ಉಡುಪಿ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಕೆಳಾರ್ಕಳಬೆಟ್ಟು ನಿವಾಸಿ ವಿಶ್ವನಾಥ ನಾಯಕ್ (55) ಎಂಬವರು ಗಾಯಗೊಂಡ ಘಟನೆ ಅಂಬಾಗಿಲು-ಪೆರಂಪಳ್ಳಿ ರಸ್ತೆಯಲ್ಲಿ ಮೇ. 20ರಂದು ಸಂಜೆ ಗಂಟೆ 5.30ಕ್ಕೆ ಸಂಭವಿಸಿದೆ.
ಈ ಬಗ್ಗೆ ಗಾಯಾಳುವಿನ ತಮ್ಮ ವಿಜಯ ನಾಯಕ್ ನೀಡಿದ ದೂರಿನಂತೆ ಕಾರು ಚಾಲಕ ದಿಲೀಪ್ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.