ಉಡುಪಿ: ಇಳಿಯುವ ಮೊದಲೇ ಚಾಲಕ ಬಸ್ ಚಲಾಯಿಸಿದ ಕಾರಣ ಮಹಿಳಾ ಪ್ರಯಾಣಿಕರೊಬ್ಬರು ಹಿಂಬಾಗಿಲಿನಿಂದ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ನಗರದ ಹಳೆ ತಾಲೂಕು ಕಚೇರಿ ಬಳಿ ಸಂಭವಿಸಿದೆ.
ಈ ಬಗ್ಗೆ ಗಾಯಾಳು ಹಾಸನ ನಿವಾಸಿ ಸಂಭಮ್ಮ (62) ನೀಡಿದ ದೂರಿನಂತೆ ಬಸ್ ಚಾಲಕ ಸಾಮ್ಸನ್ ವಿರುದ್ಧ ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.