ಅಧಿಕಾರಿಗಳಿಂದ ಆಸ್ಪತ್ರೆಗಳ ಮೇಲೆ ದಾಳಿ: ನಕಲಿ ವೈದ್ಯರು ವಶಕ್ಕೆ

Posted: ಜೂನ್ 22, 2014 in Uncategorized

ಬೆಂಗಳೂರು: ತಾಲೂಕಿನ ವಿಜಯಪುರ ಹೋಬಳಿ ಹಾಗೂ ಕುಂಧಾಣ ಹೋಬಳಿಯ ಹಲವು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ ತಾಲೂಕು ವೈದ್ಯಾಧಿಕಾರಿ ಪ್ರಿಯಲತಾ ಹಾಗೂ ಇನ್ಸ್‌ಪೆಕ್ಟರ್ ಮಹೇಶ್‌ಕುಮಾರ್ ತಂಡದವರು ಪರವಾನಿಗೆ ರಹಿತವಾಗಿ ಆಲೋಪತಿ ಚಿಕಿತ್ಸೆ ನೀಡುತ್ತಿದ್ದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೋಮಿಯೋಪತಿ, ಆರ್ಯುರ್ವೇದ, ಆರ್.ಎಂ.ಪಿ.ಯ ವೈದ್ಯರು ಹಾಗೂ ವೈದ್ಯರೇ ಅಲ್ಲದವರು ಎಂಬಿಬಿಎಸ್ ಮಾಡಿದ ವೈದ್ಯರೆಂದು ಹೇಳಿಕೊಂಡು ಖಾಸಗಿ ಆಸ್ಪತ್ರೆಗಳನ್ನು ತೆರೆದು ಜನರನ್ನು ವಂಚಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಮೊದಲು ವಿಶ್ವನಾಥಪುರದಲ್ಲಿನ ಹೆಲ್ತ್ ಚೆಕ್ ವೆಲ್‌ನೆಸ್ ಎವಲ್ಯೂಶನ್ ಎಂಬ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸ್ಥಳದಲ್ಲಿ ತೋರಿಸದ ಆಸ್ಪತ್ರೆಯ ವೈದ್ಯ ಡಾ.ರುದ್ರೇಗೌಡ ಎಂಬವರನ್ನು ವಶಕ್ಕೆ ತೆಗೆದುಕೊಂಡರು. ನಂತರ ಅಲ್ಲಿಂದ ಹೊರಟು ಬಿ.ಜಿ.ಎಸ್ ನಗರದ (ಕೊಯಿರ ಕ್ರಾಸ್) ಲಕ್ಷ್ಮೀ ಕ್ಲಿನಿಕ್ ಮೇಲೆ ದಾಳಿ ಮಾಡಿದಾಗ ಅಲ್ಲಿ ಬಿಎಂಎಸ್ ವೈದ್ಯನೆನಿಸಿಕೊಂಡಿರುವ ಮನೋಹರ್ ಎಂಬವರು ಇಲ್ಲದೆ, ಅವರ ಶಿಷ್ಯ ನರಸಿಂಹ ಎಂಬಾತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದ್ದು, ಮನೋಹರ ಪೊಲೀಸರ ಮೊಬೈಲ್ ಕರೆಗೆ ಸಿಗದ ಕಾರಣ ನರಸಿಂಹ ಎಂಬವನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಬೀಗ ಹಾಕಲಾಯಿತು.

ಮುಂದೆ ವೆಂಕಟಗಿರಿಕೋಟೆ, ವಿಜಯಪುರದ ಕಡೆಗೆ ಹೊರಟ ವೈದ್ಯಾಧಿಕಾರಿಯನ್ನೊಳಗೊಂಡ ತಂಡ ಬರುವ ಸುಳಿವನ್ನರಿತು ಅಲ್ಲಿ ಕೆಲವು ಆಸ್ಪತ್ರೆಗಳು ಬೀಗ ಹಾಕಿದ್ದವು. ಈ ಸಮಯದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ, ನಾವು ಕಳೆದ ವರ್ಷವೂ ಸಹ ಇದೇ ರೀತಿ ದಾಳಿ ಮಾಡಿ ನಕಲಿ ವೈದ್ಯರಿಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದೆವು. ಕಳೆದ ವಾರ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳನ್ನು ತಂದು ತೋರಿಸುವಂತೆ ಹೇಳಿದ್ದೆವು. ಸರಿಯಾದ ಪರವಾನಿಗೆ ಇಲ್ಲದೆ ಆಲೋಪತಿ ಚಿಕಿತ್ಸೆ ನೀಡುವ ಆಸ್ಪತ್ರೆ ಹಾಗೂ ವೈದ್ಯರೆನಿಸಿಕೊಂಡವರ ಮೇಲೆ ದಾಳಿ ಮುಂದುವರಿ ಸಲಾಗುವುದು ಎಂದು ಎಚ್ಚರಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s