ರೌಡಿ ಶೀಟರ್ ನಿಂದ ಕೊಲೆ ಬೆದರಿಕೆ: ಪಿಸ್ತೂಲ್, ಪಾಸ್ ಪೋರ್ಟ್ ಮುಟ್ಟುಗೋಲಿಗೆ ಆಗ್ರಹ

Posted: ಜೂನ್ 15, 2014 in Uncategorized

ಉಡುಪಿ: ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಹಾಗೂ ನದಿಯನ್ನು ಅತಿಕ್ರಮಿಸಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸುತ್ತಿರುವುದರ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರಿಗೆ, ಅತಿಕ್ರಮಣ ಮಾಡಿ ರೆಸಾರ್ಟ್ ನಿರ್ಮಿಸುತ್ತಿರುವ ಕೇರಳ ಮೂಲದ ಫ್ರಾನ್ಸಿಸ್ ಜಾರ್ಜ್ ಎಂಬವರು ಗುಂಡು ಹಾಕಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಸಂತ್ ಕುಮಾರ್ ಶೆಟ್ಟಿ ದೂರಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಜೂನ್ 14ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಫ್ರಾನ್ಸಿಸ್ ಜಾರ್ಜ್ ನಡೆಸಿದ ಅತಿಕ್ರಮಣದ ಬಗ್ಗೆ ಸಮಗ್ರ ವಿವರ ನೀಡಿದ ವಸಂತ್ ಕುಮಾರ್ ಅವರು, ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಿರುವುದಾಗಿ ತಿಳಿಸಿದರು.

27 ವರ್ಷಗಳ ಹಿಂದೆ ಕೇರಳದಿಂದ ಕುಂದಾಪುರಕ್ಕೆ ಆಗಮಿಸಿ ಭೂಮಿ ಖರೀದಿಸಿದ ಫ್ರಾನ್ಸಿಸ್ ಜಾರ್ಜ್, ಬಳಿಕ ಎಕ್ರೆ ಗಟ್ಟಲೆ ಕಂದಾಯ ಮತ್ತು ಮೀಸಲು ಅರಣ್ಯ ಭೂಮಿಯನ್ನು
ಅತಿಕ್ರಮಿಸಿಕೊಂಡಿದ್ದಾರೆ. ಹೆಂಗವಳ್ಳಿ ಗ್ರಾಮ ಪಂಚಾಯತ್ನಿಂದ ಯಾವುದೇ ಪರವಾನಿಗೆಗಳನ್ನೂ ಪಡೆದುಕೊಳ್ಳದೆ ಅಕ್ರಮವಾಗಿ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ಈ ರೆಸಾರ್ಟ್ ನಿರ್ಮಿಸಲು ಹೆಂಗವಳ್ಳಿಯಲ್ಲಿ ಹರಿದು ಹೋಗುವ ತೊಂಭತ್ತು ಹೊಳೆಯ ಮಧ್ಯ ಭಾಗದಲ್ಲಿ ಎರಡು ಎಕ್ರೆ ಸ್ಥಳವನ್ನು ಅತಿಕ್ರಮಣ ಮಾಡಿದ್ದೂ ಅಲ್ಲದೆ, ಸ್ಪೋಟಕ ಉಪಯೋಗಿಸಿ ಬಂಡೆಕಲ್ಲುಗಳನ್ನು ನಾಶಪಡಿಸಿದ್ದಾರೆ, ಹೊಳೆಯ ದಿಕ್ಕನ್ನೇ ಬದಲಾಯಿಸಿದ್ದಾರೆ ಎಂದು ವಸಂತ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಅನಧಿಕೃತವಾಗಿ ನಿರಮಿಸುತ್ತಿರುವ ರೆಸಾರ್ಟ್ ನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಭೂಪರಿವರ್ತನೆ ಮಾಡದೆ, ಯಾವುದೇ
ಪರವಾನಿಗೆಗಳನ್ನೂ ಪಡೆದುಕೊಳ್ಳದೆ ಅತಿಕ್ರಮಣ ನಡೆಸಿಕೊಂಡು ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಆದರೂ ಇದಕ್ಕೆ ವಿದ್ಯುತ್ ಸಂಪರ್ಕವಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ ವಸಂತ್ ಕುಮರ್ ಅವರು, ಆರಂಭದಲ್ಲಿ ಇಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸರಕಾರಿ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದಾಗ ಅವರು ಸಮರ್ಪಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದೆ ನಿರ್ಲಕ್ಷಿಸಿದರು. ಬಳಿಕ ಲಿಖಿತವಾಗಿ ದೂರು ನಿಡಿದಾಗ ಈಗ ಸೂಕ್ತ ಕ್ರಮ ಕೈಗೊಳ್ಳತೊಡಗಿದ್ದಾರೆ ಎಂದು ಹೇಳಿದರು.

ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಫ್ರಾನ್ಸಿಸ್, ಶಂಕರನಾರಾಯಣ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾರೆ. ಪರವಾನಿಗೆ ಇರುವ ಪಿಸ್ತೂಲ್ ಹೊಂದಿರುವ ಇವರು ಇದೀಗ ಭೀಮು ಅತಿಕ್ರಮಣ ಮತ್ತು ಅಕ್ರಮ ರೆಸಾರ್ಟ್ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರಲ್ಲಿ ಕೆಲವರಿಗೆ ಮೌಖಿಕವಾಗಿ ಹಾಗೂ ಇನ್ನು ಕೆಲವರಿಗೆ ಮೊಬೈಲ್ ಮೂಲಕ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ಜಿಲ್ಲಾಡಳಿತ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಫ್ರಾನ್ಸಿಸ್ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಸಂತ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.

ಫ್ರಾನ್ಸಿಸ್ ಜಾರ್ಜ್ ಅವರಲ್ಲಿ ಪಾಸ್ ಪೋರ್ಟ್ ಇದೆ. ಈ ಹಿಂದೆ ಕ್ರಿಮಿನಲ್ ಕೃತ್ಯವೆಸಗಿದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡ ಉದಾಹರಣೆಯೂ ಇದೆ. ರೌಡಿ ಶೀಟರ್ ಫ್ರಾನ್ಸಿಸ್ ಮತ್ತೆ ಹೆಂಗವಳ್ಳಿಯಲ್ಲೂ ಯಾರನ್ನಾದರೂ ಗುಂಟಡು ಹೊಡೆದು ಕೊಂದು, ಬಳಿಕ ವಿದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ. ಆದುದರಿಂದ ಜಿಲ್ಲಾಡಳಿತ ಕೂಡಲೇ ಅವರಲ್ಲಿರುವ ಪಿಸ್ತೂಲ್ ಮತ್ತು ಪಾಸ್ಪೋರ್ಟ್ ವಶಕ್ಕೆ ಪಡೆದುಕೊಂಡು ಅವುಗಳನ್ನು ರದ್ದುಪಡಿಸಬೇಕು ಎಂದು ಹೆಂಗವಳ್ಳಿ ಮತ್ತು ಬೆಳ್ವೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಹೆಂಗವಳ್ಳಿ ಮತ್ತು ಬೆಳ್ವೆ ಗ್ರಾಮಗಳ ಹೋರಾಟಗಾರರಾದ ಗಣಪ ನಾಯಕ್, ಸಿದ್ಧಾರ್ಥ ಶೆಟ್ಟಿ, ಯೋಗೀಶ್ ಮಡಿವಾಳ, ಬೋಜ ಮಡಿವಾಳ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s