ರೆಡ್ ಕ್ರಾಸ್ ರಾಜ್ಯಸಭಾಪತಿಯಾಗಿ ಶಿವಮೊಗ್ಗದ ಶಿವಮೊಗ್ಗದ ಎಸ್.ಪಿ.ದಿನೇಶ್ ಆಯ್ಕೆ

Posted: ಮೇ 13, 2014 in Uncategorized
ಟ್ಯಾಗ್ ಗಳು:, , , , , ,

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ನೂತನ ರಾಜ್ಯ ಸಭಾಪತಿಯಾಗಿ ಶಿವಮೊಗ್ಗದ ಎಸ್.ಪಿ.ದಿನೇಶ್ ಹಾಗೂ ಗೌರವ ಕೋಶಾಧ್ಯಕ್ಷರಾಗಿ ಚಿತ್ರದುರ್ಗದ ಮಂಜುನಾಥ ಗುಪ್ತ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿರುವ ಸಂಸ್ಥೆಯ ರಾಜ್ಯ ಘಟಕದ ಕಚೇರಿ ಸಭಾಂಗಣದಲ್ಲಿ ಮಾರ್ಚ್ 27ರಂದು ನಡೆದ ರಾಜ್ಯ ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆ ಮೂಲಕ ಈ ಆಯ್ಕೆ ನಡೆಯಿತು. ರಾಜ್ಯ ಉಪ ಸಭಾಪತಿ ಶ್ರೀಮತಿ ಮಧುರಾ ಅಶೊಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಹಿಂದೆ ರಾಜ್ಯ ಸಭಾಪತಿಯಾಗಿದ್ದ ಉಡುಪಿಯ ಬಸ್ರೂರು ರಾಜೀವ್ ಶೆಟ್ಟಿ ಅವರನ್ನು ಆಡಳಿತ ಮಂಡಳಿಯು, ಫೆಬ್ರವರಿ 20ರಂದು ನಡೆದ ಸಭೆಯಲ್ಲಿ ಸಭಾಪತಿ ಸ್ಥಾನದಿಂದ ಉಚ್ಚಾಟನೆ ಮಾಡಿತ್ತು. ಮಾತ್ರವಲ್ಲ, ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತು ಮಾಡಿತ್ತು. ಗೌರವ ಕೋಶಾಧ್ಯಕ್ಷರಾಗಿದ್ದ ಸುಭಾಶ್ ರೆಡ್ಡಿ ಪಾಟೀಲ್ ಇತ್ತೀಚೆಗೆ ನಿಧನರಾಗಿದ್ದರು. ಇದರಿಂದಾಗಿ ಕಾಲಿ ಇದ್ದ ಎರಡು ಸ್ಥಾನಗಳಿಗೆ ಆಯ್ಕೆಮಾಡಲು ಮತ್ತು ಇತರ ವಿಷಯಗಳನ್ನು ಚರ್ಚಿಸಲು ಮಾರ್ಚ್ 27ರಂದು ರಾಜ್ಯ ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಆಡಳಿತ ಮಂಡಳಿಯ 27 ಮಂದಿ ಸದಸ್ಯರು ಮತ್ತು ಉಚ್ಛಾಟಿತ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು. ಮಾರ್ಚ್ 27ರ ಸಭೆಯ ಹಿನ್ನೆಲೆಯಲ್ಲಿ ಬಸ್ರೂರು ರಾಜೀವ್ ಶೆಟ್ಟಿಯವರ ಪರವಾಗಿ ಆಡಳಿತ ಮಂಡಳಿ ಸದಸ್ಯರಾದ ಚಿಕ್ಕಮಗಳೂರಿನ ಡಾ.ಕೆ.ಸುಂದರೇಗೌಡ, ದ.ಕ.ಜಿಲ್ಲೆಯ ರವೀಂದ್ರನಾಥ್ ಕೆ., ಕೊಡಗಿನ ಎಚ್.ಆರ್.ಮುರಳೀಧರ್ ಹಾಗೂ ಪೆರಿಕೋ ಪ್ರಭು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಚಾಟನೆಗೊಂಡು, ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತುಗೊಂಡಿದ್ದ ಬಸ್ರೂರು ರಾಜೀವ್ ಶೆಟ್ಟಿಯವರು, ಮಾರ್ಚ್ 27ರ ಸಭೆಯಲ್ಲಿ ಕೇವಲ ವೀಕ್ಷಕರಾಗಿ ಮಾತ್ರ ಉಪಸ್ಥಿತರಿರಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತ್ತು. ಸಭೆಯಲ್ಲಿ ಮತದಾನ ಮಾಡುವಂತಿಲ್ಲ ಮತ್ತು ಮಾತನಾಡುವಂತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಆಡಳಿತ ಮಂಡಳಿ ಸಭೆಯಲ್ಲಿ ಎಸ್.ಪಿ.ದಿನೇಶ್ ಹಾಗೂ ಡಾ.ಸುಂದರೇಗೌಡ ರಾಜ್ಯ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣೆ ನಡೆಯಿತು. ದಿನೇಶ್ ಅವರು 20 ಮತಗಳನ್ನು ಸುಂದರೇಗೌಡ ಅವರು 6 ಮತಗಳನ್ನು ಪಡೆದರು. ಒಂದು ಮತ ಅಸಿಂಧುಗೊಂಡಿತು.

ಮಂಜುನಾಥ ಗುಪ್ತ ಹಾಗೂ ಪೆರಿಕೋ ಪ್ರಭು ಗೌರವ ಕೋಶಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣೆ ನಡೆಯಿತು. ಮಂಜುನಾಥ ಗುಪ್ತ ಅವರಿಗೆ 18 ಮತಗಳು ಮತ್ತು ಪೆರಿಕೋ ಪ್ರಭು ಅರಿಗೆ 8 ಮತಗಳು ಲಭಿಸಿದವು. ಒಂದು ಮತ ಅಸಿಂಧುಗೊಂಡಿತು.

ಈ ಮೂಲಕ ಎಸ್.ಪಿ.ದಿನೇಶ್ ಅವರು ನೂತನ ರಾಜ್ಯ ಸಭಾಪತಿಯಾಗಿ ಹಾಗೂ ಮಂಜುನಾಥ ಗುಪ್ತ ಅವರು ಗೌರವ ಕೋಶಾದ್ಯಕ್ಷರಾಗಿ ಆಯ್ಕೆಯಾದರು. ಉಚ್ಛಾಟಿತ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು ಉಪಸ್ಥಿತರಿದ್ದು, ಚುನಾವಣೆಯನ್ನು ವೀಕ್ಷಿಸಿದರು.
928.03.2014ರಂದು ಪ್ರಕಟಿತ ವರದಿ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s