ಬ್ರಾಹ್ಮಣೇತರ ಸನ್ಯಾಸಿ ಎಂಬ ಕಾರಣಕ್ಕೆ ಕೊಲ್ಲೂರು ಸಮಾಧಿ ವಿವಾದ ಸೃಷ್ಟಿಸಲಾಗಿದೆ: ಶಿವಾಜಿ ಸುವರ್ಣ ಆರೋಪ

Posted: ಜೂನ್ 13, 2014 in Uncategorized
ಟ್ಯಾಗ್ ಗಳು:, , , , , , , , , ,

ಉಡುಪಿ: ಕೊಲ್ಲೂರಿನಲ್ಲಿರುವ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಮಾಡಲಾದ ಸಮಾಧಿ ಸ್ವಾಮೀ ವಿಮಲಾನಂದರು ಬ್ರಾಹ್ಮಣೇತರರು ಎಂಬ ಒಂದೇ ಒಂದು ಕಾರಣಕ್ಕಾಗಿ ಸ್ಥಾಪಿತ ಹಿತಾಸಕ್ತಿ ವರ್ಗವೊಂದು ಸಮಾಧಿ ಸ್ಥಳಾಂತರಕ್ಕೆ ಹುನ್ನಾರ ನಡೆಸಿದೆ ಎಂದು ಮೂಡುಬೆಳ್ಳೆ ಶ್ರೀ ಗುರು ನಿತ್ಯಾನಂದ ಮಂದಿರದ ಸಂಚಾಲಕರಾದ ಶಿವಾಜಿ ಸುವರ್ಣ ಆರೋಪಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಜೂನ್ 12ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ವಿಮಲಾನಂದ ಸ್ವಾಮೀಜಿಯವರ ಸಮಾಧಿಯನ್ನು ಸ್ಥಳಾಂತರಗೊಳಿಸುವ ಹುನ್ನಾರದ ಭಾಗವಾಗಿ ಸ್ಥಾಪಿತ ಹಿತಾಸಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸ್ಥಳೀಯ ಭಕ್ತರ ವಿವಿಧ ರೀತಿಯ ವಿಚಾರಗಳನ್ನು ಹಬ್ಬಿಸಿ ಭಯಭೀತಿಯನ್ನು ಸೃಷ್ಟಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ಅನ್ವಯ ಅಕ್ಷಮ್ಯ ಅಪರಾಧವಾಗಿದೆ ಎಂದು ಶಿವಾಜಿ ಸುವರ್ಣ ಮುನ್ನೆಚ್ಚರಿಕೆ ನೀಡಿದರು.

ಸಮಾಧಿ ಸ್ಥಳಾಂತರಕ್ಕಾಗಿ ಸ್ಥಾಪಿತ ಹಿತಾಸಕ್ತರು ನಡೆಸುತ್ತಿರುವ ಹುನ್ನಾರಗಳನ್ನು ನಿತ್ಯಾನಂದ ಭಕ್ತವೃಂದದ ಪರವಾಗಿ ತೀವ್ರವಾಗಿ ಖಂಡಿಸಿರುವ ಸುವರ್ಣ ಅವರು, ಒಂದು ಪಕ್ಷ ಸಮಾಧಿಯನ್ನು ಸ್ಥಳಾಂತರಗೊಳಿಸಿದ್ದೇ ಆದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನಗಳಿಗೆ ಸಂಪ್ರದಾಯ ಇರುವಂತೆಯೇ ನಿತ್ಯಾನಂದ ಸ್ವಾಮೀಜಿಯವರ ಮಂದಿರಗಳಿಗೂ ತನ್ನದೇ ಆದ ಸಂಪ್ರದಾಯವಿದೆ. ನಿತ್ಯಾನಂದ ಮಂದಿರಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯದ ಪ್ರಕಾರವೇ ವಿಮಲಾನಂದ ಸ್ವಾಮೀಜಿಯವರನ್ನು ಸಮಾಧಿ ಮಾಡಲಾಗಿದೆ. ಗುರು ನಿತ್ಯಾನಂದರ ಆಶ್ರಮದ ಆವರಣದಲ್ಲಿ ಅವರ ಶಿಷ್ಯರಾದ ವಿಮಲಾನಂದರನ್ನು ಸಮಾಧಿ ಮಾಡಿರುವುದರ ಹಿಂದೆ ಯಾವುದೇ ವರ್ಗ-ಸಮುದಾಯಕ್ಕೂ ನವುಂಟಮಾಡುವ ಯಾವ ಉದ್ಧೇಶವೂ ಖಮಡಿತಾ ಇರಲಿಲ್ಲ. ನಿತ್ಯಾನಂದ ಭಕ್ತರು ಸಹ ದೇವಿ ಮೂಕಾಂಬಿಕೆಯ ಭಕ್ತರಾಗಿದ್ದು, ಸಮಾಧಿ ವಿಷಯದಲ್ಲಿ ಅನಗತ್ಯ ಗೊಂದಲ ಎಬ್ಬಿಸುವುದನ್ನು ಕೈಬಿಟ್ಟು ವಿವಾದವನ್ನು
ಮುಕ್ತಾಯಗೊಳಿಸುವುದು ಸಮಾಜ ಸ್ವಾಸ್ಥ್ಯದ ದೃಷ್ಟಿಯಿಮದ ಒಳ್ಳೆಯದು ಎಂದು ಶಿವಾಜಿ ಸುವರ್ಣ ತಿಳಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s