ಕೊಲ್ಲೂರಿನಲ್ಲಿ ಭಾವಪೂರ್ಣವಾಗಿ ನಡೆದ ಸಂತ ವಿಮಲಾನಂದರ ಆರಾಧನೆ..

Posted: ಜೂನ್ 16, 2014 in Uncategorized

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಕೆಲವು ಮಂದಿ ಅರ್ಚಕರು ಜಾತಿ ವ್ಯಸನದಿಂದ ಅನಗತ್ಯವಾಗಿ ಸೃಷ್ಟಿಸಿದ ವಿವಾದ ಮತ್ತು ಅಡೆತಡೆಗಳ ನಡುವೆಯೂ, ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿಗಳ ನೂರಾರು ಮಂದಿ ಭಕ್ತ ಸಮೂಹದ ಆತ್ಮಾರ್ಪಣೆಯ ಕೂಡುವಿಕೆಯೊಂದಿಗೆ ಜೂನ್ 15ರಂದು ಕೊಲ್ಲೂರಿನ ಶ್ರೀ ನಿತ್ಯಾನಂದ ಮಠದಲ್ಲಿ ನಿತ್ಯಾನಂದರ ನೇರ ಶಿಷ್ಯರಾದ, ಅಂತಿಮ ಕೊಂಡಿಯಾಗಿದ್ದ ಶ್ರೀ ವಿಮಲಾನಂದ ಸ್ವಾಮೀಜಿಗಳ ಆರಾಧನಾ ಮಹೋತ್ಸವವು ಅನನ್ಯವಾದ ಭಕ್ತಿ ಪರವಶತೆಯೊಂದಿಗೆ ನಡೆಯಿತು.

ಉತ್ತರ ಭಾರತದ ಉಜ್ಜಯಿನಿಯಿಂದ ಆಗಮಿಸಿದ ತ್ರಿಶೂಲ, ಕಮಂಡಲ ಹಿಡಿದ ದೇಹವಿಡೀ ವಿಭೂತಿ ಬಳಿದುಕೊಂಡಿದ್ದ ವಿಶೇಷ ಸಾಧಕರುಗಳಾದ ನಾಗಾ ಸಾಧುಗಳು, ಉಜ್ಜಯಿನಿ ಮಠದ ಸ್ವಾಮೀಜಿಗಳು, ಉತ್ತರ ಕರ್ನಾಟಕದ ಬೈಲಹೊಂಗಲದಿಂದ ಆಗಮಿಸಿದ ವಿಜಯಾನಂದ ಸ್ವಾಮೀಜಿಗಳು, ಬ್ರಹ್ಮಪುರಿ ಸ್ವಾಮೀಜಿಗಳು, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಗಳು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ತಂತ್ರಿಗಳೂ, ಹಿರಿಯ ಅರ್ಚಕರೂ ಆದ ಮಂಜುನಾಥ ಅಡಿಗರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಶಿವರಾಮು, ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ತಿಮರೋಡಿ ಮಹೇಶ್ ಶೆಟ್ಟಿ, ಕೇರಳದ ಕಾಞಂಗಾಡ್ ಶ್ರೀ ನಿತ್ಯಾನಂದ ಆಶ್ರಮದ ಅಧ್ಯಕ್ಷರಾದ ಕೊಡವೂರು ದಿವಾಕರ ಶೆಟ್ಟಿ, ಉಡುಪಿ ಶ್ರೀ ನಿತ್ಯಾನಂದ ಮಠದ ಅಧ್ಯಕ್ಷರಾದ ಎರ್ಮಾಳ್ ಶಶಿಧರ ಶೆಟ್ಟಿ, ಹಿಂದೂ ಯುವ ಸೇನೆಯ ನಾಯಕರಾದ ಶಿವ ಕುಮಾರ್, ತುಳು ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರಸಿದ್ದ ಕಲಾವಿದ, ನಿರ್ದೇಶಕ, ನಿರ್ಮಾಪಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್, ಮೂಡುಬೆಳ್ಳೆ ನಿತ್ಯಾನಂದ ಮಂದಿರದ ಸಂಚಾಲಕರಾದ ಶಿವಾಜಿ ಸುವರ್ಣರಲ್ಲದೆ ಉತ್ತರ ಕನ್ನಡ ಮತ್ತು ವಿವಿಧೆಡೆಗಳ ನಿತ್ಯಾನಂದ ಮಂದಿರದ ಮುಖ್ಯಸ್ಥರು ಹಾಗೂ ದೊಡ್ಡ ಸಂಖ್ಯೆಯ ಮಹಿಳೆಯರ ಸಹಿತ ನೂರಾರು ಜನ ನಿತ್ಯಾನಂದ ಸ್ವಾಮೀಜಿಗಳ ಭಕ್ತರು ಆದಿತ್ಯವಾರದ ಭಾವಪೂರ್ಣವಾದ ಆರಾಧನೋತ್ಸವಕ್ಕೆ ಸಾಕ್ಷಿಯಾದರು, ಕೃತಾರ್ಥರಾದರು.

ಆರಾಧನೋತ್ಸವದಲ್ಲಿ ಭಾಗಿಗಳಾಗಿ ಧನ್ಯತೆ ಅನುಭವಿಸಲು ಬೆಳಗ್ಗೆ ಕೊಲ್ಲೂರಿಗೆ ಆಗಮಿಸಿದ ಸ್ವಾಮೀಜಿಗಳು ಹಾಗೂ ನಿತ್ಯಾನಂದರ ಪ್ರಮುಖ ಭಕ್ತರು ಮೊದಲಿಗೆ ಹಿರಿಯ ತಂತ್ರಿಗಳೂ, ಅರ್ಚಕರೂ ಆದ ಮಂಜುನಾಥ ಅಡಿಗರ ಮನೆಗೆ ತೆರಳಿ ಅವರ ಜೊತೆ ಮಾತುಕತೆ ನಡೆಸಿದರು. ದೇವಸ್ಥಾನದ ಬಳಿ ಯಾರನ್ನಾದರೂ ಸಮಾಧಿ ಮಾಡಬಾರದು ಎಂಬ ಬಗ್ಗೆ ಯಾವುದೇ ಧಾರ್ಮಿಕ ಗ್ರಂಥದಲ್ಲೂ ಯಾವುದೇ ದಾಖಲೆಗಳಿಲ್ಲ. ಯತಿ-ಸನ್ಯಾಸಿಗಳಿಗೆ ಮಡಿ-ಮೈಲಿಗೆಗಳಿಲ್ಲ ಎಂಬ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಕೊಲ್ಲೂರು ದೇವಸ್ಥಾನದ ಸುತ್ತ ಮುತ್ತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರನ್ನು ಸಮಾಧಿ ಮತ್ತು ದಹನ ಮಾಡಿದ್ದಕ್ಕೆ ಸಾಕಷ್ಟು ಸಾಕ್ಷಿಗಳಿವೆ ಎಂಬಿತ್ಯಾದಿಗಳನ್ನು ಸಾಕ್ಷ್ಯಾಧಾರಗಳ ಸಹಿತ ಅಡಿಗರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ದೇವಸ್ಥಾನದ ಪರಿಸರದಲ್ಲಿ ಉತ್ಖನನ ನಡೆಸಿದ್ದೇ ಆದಲ್ಲಿ ಬಹಳಷ್ಟು ಅಸ್ತಿಗಳು ಲಭಿಸಬಹುದು ಎಂದು ಯಾವುದೇ ಮುಲಾಜೂ ಇಲ್ಲದೆ ಸ್ಪಷ್ಟವಾಗಿ ಹೇಳಿದರು. ತಮ್ಮ ಮಾತುಗಳಿಗೆ ಪೂರಕವಾಗಿ ಹತ್ತಾರು ಧಾರ್ಮಿಕ
ಗ್ರಂಥಗಳನ್ನು ಅಡಿಗರು ಕೇಮಾರು ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.

ಬೈಲಹೊಂಗಲದ ವಿಜಯಾನಂದ ಸ್ವಾಮೀಜಿಗಳು, ಕೊಲ್ಲೂರು ವಿಮಲಾನಂದ ಸ್ವಾಮೀಜಿಗಳು ನಿತ್ಯಾನಂದ ಸ್ವಾಮೀಜಿಗಳಿಂದ ಧೀಕ್ಷೆ ಪಡೆದುದರ ಬಗ್ಗೆ ಪುಸ್ತಕಗಳಲ್ಲಿ ಈ ಹಿಂದೆಯೇ ಉಲ್ಲೇಖಿತವಾಗಿರುವ ಕೆಲವು ಪುಸ್ತಕಗಳನ್ನು ಪ್ರಮುಖರ ಹಾಗೂ ಮಾಧ್ಯಮಗಳ ಮುಂದೆ ಪ್ರದರ್ಶಿಸುವ ಮೂಲಕ ಎದುರಾಳಿಗಳ ಬಾಯಿಗೆ ಬೀಗ ಹಾಕಲು ತಮ್ಮಲ್ಲಿ ಸಾಕಷ್ಟು ದಾಖಲಾತಿಗಳಿವೆ ಎನ್ನುವುದನ್ನು ಬಹಿರಂಗಪಡಿಸಿದರು.

ಮಂಜುನಾಥ ಅಡಿಗರ ಮನೆಯಿಂದ ಪ್ರಮುಖರು ದೇವಸ್ಥಾನಕ್ಕೆ ತೆರಳಿ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಾಂತಾಯರನ್ನು ಮುಖಾಮುಖಿಯಾದರು. ನಂತವಿಮಲಾನಂದ ಸ್ವಾಮೀಜಿ, ಶ್ರೀ ಸದ್ಗರು ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ, ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಸಮಾಧಿ ವಿವಾದರ ನಿತ್ಯಾನಂದ ಮಠಕ್ಕೆ ತೆರಳಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚಿತ್ರಗಳು: ಶ್ರೀರಾಮ ದಿವಾಣ.
[kolloor, kolloor news, sri mookambika temple kolloor, sri nithyananda mandir, sri nithyananda temple, sri nithyananda matth,
http://www.udupibits.in, http://www.udupibits.com, sri vimalananda swameeji, ಸಮಾಧಿ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s