ರ ಜಿ., ಮಾಧವ ದೇವಾಡಿಗ ಹಾಗೂ ಮಂಜುನಾಥ ದೇವಾಡಿಗ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s