ವಿವಾಹ ನಿಶ್ಚಿತಾರ್ಥಗೊಂಡಿದ್ದ ಯುವತಿ ಆತ್ಮಹತ್ ಯೆ

Posted: ಮೇ 7, 2014 in Uncategorized

ಉಡುಪಿ: ಮೂಲತಹ ಅಲೆವೂರು ನಿವಾಸಿಯಾಗಿದ್ದು, ಪ್ರಸ್ತುತ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಬಳಿ ವಾಸವಾಗಿರುವ ಶ್ರೀಮತಿ ಶಾಂತಾ ಪ್ರಭಾಕರ ಆಚಾರ್ಯ ಇವರ ಅವಿವಾಹಿತ ಪುತ್ರಿ ಕುಮಾರಿ ಪ್ರಜ್ಞಾ ಆಚಾರ್ಯ (28) ಮೇ 6ರಂದು ರಾತ್ರಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ತಿಂಗಳುಗಳ ಹಿಂದೆಯಷ್ಟೇ ಪ್ರಜ್ಞಾಳಿಗೆ ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಯುವಕನೊಂದಿಗೆ ವಿವಾಹ ನಿಶ್ಚಿತಾರ್ತ ನಡೆದು, ವಿವಾಹದ ದಿನಾಂಕವನ್ನೂ ನಿಗದಿಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ವಿವಾಹದ ಆಮಂತ್ರಣ ಪತ್ರಿಕೆ ಮುದ್ರಣವಾಗಿದ್ದು, ಈಕೆಯ ತಾಯಿ ಶಾಂತಾ ಆಮಂತ್ರಣ ವಿತರಿಸಲು
ಅಮೇರಿಕಾಗೆತೆರಳಿದ್ದರು. ಅಮ್ಮ ಅಮೇರಿಕಾದಲ್ಲಿ ವಿವಾಹದ ಆಮಂತ್ರಣ ಪತ್ರಿಕೆ ವಿತರಿಸುತ್ತಿರುವಾಗ ಮಗಳು ಮನೆಯಲ್ಲಿ ಆತ್ಮಹತ್ಯೆಗೆ ಶರಣು ಹೋಗಿದ್ದಾಳೆ.

ಆತ್ಮಹತ್ಯೆಯ ಹಿಂದಿನ ದಿನದ ವರೆಗೂ ಪ್ರಜ್ಞಾ ಸಂತೋಷದಲ್ಲಿಯೇ ಇದ್ದಳೆಂದು ಹೇಳಲಾಗಿದೆ. ಹಿಂದಿನ ದಿನ ಸಹ ತನ್ನ ಪತಿಯಾಗಲಿದ್ದ ಯುವಕನ ಜೊತೆಗೆ ಮಾತನಾಡಿದ್ದಳೆಂದು ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ಮುನ್ನ ಪತ್ರ ಬರೆಯದೇ ಇದ್ದ ಕಾರಣ ಕಾರಣ ನಿಗೂಢವಾಗಿಯೇ ಉಳಿದಿದೆ.

ನಗರದ ಸೈಂಟ್ ಸಿಸಿಲಿಸ್ ಶಿಕ್ಷಣ ಶಾಲೆ, ಎಂಜಿಎಂ ಮತ್ತು ಎಂಐಟಿ ಮೊದಲಾದ
ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ಪ್ರಜ್ಞಾ, ಕೆಲ ಕಾಲ ಅತಿಥಿ ಉಪನ್ಯಾಸಕಿಯಾಗಿಯೂ, ಕಂಪ್ಯೂಟರ್ ಸೋಫ್ಟವೇರ್ ಆಗಿಯೂ ಕೆಲಸ ಮಾಡಿದ್ದರು.

ಅಕ್ಕ ಸಪ್ನಾ ವಿವಾಹಿತಳಾಗಿದ್ದು, ತಮ್ಮ ಶ್ರೀಶ ಅಲೆವೂರು ಮದುವೆಯ ಪೂರ್ವ
ಸಿದ್ಧತೆಯಲ್ಲಿ ನಿರತರಾಗಿದ್ದರು. ಜ್ಯುವೆಲ್ಲರಿ ಮಾಲೀಕರಾಗಿದ್ದ ತಂದೆ ಅಲೆವೂರು ಪ್ರಭಾಕರ ಆಚಾರ್ಯರನ್ನು ದಶಕದ ಹಿಂದೆ ನಗರದಲ್ಲಿ ಸುಪಾರಿ ಹಂತಕರು ಗುಂಡು ಹಾರಿಸಿ ಕೊಲೆಗೈದಿದ್ದರು.

ಪ್ರಜ್ಞಾಳ ಮೃತದೇಹವನ್ನು ಜಿಲ್ಲಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಮಣಿಪಾಲದ ಕೆಎಂಸಿ ಶವಾಗಾರದಲ್ಲಿ ಇರಿಸಲಾಗಿದೆ. ಅಮೇರಿಕಾದಲ್ಲಿರುವ ತಾಯಿ ಊರಿಗೆ ಮರಳಲು ಕುಟುಂಬಸ್ಥರು ಕಾಯುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣದ ಬಗ್ಗೆ ಮೃತಳ ತಮ್ಮ ಶ್ರೀಶ ನೀಡಿದ ಹೇಳಿಕೆಯಂತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ
ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s