ಎಡಿಜಿಪಿ ರವೀಂದ್ರನಾಥ್ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಒತ್ತಾಯ

Posted: ಜೂನ್ 1, 2014 in Uncategorized

ಉಡುಪಿ: ಬೆಂಗಳೂರು ಕೆ.ಎಸ್.ಅರ್.ಪಿ ಎಡಿಜಿಪಿ ಡಾ.ಪಿ.ರವೀಂದ್ರನಾಥ್‌ ಅವರ ವರ್ಗಾವಣೆಯನ್ನು ರದ್ದುಮಾಡಿ ಕೆಎಸ್‌ಆರ್‌ಪಿ ವಿಭಾಗದಲ್ಲಿಯೇ ಮುಂದುವರಿಯಲು ಅವಕಾಶ ಮಾಡಿಕೊಡಬೇಕೆಂದು ‘ನ್ಯಾಯಕ್ಕಾಗಿ ನಾವು’ ಸಂಘಟನೆಯ ಮುಖಂಡ ಮತ್ತು ‘ಸಂವಾದ’ ಮಾಸಿಕದ ಸಂಪಾದಕರಾದ ಇಂದೂಧರ ಹೊನ್ನಾಪುರ ಸರಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮೇ.31ರಂದು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿಯ ಫೋಟೊ ತೆಗೆದಿದ್ದಾರೆ ಎಂಬ ನೆಪ ಹೇಳಿಕೊಂಡು ಎಡಿಜಿಪಿ ರವೀಂದ್ರನಾಥ್‌ರನ್ನು ಕೆಎಸ್‌ಆರ್‌ಪಿ ವಿಭಾಗದಿಂದ ವರ್ಗಾವಣೆ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಎಡಿಜಿಪಿ ರವೀಂದ್ರನಾಥ್ ಕೆಎಸ್‌ಆರ್‌ಪಿಯಲ್ಲಿಯೇ ಮುಂದುವರಿಯುವಂತೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.

ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್‌ಕರ್ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ರೀತಿಯಲ್ಲಿ ವರ್ತಿಸುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗಾಗಿ ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕಾದರೆ ನ್ಯಾಯಾಂಗ ತನಿಖೆಯಾಗಬೇಕೆಂದು ಅವರು ಸರಕಾರಕ್ಕೆ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡಿ, ಯುವತಿಯ ಫೋಟೊ ತೆಗೆದಿದ್ದಾರೆ ಎಂಬ ಗಾಳಿ ಸುದ್ದಿಗೆ ಎಡಿಜಿಪಿ ರವೀಂದ್ರನಾಥ್‌ರನ್ನು ವರ್ಗಾವಣೆ ಮಾಡಿರುವುದು
ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಶೋಭೆ ತರುವಂತಹದ್ದಲ್ಲ. ಈ ಕೂಡಲೇ ವರ್ಗಾವಣೆಯನ್ನು ರದ್ದುಮಾಡಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಎಡಿಜಿಪಿ ರವೀಂದ್ರನಾಥ್‌ರ ವಿರುದ್ಧ ಸಂಚು ನಡೆದಿದ್ದು, ಇದರಲ್ಲಿ ಭಾಗಿಯಾಗಿರುವವರನ್ನು ವರ್ಗಾವಣೆ ಮಾಡಬೇಕು. ಪ್ರಕರಣದ ರೂವಾರಿ ಯಾರೆಂದು
ಬಹಿರಂಗಪಡಿಸಬೇಕೆಂದು ಅಗ್ನಿ ಶ್ರೀಧರ್ ಆಗ್ರಹಿಸಿದರು.

ಎಸ್‌ಎಸ್‌ಡಿ ಅಧ್ಯಕ್ಷ ವೆಂಕಟಸ್ವಾಮಿ, ದಸಂಸ ನಾಗರಾಜು ಹಾಗೂ ನರಸಿಂಹಮೂರ್ತಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s