ಅತ್ಯಾಚಾರ ತಡೆ ಹೊಣೆ: ಅಧಿಕಾರಿಗಳು ವಿಮುಖ

Posted: ಜೂನ್ 22, 2014 in Uncategorized

ಜಿನೀವಾ (ಎಎಫ್‌ಪಿ): ‘ಭಾರತದ ಕಾನೂನು ಅನುಷ್ಠಾನ ಸಂಸ್ಥೆಗಳು ಹಾಗೂ ನ್ಯಾಯಾಂಗ ಇಲಾಖೆಗಳು ದೇಶದಲ್ಲಿ ಹೆಣ್ಣು­ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ
ದೌರ್ಜನ್ಯ­ತಡೆ­ಗಟ್ಟು­ವಲ್ಲಿ ತಮ್ಮ ಜವಾಬ್ದಾರಿ­ಯಿಂದ ವಿಮುಖವಾಗಿವೆ’ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಶುಕ್ರವಾರ ಹೇಳಿದೆ.

‘ದೇಶದಲ್ಲಿ ನಿರಂತರವಾಗಿ ನಡೆ­ಯು­ತ್ತಿ­ರುವ ಹೆಣ್ಣು­ಮಕ್ಕಳ ಮೇಲಿನ
ದೌರ್ಜನ್ಯ­­ಗಳನ್ನು ತಡೆ­ಗಟ್ಟುವಲ್ಲಿ ಅಧಿ­ಕಾರಿ­­­ಗಳು ಕರ್ತವ್ಯ­ಲೋಪ
ಎಸಗು­ತ್ತಿದ್ದಾರೆ’ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಉಪಾಧ್ಯಕ್ಷ ಬೆನ್ಯಂ ಮೆಜ್ಮರ್‌ ಹೇಳಿದ್ದಾರೆ.

ದೆಹಲಿಯಲ್ಲಿ 2012ರ ಡಿಸೆಂಬರ್‌­ನಲ್ಲಿ ವಿದ್ಯಾ­ರ್ಥಿನಿ ಮೇಲೆ ನಡೆದ ಅತ್ಯಾ­ಚಾರದ ಬಳಿಕ ದೇಶಕ್ಕೆ ಅಂಟಿ­ಕೊಂಡ ಕಳಂಕದಿಂದ ಹೊರ­ಬರಲು ಭಾರತಕ್ಕೆ ಸಾಧ್ಯವಾಗಿಲ್ಲ. ಇದು ದೇಶ­ದೊ­ಳಗೆ ಸಾಮೂ­ಹಿಕ ಪ್ರತಿಭಟನೆಗೆ ಕಾರ­ಣ­­­ವಾಗಿತ್ತು. ಭಾರತ­ದಲ್ಲಿ ಮಹಿಳೆ­­­­ಯ­ರನ್ನು ನೋಡಿ­­ಕೊಳ್ಳುವ ಬಗ್ಗೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು.

ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದಗಳ ಅನುಷ್ಠಾನದ ಮೇಲ್ವಿ­ಚಾ­ರಣೆ­ಗಾಗಿ ವಿಶ್ವ ಸಂಸ್ಥೆಯು 18 ತಜ್ಞರ ಸಮಿತಿಯನ್ನು ಹೊಂದಿದೆ. ಸಮಿತಿಯು ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಅಧಿಕಾರಿಗಳ ವಿಚಾ­­ರಣೆ ನಡೆಸಿ ವರದಿಯನ್ನು ಸಿದ್ಧಪಡಿಸಿದೆ.

‘ವ್ಯಾಪಕವಾದ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ನಿರ್ಲಕ್ಷ್ಯ ಆಘಾತ ಹುಟ್ಟಿಸುವಂತಿದೆ’ ಎಂದು ವರದಿ ಹೇಳಿದೆ.

‘ಸರ್ಕಾರಿ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 22 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ವರದಿ­ಯಾಗು­ತ್ತದೆ. ಕಳೆದ ವರ್ಷ ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯದ ಬಳಿಕ 2013ರಲ್ಲಿ ಅತ್ಯಾಚಾರ ತಡೆಗೆ ಕಠಿಣ ಕಾಯ್ದೆ­ಯನ್ನು ಸರ್ಕಾರ ಜಾರಿ ಮಾಡಿತ್ತು. ಈ ಕಾಯ್ದೆಯಲ್ಲಿ ಪೊಲೀ­ಸರಿಗೆ ಜಾಗೃತಿ ಮೂಡಿಸುವ ಅಂಶವೂ ಇದೆ. ಇಷ್ಟೆಲ್ಲ ಆಗಿದ್ದರೂ ಮಹಿಳೆ­ಯರು, ಮಕ್ಕಳ ಮೇಲಿನ ದೌರ್ಜನ್ಯ­ವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ಸಮಿತಿ ವಿಷಾದ ವ್ಯಕ್ತಪಡಿಸಿದೆ.

ಕಾನೂನು ಅನುಷ್ಠಾನದಲ್ಲಿ ಭಾರಿ ಸಮಸ್ಯೆ ಇದೆ ಎಂದು ಸಮಿತಿಯು ಹೇಳಿದೆ. ಅತ್ಯಾಚಾರದ ಬಗ್ಗೆ ಲಘು­ವಾದ ಹೇಳಿಕೆಗಳನ್ನು ನೀಡಿರುವ ರಾಜಕಾರಣಿಗಳ ಮನಸ್ಥಿತಿಯನ್ನೂ ಸಮಿತಿಯು ಟೀಕಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s